ರಂಗಭೂಮಿಯ ಭೀಷ್ಮ, ನಾಡೋಜ ಏಣಗಿ ಬಾಳಪ್ಪ ಇನ್ನಿಲ್ಲ
Team Udayavani, Aug 18, 2017, 10:08 AM IST
ಬೆಳಗಾವಿ: ಶತಾಯುಷಿ, ಹಿರಿಯ ರಂಗ ಕಾಲಾವಿದ ಏಣಗಿ ಬಾಳಪ್ಪ ಅವರು ಸವದತ್ತಿಯ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 103 ವರ್ಷ ವಯಸ್ಸಾಗಿತ್ತು.
ವಾರ್ಧಕ್ಯದಿಂದ ಬಳಲುತ್ತಿದ್ದ ಅವರು ವರ್ಷದಿಂದ ಹಾಸಿಗೆ ಹಿಡಿದಿದ್ದು, 2 ದಿನಗಳ ಹಿಂದೆ ಕೋಮಾಕ್ಕೆ ಜಾರಿದ್ದರು .
ಬಾಳಪ್ಪ ಏಣಗಿಯ ಒಕ್ಕಲುತನದ ಲೋಕುರ ಮನೆತನದ ಕುಟುಂಬ ಕರಿಬಸಪ್ಪ ಮತ್ತು ಬಾಳಮ್ಮನವರ ಮಗನಾಗಿ 1914ರಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬಾಳಪ್ಪ ಹಣದ ಕೊರತೆಯಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ ಬೇಸಾಯ ಹಾಗೂ ಪಶುಪಾಲನೆ ಮಾಡಿಕೊಂಡಿದ್ದರು. ಹಳ್ಳಿಯ ಬಯಲಾಟ,ದೊಡ್ಡಾಟದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅವರು ಲವ ಕುಶ ನಾಟಕ ನೋಡಿದ ಮೇಲೆ ರಂಗ ಭೂಮಿಯತ್ತ ಆಕರ್ಷಿತರಾದರು.
ಸಣ್ಣ ವಯಸ್ಸಿನಲ್ಲಿ ಊರಿನ ಭಜನಾ ಮಂಡಳಿಯಲ್ಲಿ ಹಾಡುತ್ತಿದ್ದರು.ಇದನ್ನು ಗಮನಿಸಿ ಗುರುಸಿದ್ದಯ್ಯ ಎಂಬುವವರು ಮೊತ್ತಮೊದಲಿಗೆ ಇವರನ್ನು ‘ಲವ ಕುಶ’ ನಾಟಕದಲ್ಲಿ ಲವನ ಪಾತ್ರದ ಮೂಲಕ ರಂಗ ಪ್ರವೇಶ ಮಾಡಿಸಿದ್ದರು. ಆಕರ್ಷಣೀಯ ಮೈಕಟ್ಟು,ಸುಮಧುರ ಕಂಠದವನ್ನೂ ಹೊಂದಿದ್ದ ಬಾಳಪ್ಪನವರು ಪಾತ್ರಗಳಿಗೆ ಹೆಚ್ಚುಗಾರಿಕೆ ನೀಡಿದರು.
10ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ರಂಗಭೂಮಿ ಪ್ರವೇಶಿಸಿದ ಅವರು ಸ್ತ್ರೀ ಪಾತ್ರಗಳ ಮೂಲಕವೂ ಜನಜನಿತರಾದರಲ್ಲದೆ ಅಪಾರ ಖ್ಯಾತಿಯನ್ನು ಪಡೆದರು. ‘ಕಿತ್ತೂರು ರುದ್ರಮ್ಮ’ ನಾಟಕದ ರುದ್ರಮ್ಮನ ಪಾತ್ರ ಇವರ ಮೊಟ್ಟಮೊದಲ ಸ್ರೀಪಾತ್ರ. ಚಿಕ್ಕೋಡಿ ಸಿದ್ಧಲಿಂಗ ಸ್ವಾಮೀಜಿಯವರ ಕಂಪೆನಿಯ ಮಹಾನಂಜ ನಾಟಕದಲ್ಲಿ ಪ್ರಹ್ಲಾದನಾಗಿ ಮನೋಜ್ಞ ಅಭಿನಯ ನೀಡಿದ್ದರು, ರಂಗ ಭೂಮಿಯ ದಾಖಲೆಯಾಗಿತ್ತು.
