ಏಷ್ಯಾಕಪ್ ಕ್ರಿಕೆಟ್: ಕೇಂದ್ರಕ್ಕೆ ಬಿಸಿಸಿಐ ಮನವಿ
Team Udayavani, Aug 18, 2017, 12:17 PM IST
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಕ್ಷೇಪದ ಕಾರಣ ಭಾರತ ಕಿರಿಯರ ಏಷ್ಯಾಕಪ್ ಕ್ರಿಕೆಟ್ ಆಯೋಜನೆಯ ಅವಕಾಶ ಕಳೆದುಕೊಂಡಿದೆ. ಆದ್ದರಿಂದ 2018ರ ಏಷ್ಯಾಕಪ್ ಕ್ರಿಕೆಟ್ ಕೂಟವನ್ನಾದರೂ ಭಾರತದಲ್ಲಿ ನಡೆಸಲು ಅನುಮತಿ ನೀಡುವಂತೆ ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್ ಆಡುವುದಿಲ್ಲವೆಂದು ಕೇಂದ್ರ ನಿರ್ಧಾರ ತೆಗೆದುಕೊಂಡಿರುವ ಪರಿಣಾಮ ಬಿಸಿಸಿಐ ಇಕ್ಕಟ್ಟಿಗೆ ಸಿಕ್ಕಿದೆ.
ಏಷ್ಯಾಕಪ್‌ನಲ್ಲಿ ಪಾಕಿಸ್ತಾನವೂ ಕೂಡ ಆಡುವುದು ಬಿಸಿಸಿಐನ ಸಂದಿಗ್ಧತೆಗೆ ಕಾರಣ. ಭಾರತದಲ್ಲಿ ಆಡುವುದಕ್ಕೆ ಪಾಕಿಸ್ತಾನವೂ ಅಭ್ಯಂತರ ಎತ್ತಿದೆ. ಅಲ್ಲದೇ ಪಾಕ್ ಕ್ರಿಕೆಟಿಗರಿಗೆ ಕೇಂದ್ರ ವೀಸಾ ಕೊಡದಿದ್ದರೆ ಹೇಗೆ ಎನ್ನುವುದು ಮತ್ತೂಂದು ಪ್ರಶ್ನೆ. ಕೇಂದ್ರಕ್ಕೆ ಮನವಿ ಸಲ್ಲಿಸಿರುವ ಬಿಸಿಸಿಐ
ಮೂಲಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಏಷ್ಯಾಕಪ್ ಹಲವು ರಾಷ್ಟ್ರಗಳು ಆಡುವ ಕೂಟ. ಆದ್ದರಿಂದ ಪಾಕಿಸ್ತಾನದೊಂದಿಗೆ ಆಡುವುದರಲ್ಲಿ ತೊಂದರೆಯಿಲ್ಲ. ನಮ್ಮ ವಿರೋಧವಿರುವುದು ದ್ವಿಪಕ್ಷೀಯ ಕ್ರಿಕೆಟ್‌ಗೆ ಮಾತ್ರ. ಪಾಕಿಸ್ತಾನ-ಭಾರತವಿಲ್ಲದೆ ಏಷ್ಯಾಕಪ್ ಸಾಧ್ಯವಿಲ್ಲ. ಇದನ್ನೆಲ್ಲ ಪರಿಗಣಿಸಿ ಕೇಂದ್ರ
ಅನುಮತಿ ಕೊಡಬೇಕೆನ್ನುವುದು ನಮ್ಮ ನಿರೀಕ್ಷೆ ಎಂದು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.