ಮನಸಿನ ಮರೆಯಲಿ ಹೊಸ ಲವ್‌ಸ್ಟೋರಿ
Team Udayavani, Aug 18, 2017, 6:20 AM IST
ಈ ಹಿಂದೆ “ಮಿಸ್ ಮಲ್ಲಿಗೆ’, “ಆಸ್ಕರ್’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಕೃಷ್ಣ ಅಲಿಯಾಸ್ ಆಸ್ಕರ್ ಕೃಷ್ಣ ಈಗ ಮತ್ತೂಂದು ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಆ ಚಿತ್ರಕ್ಕೆ “ಮನಸಿನ ಮರೆಯಲಿ’ ಎಂಬ ಹೆಸರನ್ನೂ ಇಟ್ಟಿದ್ದಾರೆ. ಇತ್ತೀಚೆಗೆ ಕೃಷ್ಣ ಜನ್ಮಾಷ್ಟಮಿ ದಿನದಂದು ರಾಧಾಕೃಷ್ಣ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತು. ಕಾಂಗ್ರೆಸ್ ಮುಖಂಡ ಭೈರತಿ ಸುರೇಶ್ ಕ್ಲಾಪ್ ಮಾಡಿದ್ದಾರೆ.
ಈ ಚಿತ್ರದ ಮೂಲಕ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ನಿರ್ದೇಶಕರು. ಕಿಶೋರ್ ಯಾದವ್ ಹಾಗೂ ದಿವ್ಯಾಗೌಡ ನಾಯಕ, ನಾಯಕಿಯರು. ಇದೊಂದು ಅಪ್ಪಟ ಪ್ರೇಮಕಥೆವುಳ್ಳ ಚಿತ್ರವಂತೆ. ಅಂದಹಾಗೆ, ಇದುವರೆಗೆ ವಿವಾದಾತ್ಮಕ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ನಿರ್ದೇಶಕ “ಆಸ್ಕರ್’ ಕೃಷ್ಣ, ಮೊದಲ ಸಲ ಪ್ರೇಮಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಒಬ್ಬ ಬೇಜವಾಬ್ದಾರಿ ಹುಡುಗ ಹಾಗೂ ಪಕ್ಕದ ಮನೆಯ ಹುಡುಗಿ ಮಧ್ಯೆ ನಡೆಯುವ ಲವ್‌ಸ್ಟೋರಿ ಚಿತ್ರದ ಹೈಲೈಟ್ ಅಂತೆ.
“ಬೆಂಗಳೂರು, ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ. ಮನೆಯವರ ಹಾಗೂ ಊರ ಜನರ ಪಾಲಿಗೆ ಬೇಜವಾಬ್ದಾರಿ ಹುಡುಗ ಎನಿಸಿಕೊಂಡ ನಾಯಕ ನಟ ಪಕ್ಕದ ಮನೆಗೆ ಬಂದ ಸುಂದರ ಹುಡುಗಿಯ ಪ್ರೇಮದಲ್ಲಿ ಬಿದ್ದಾಗ ಅವರ ಪ್ರೀತಿ ಕೊನೆಗೆ ಉಳಿಯುತ್ತಾ ಇಲ್ಲವಾ ಎಂಬುದೇ ಚಿತ್ರದ ಕಥೆ. ಇನ್ನು, ನನ್ನ ಪುತ್ರ ರಾಕಿನ್ ಹೆಸರಿನ ಬ್ಯಾನರ್ ಆರಂಭಿಸಿ ಆ ಮೂಲಕ ಸಿನಿಮಾ ನಿರ್ಮಿಸುತ್ತಿದ್ದೇನೆ. ಪತ್ನಿ ಆರ್. ಶಬೀನಾ ಹಾಗೂ ಕಿಂಗ್ ಲಿಂಗರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗಜರಾಜಗೌಡ ಎಕ್ಸಿಕ್ಯೂಟೀವ್ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ಆಸ್ಕರ್ ಕೃಷ್ಣ.
ನಾಯಕ ಕಿಶೋರ್‌ಗೆ ಇದು ಮೊದಲ ಅನುಭವ. “ನನಗೆ ಕಳೆದ ಎರಡು ವರ್ಷಗಳಿಂದ ನಿರ್ದೇಶಕರು ಗೆಳೆಯರಾಗಿದ್ದಾರೆ. ಇದೊಂದು ಕಾಮನ್ ಲವ್‌ಸ್ಟೋರಿಯಂತೆ ಕಂಡು ಬಂದರೂ, ವಿಶೇಷ ಸಂದೇಶ ಚಿತ್ರದಲ್ಲಿದೆ’ ಅನ್ನುತ್ತಾರೆ ಕಿಶೋರ್. ನಾಯಕಿ ದಿವ್ಯಗೌಡ, ಪಾತ್ರ ಹಾಗೂ ಕಥೆ ಕುರಿತು ಹೇಳಿಕೊಂಡರು. ಚಿತ್ರಕ್ಕೆ ತ್ಯಾಗರಾಜ್ ಸಂಗೀತವಿದೆ. ಪವನ್ ಕುಮಾರ್ ಅವರ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Ayogya 2: ಇಲ್ಲಿ ಎಲ್ಲವೂ ಡಬಲ್ ಆಗಿರುತ್ತದೆ…ಇದು ʼಅಯೋಗ್ಯʼನ ಭರವಸೆ
Sandalwood: ರಂಗೇರಲಿದೆ ಜನವರಿ; ಹೊಸ ವರ್ಷದ ಮೊದಲ ತಿಂಗಳಲ್ಲಿ ಸಿನಿ ಮಿಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
CT Ravi ಬಂಧನ ಪ್ರಕರಣ; ಗ್ರಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.