ಕೌಸಲ್ಯೆಯ ಪಾತ್ರದಲ್ಲೂ ಬಹಳ ಯಶಸ್ಸನ್ನು ಕಂಡ ಅವರು ಕಂಪೆನಿ ಸ್ಥಗಿತಗೊಂಡ ಬಳಿಕ ‘ಅಬ್ಬಿಗೇರಿ ಕಂಪೆನಿ’ಯನ್ನು ಸೇರಿಕೊಂಡರು. ಅಲ್ಲಿ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದ ‘ಕಿತ್ತೂರು ರಾಣಿ ಚೆನ್ನಮ್ಮ ನಾಟಕ’ ಬ್ರಿಟಿಷ್ ಸರಕಾರದ ವಿರೋಧದಿಂದ ಲೈಸೆನ್ಸ್ ಕಳೆದುಕೊಂಡು ಕಂಪೆನಿ ನಿಂತಿತು. ಊರಿಗೆ ವಾಪಾಸಾಗುವ ಮನಸ್ಸಿಲ್ಲದ ಬಾಳಪ್ಪ ಅವರು ಸಿದ್ಧಲಿಂಗಸ್ವಾಮಿಗಳು ನಡೆಸುತ್ತಿದ್ದ ಮತ್ತೊಂದು ‘ಮಾರಿಕಾಂಬಾ ನಾಟಕ ಮಂಡಳಿ’ಗೆ ಸೇರಿಕೊಂಡರು.
ಹಲವು ವಿಡಂಬನಾ ನಾಟಕಗಳಲ್ಲಿ ನಟಿಸಿದ್ದ ಬಾಳಪ್ಪ ಅವರು ಬಸವೇಶ್ವರ ಪಾತ್ರದ ಮೂಲಕ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ಕನ್ನಡ ಚಿತ್ರಗಳಲ್ಲೂ ನಟಿಸಿದ್ದ ಬಾಳಪ್ಪ ಅವರು ಶಿವರಾಜ್ ಕುಮಾರ್ ಅಭಿನಯಿಸಿದ್ದ ಗಡಿ ಬಿಡಿ ಕೃಷ್ಣ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.
ನಾಡೋಜ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳು ಬಾಳಪ್ಪ ಅವರಿಗೆ ಸಂದಿವೆ.
ಬಾಳಪ್ಪ ನಿಧನಕ್ಕೆ ರಂಗಭೂಮಿಯ ಅನೇಕ ದಿಗ್ಗಜರು, ಸಿನಿ ರಂಗ ಮತ್ತು ರಾಜಕೀಯ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇವರ ಉತ್ತರಾಧಿಕಾರಿ ಎಂದು ಬಿಂಬಿತವಾಗಿದ್ದ ಪುತ್ರ ರಂಗ ನಟ, ನಿರ್ದೇಶಕ ಏಣಗಿ ನಟರಾಜ್ ಅವರು ಈಗಾಗಲೇ ವಿಧಿವಶರಾಗಿದ್ದಾರೆ.
ಕನ್ನಡ ಪರ ನಿಲುವು ಹೊಂದಿದ್ದ ಬಾಳಪ್ಪ ಅವರು ಸಮಾಜಮುಖೀ ಕಾರ್ಯಗಳಿಂದ ಮನೆ ಮಾತಾಗಿದ್ದರು.
ಏಣಗಿ ಗ್ರಾಮದಲ್ಲಿ ನಾಳೆ 11 ಗಂಟೆಯ ವೇಳೆಗೆ ಸ್ವಗೃಹದ ಬಳಿ ಅಂತ್ಯಕ್ರಿಯೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.