ರಾಷ್ಟ್ರೀಯ ನದಿ ಸಂರಕ್ಷಣೆಗೆ ಜಲ ಸಂಸತ್ ರಚನೆ
Team Udayavani, Aug 18, 2017, 7:55 AM IST
ವಿಜಯಪುರ: ದೇಶದ ನದಿಗಳ ಸಂರಕ್ಷಣೆಗಾಗಿ ಜಲ ನಾಯಕ-ಕಾರ್ಯಕರ್ತರನ್ನು ಒಳಗೊಂಡ 21 ಜಲ ಸಂಸತ್ಗಳನ್ನು ರಚಿಸಲಾಗಿದೆ. ನದಿಗಳ ನೈಸರ್ಗಿಕ ಹರಿವು ಸುಗಮಕ್ಕಾಗಿ ಆಯಾ ನದಿ ಪಾತ್ರದ ಜಲ ಕಾರ್ಯಕರ್ತರನ್ನೇ ಸಂಸತ್ಗೆ ನೇಮಿಸಿದೆ.
ನಗರದಲ್ಲಿ ನಡೆಯುತ್ತಿರುವ “ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ’ದ ಸಂದರ್ಭದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಜಲಗಾಂಧಿ ಡಾ| ರಾಜೇಂದ್ರಸಿಂಗ್ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಡಿ.ಪಿ.ಬಿರಾದಾರ, ಗಂಗಾ, ಮಹದಾಯಿ, ಕಾವೇರಿ, ಕೃಷ್ಣಾ, ಗೋದಾವರಿ, ಮಂದಾಕಿನಿ, ಮಹೇಶ್ವರ ನದಿ ಸೇರಿ ದೇಶದ ಎಲ್ಲ ನದಿಗಳ ಸಂರಕ್ಷಣೆಗಾಗಿ ಈ ಸಂಸತ್ ಸಮಿತಿ ನೆರವಾಗಲಿದೆ ಎಂದರು.
ನಗರೀಕರಣ, ಕೈಗಾರಿಕೀಕರಣದಂತಹ ವ್ಯವಸ್ಥೆ ನದಿಗಳ ಜೀವಕ್ಕೆ ಆಪತ್ತು ತಂದಿದೆ. ಇದರಿಂದ ಮನು ಸಂಕುಲಕ್ಕೂ ಸಂಚಕಾರ ಬಂದಿದೆ. ನದಿಗಳ ನೈಸರ್ಗಿಕ ಹರಿವಿನ ಪ್ರದೇಶಕ್ಕೂ ಸಂಚಕಾರ ತಂದಿದ್ದು ನದಿಯ ಹಕ್ಕಿಗೂ ಚ್ಯುತಿ ಬಂದಿದೆ. ಇದರಿಂದ ನದಿ ಪಾತ್ರದಲ್ಲಿನ ನಾಗರಿಕತೆ, ಸಂಸ್ಕೃತಿಗಳೂ ಅವಸಾನ ಗೊಳ್ಳುತ್ತಿವೆ. ಹೀಗಾಗಿ ನದಿಗಳ ಹಕ್ಕು ರಕ್ಷಣೆಗಾಗಿ ಜಲ ಸಂಸತ್ ರಚಿಸಲಾಗಿದೆ ಎಂದರು. ಜಲ ಸಮಾವೇಶದಲ್ಲಿ ರಚಿಸಲಾಗಿರುವ ಜಲ ಸಂಸತ್ ಗಳು ಆಯಾ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳ ಜೊತೆ ನದಿಗಳ ಸಂರಕ್ಷಣೆ ಕಾರ್ಯಕ್ರಮ ರೂಪಿಸಿ, ಅನುಷ್ಠಾನಕ್ಕೆ ತರಲಿವೆ. ನದಿ ಮಾಲಿನ್ಯ ತಡೆಗೆ ಅಗತ್ಯ ಕಠಿಣ ಕಾನೂನು ರೂಪಿಸಲು ಆಡಳಿತ ವ್ಯವಸ್ಥೆ ಮೇಲೆ ಒತ್ತಡ ಹೇರಲಿದೆ ಎಂದು ಜಲ ಸಂಸತ್ ರಚನೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.
