ಶಾಮನೂರು ರಸ್ತೆಯಲ್ಲಿ ಮತ್ತೆ ಬಾರ್‌ ಬೇಡ


Team Udayavani, Aug 18, 2017, 10:26 AM IST

18-DV-5.jpg

ದಾವಣಗೆರೆ: ನಗರದ ಪ್ರತಿಷ್ಠಿತ ವಸತಿ ಬಡಾವಣೆಗಳ ಮಧ್ಯದಲ್ಲಿರುವ ಶಾಮನೂರು ರಸ್ತೆಯಲ್ಲಿ ಹೊಸದಾಗಿ ಬಾರ್‌ಗಳಿಗೆ ಲೈಸೆನ್ಸ್‌ ನೀಡದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌.ಮಲ್ಲಿಕಾರ್ಜುನ್‌ ಅವರು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಸಿದ್ದವೀರಪ್ಪ ಬಡಾವಣೆಯ ನಿವಾಸಿಗಳ ಮನವಿಗೆ ಸ್ಪಂದಿಸಿದ ಸಚಿವರು, ಅಬಕಾರಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಶಾಮನೂರು ರಸ್ತೆಯಲ್ಲಿ ಹೊಸದಾಗಿ ಬಾರ್‌ಗಳಿಗೆ ಲೈಸೆನ್ಸ್‌ ನೀಡಬಾರದೆಂದು ತಿಳಿಸಿದರು. ಈಗಾಗಲೇ ಶಾಮನೂರು ರಸ್ತೆಯಲ್ಲಿ 10ಕ್ಕೂ ಹೆಚ್ಚು ಬಾರ್‌ ಅಂಡ್‌ ರೆಸ್ಟೋರೆಂಟ್‌ ಗಳಿದ್ದು, ಮತ್ತೆ ಬಾರ್‌ ಆರಂಭಿಸುವ ಯತ್ನ ನಡೆಯುತ್ತಿದೆ ಎಂಬುದಾಗಿ ನಿವಾಸಿಗಳು ಸಚಿವರ ಗಮನಕ್ಕೆ ತಂದರು. ಆಗ ಸಚಿವರು, ಹೊಸ ಬಾರ್‌ಗಳಿಗೆ ಅವಕಾಶ  ನೀಡುವುದನ್ನು ತಡೆಯುವುದರ ಜೊತೆಗೆ ಈಗ ಇರುವ ಬಾರ್‌ಗಳ ಸ್ಥಳಾಂತರಿಸುವ ಬಗ್ಗೆ ಪರಿಶೀಲನೆ ನಡೆಸಿ, ಕ್ರಮಕೈಗೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಿದ್ದವೀರಪ್ಪ ಬಡಾವಣೆಗೆ ಹೊಂದಿಕೊಂಡಿರುವ ಶಾಮನೂರು ರಸ್ತೆಯಲ್ಲಿನ ಬಾರ್‌ಗಳಿಂದ ಸ್ಥಳೀಯ ನಿವಾಸಿಗಳು ಓಡಾಡುವುದೇ ದುಸ್ತರವಾಗಿದೆ. ಈಗ ಮತ್ತೆ ಬಾರ್‌ ಆರಂಭಗೊಂಡರೆ ಸ್ಥಳೀಯರಿಗೆ ಇನ್ನಷ್ಟು ತೊಂದರೆ ಆಗಲಿದೆ. ಹಾಗಾಗಿ ಶಾಮನೂರು ರಸ್ತೆಯಲ್ಲಿ ಹೊಸ ಬಾರ್‌ಗಳಿಗೆ ಲೈಸೆನ್ಸ್‌ ನೀಡಬಾರದು ಹಾಗೂ ಬೇರೆಡೆ ಇರುವ ಬಾರ್‌ಗಳನ್ನು ಈ ರಸ್ತೆಗೆ ಸ್ಥಳಾಂತರಕ್ಕೆ ಅವಕಾಶ ನೀಡಬಾರದು ಎಂದು ಸಚಿವರಿಗೆ ನಿವಾಸಿಗಳು ಮನವಿ ಮಾಡಿದರು.

ಆರ್‌.ಕೆ. ಶಾಸ್ತ್ರಿ, ಪಾಲಿಕೆ 31ನೇ ವಾರ್ಡ್‌ ಸದಸ್ಯ ಜಿ.ಬಿ.ಲಿಂಗರಾಜ್‌, ಲಕ್ಷ್ಮಿ ನಾರಾಯಣ, ಶ್ರೀನಿವಾಸ್‌, ಎನ್‌.ಜಿ. ಅಣ್ಣಯ್ಯ, ಲಕ್ಷ್ಮಿಪತಿ, ಎಂ.ವಿ. ವೆಂಕಟೇಶ್‌, ರಘು, ನಿರಂಜನ್‌, ಮಾರುತಿ, ಗುರು, ಸಿಂಧೆರಾಜ್‌, ಡಾ| ಶಶಿಕಲಾ ಕೃಷ್ಣಮೂರ್ತಿ, ಶಿವಮೂರ್ತಿ, ಗಣೇಶ್‌ ಇತರರು ಮನವಿ ಸಲ್ಲಿಸುವ 
ಸಂದರ್ಭದಲ್ಲಿದ್ದರು.

ಟಾಪ್ ನ್ಯೂಸ್

police

Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್‌ ಸೋಮನ ವಿರುದ್ಧ ಕೇಸ್‌

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

1-lokk

Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!

MONEY (2)

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್‌ ಸೋಮನ ವಿರುದ್ಧ ಕೇಸ್‌

Lokayukta

Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

1-lokk

Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!

MONEY (2)

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.