ಸಿನ್ಸಿನಾಟಿ ಟೆನಿಸ್: ಸಾನಿಯಾ-ಶುಯಿ ಕ್ವಾರ್ಟರ್ ಪ್ರವೇಶ
Team Udayavani, Aug 18, 2017, 11:24 AM IST
ಸಿನ್ಸಿನಾಟಿ: ಭಾರತದ ಸಾನಿಯಾ ಮಿರ್ಜಾ- ಚೀನದ ಪೆಂಗ್ ಶುಯಿ ಜೋಡಿ ಸಿನ್ಸಿನಾಟಿ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲಿಗೆ ಏರಿದೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್ ಸೋಲನುಭವಿಸಿದ್ದಾರೆ.
ಸಾನಿಯಾ-ಶುಯಿ ಸೇರಿಕೊಂಡು ಜರ್ಮನಿಯ ಜಾರ್ಜಸ್-ಉಕ್ರೇನಿನ ಓಲ್ಗಾ ಸಾವುcಕ್ ಅವ ರನ್ನು 7-5, 6-4 ಅಂತರದಿಂದ ಮಣಿಸಿದರು. ಬುಧವಾರ ರಾತ್ರಿಯ ಈ ಸ್ಪರ್ಧೆ ಒಂದೂವರೆ ಗಂಟೆ ಕಾಲ ಸಾಗಿತು. ಇಂಡೋ-ಚೈನೀಸ್ ಜೋಡಿಯಿನ್ನು ರೊಮೇನಿಯಾದ ಐರಿನಾ ಕ್ಯಾಮೆಲಿಯಾ ಬೆಗು-ರಲುಕಾ ಒಲಾರು ವಿರುದ್ಧ ಸೆಣಸಲಿದೆ.
ಪುರುಷರ ವಿಭಾಗದ ದ್ವಿತೀಯ ಸುತ್ತಿನಲ್ಲಿ ರಾಮ್‌ಕುಮಾರ್ ಅವರನ್ನು ಅಮೆರಿಕದ ವೈಲ್ಡ್‌ಕಾರ್ಡ್ ಆಟಗಾರ ಜರೆಡ್ ಡೊನಾಲ್ಡ್‌ಸನ್ 6-4, 2-6, 6-4 ಅಂತರದಿಂದ ಪರಾಭವಗೊಳಿಸಿದರು. ಇದು ಡೊನಾಲ್ಡ್‌ಸನ್ ವಿರುದ್ಧ ರಾಮ್‌ಕುಮಾರ್ ಅನುಭವಿಸಿದ ಸತತ 2ನೇ ಸೋಲು. ಮೊದಲ ಸೋಲು ಎದುರಾದದ್ದು 2015ರಷ್ಟು ಹಿಂದೆ. ಅದು 2015ರ ಫ್ರೆಂಚ್ ಓಪನ್ ಅರ್ಹತಾ ಪಂದ್ಯಾವಳಿಯಾಗಿತ್ತು.
ಪುರುಷರ ಡಬಲ್ಸ್ ದ್ವಿತೀಯ ಸುತ್ತಿನಲ್ಲಿ ರೋಹನ್ ಬೋಪಣ್ಣ-ಇವಾನ್ ಡೊಗಿಗ್ ಜೋಡಿ ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್ ಕಬಾಲ್-ಇಟಲಿಯ ಫ್ಯಾಬಿಯೊ ಫೊಗಿನಿ ವಿರುದ್ಧ ಸೆಣಸಲಿದೆ.
ಲಿಯಾಂಡರ್ ಪೇಸ್-ಅಲೆಕ್ಸಾಂಡರ್ ಜ್ವರೇವ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಇವರನ್ನು ಹಿಮ್ಮೆಟ್ಟಿಸಿದವರು ಸ್ಪೇನಿನ ಫೆಲಿಶಿಯಾನೊ ಲೋಪೆಜ್-ಮಾರ್ಕ್ ಲೋಪೆಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.