ಅವೈಜ್ಞಾನಿಕ ನೀರು ಬಳಕೆಗೆ ಕಡಿವಾಣ ಹಾಕಿ: ಮೋದಿ: ಉತ್ತರ ಪ್ರದೇಶದ ಐಪಿಎಸ್ ಅಧಿ ಕಾರಿ ಮಹೇಂದ್ರ ಮೋದಿ ಮಾತನಾಡಿ, ಆಧುನಿಕತೆಯ ಭರಾಟೆಯ ನೆಪದಲ್ಲಿ ಮನುಷ್ಯ ನೀರಿನ ಅವೈಜ್ಞಾನಿಕ ಬಳಕೆಗೆ ಮುಂದಾಗಿರುವುದು ಹಾಗೂ
ಜಲಮೂಲಗಳಿಗೆ ಧಕ್ಕೆ ತರುತ್ತಿರುವುದು ಜಲ ಸಮಸ್ಯೆಗೆ ಕಾರಣವಾಗುತ್ತಿದೆ. ತಕ್ಷಣ ಎಚ್ಚೆತ್ತುಕೊಂಡು ನೀರಿನ ಅವೈಜ್ಞಾನಿಕ ಬಳಕೆಗೆ ಕಡಿವಾಣ ಹಾಕದಿದ್ದರೆ ಭವಿಷ್ಯಕ್ಕೆ ಜಲ ಸಮಸ್ಯೆ ಇನ್ನೂ ಮಾರಕವಾಗಲಿದೆ ಎಂದು ಹೇಳಿದರು. ಜಲ ಸಮಾವೇಶದ ಎರಡನೇ ದಿನವಾದ ಗುರುವಾರ “ತಾಂತ್ರಿಕ ಗೋಷ್ಠಿ’ಯಲ್ಲಿ ಅವರು ವಿಷಯ ಮಂಡಿಸಿದರು. ಆಧುನಿಕತೆ ಸಂದರ್ಭದಲ್ಲಿ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಜಲ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ ಎಂದರು.
ಸತತವಾಗಿ ಮೂರು ದಶಕಗಳಿಂದ ಉತ್ತರಖಂಡದ ನದಿಗಳಲ್ಲಿ ಜೀವ ತುಂಬುವ ಕಾರ್ಯವನ್ನು ವಾರಣಾಸಿಯ ಗಂಗಾ ಮಹಾಸಭೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಪ್ರತಿ 10 ಕಿ.ಮೀ.ಅಂತರದಲ್ಲಿ ಗಂಗೆಯ ನೀರನ್ನು ಪರಿಶೀಲಿಸುವ ಕುರಿತು ಅಧ್ಯಯನ ಕೈಗೊಳ್ಳಲಾಗಿದೆ. ಉತ್ತರಖಂಡ, ಹಿಮಾಚಲ ಪ್ರದೇಶ, ನಾಗಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿನ ರೈತರ ಜೊತೆಗೆ ನಿರಂತರ ನದಿಗಳನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಗಂಗಾ ನದಿಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ.
– ಬಸವರಾಜ ಪಾಟೀಲ, ರಾಷ್ಟ್ರೀಯ
ಸ್ವಾಭಿಮಾನ ಆಂದೋಲನ ಕಾರ್ಯದರ್ಶಿ.
ಪರಸ್ಪರ ಸೌಹಾರ್ದ ಮೂಲಕ ಅಂತಾರಾಜ್ಯ ಜಲ ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜಲ ಸಂಪತ್ತಿದ್ದರೂ ಸದ್ಬಳಕೆ ಮಾಡಿಕೊಳ್ಳಲಾಗದೆ ಭಾರತದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ.
– ಆನಂದ ಘೋಸಾವಳಿ, ಮಹಾರಾಷ್ಟ್ರದ
ಜಲ ಸಾಕ್ಷಾತ್ ಕೇಂದ್ರದ ಮುಖ್ಯಸ್ಥ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.