ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ಧನ ಸಹಾಯ
Team Udayavani, Aug 18, 2017, 7:45 AM IST
ಉಡುಪಿ: ಶಿವಮೊಗ್ಗ ಜಿಲ್ಲೆಯ ಶಾಹಿನಾ ಅವರ ಪುತ್ರಿ ಮೆಹಕ್ ಕ್ಯಾನ್ಸರ್ ಚಿಕಿತ್ಸೆಗೆ ಎಂ.ಜಿ.ಎಂ. ಕಾಲೇಜಿನ ವಿದ್ಯಾರ್ಥಿಗಳಿಂದ ಆ. 17ರಂದು 1.12 ಲ.ರೂ. ಚೆಕ್ ವಿತರಿಸಲಾಯಿತು.
ಚಿಕಿತ್ಸೆಗೆ ಸುಮಾರು ಹತ್ತು ಲಕ್ಷ ರೂಪಾಯಿ ಅಗತ್ಯವಿದೆ ಎಂದು ಶಾಹಿನಾ ಕುಟುಂಬ ತಿಳಿಸಿದೆ. ಈ ಪೈಕಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮಾನವೀಯತೆಯನ್ನು ಮೆರೆದು 1.12 ಲ.ರೂ. ಸಂಗ್ರಹವಾಗಿದೆ. ವಿದ್ಯಾರ್ಥಿಗಳ ಈ ಕಾಳಜಿ ಬಗ್ಗೆ ತಮಗೆ ಅಭಿಮಾನವಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕುಸುಮಾ ಕಾಮತ್ ಹೇಳಿದರು. ಫ್ರ್ಯಾಗ್ರಾನ್ಸ್ ಆಫ್ ಹುಮ್ಯಾನಿಟಿಯ ನೇತೃತ್ವದಲ್ಲಿ ಅಖೀಲ ಕಾಲೇಜು ವಿದ್ಯಾರ್ಥಿ ಯೂನಿಯನ್ ಸೇರಿ ಧನ ಸಂಗ್ರಹದ ಮುತುವರ್ಜಿ ವಹಿಸಿದ್ದವು. ಇದೇ ಸಂದರ್ಭದಲ್ಲಿ “ರೈನ್‌ಬೋ’ ಸಂಸ್ಥೆಯಿಂದಲೂ 15 ಸಾವಿರ ರೂಪಾಯಿ ಧನ ಸಹಾಯವನ್ನು ಮಾಡಲಾಯಿತು.
ಪ್ರಾಧ್ಯಾಪಕ ಪ್ರೊ| ಮಯ್ಯ, ಉಪನ್ಯಾಸಕರಾದ ಸುಚೀತ್ ಕೋಟ್ಯಾನ್, ಮಂಜುನಾಥ ಕಾಮತ್, ವಿದ್ಯಾರ್ಥಿ ನಾಯಕರುಗಳಾದ ವಿಘ್ನೇಶ್ ಭಟ್, ಶ್ರೀಕಾಂತ ಪೈ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.