ತಾಂತ್ರಿಕ ಸಮಸ್ಯೆ: 80ಕ್ಕೂ ಅಧಿಕ ಇಂಡಿಗೋ ವಿಮಾನ ಹಾರಾಟ ರದ್ದು
Team Udayavani, Aug 18, 2017, 4:04 PM IST
ಮುಂಬಯಿ : ಮಿತವ್ಯಯದ ಪ್ರಯಾಣಕ್ಕೆ ಹೆಸರಾಗಿರುವ ಅಂತಾರಾಷ್ಟ್ರೀಯ ಇಂಡಿಗೋ ವಿಮಾನಯಾನ ಸಂಸ್ಥೆಯ ಹೊಸ ಇಂಜಿನ್ (NEO – new engine option) ಹೊಂದಿರುವ ಏರ್‌ಬಸ್ ಎ320 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಪ್ರಯುಕ್ತ 80ಕ್ಕೂ ಹೆಚ್ಚಿನ ಸಂಖ್ಯೆಯ ವಿಮಾನ ಹಾರಾಟಗಳನ್ನು ರದ್ದುಪಡಿಸಿದೆ.
ಪ್ರ್ಯಾಟ್ ಆ್ಯಂಡ್ ವಿಟ್‌ನೆ ಪೂರೈಕೆಯ ಇಂಜಿನ್ ದೋಷಯುಕ್ತವಾಗಿರುವುದು ಪತ್ತೆಯಾಗಿರುವ ಸುಮಾರು 13 ಎ320 ವಿಮಾನಗಳು ನಿಲ್ದಾಣದಲ್ಲೇ ಉಳಿದಿರುವ ಕಾರಣ ಅವುಗಳ ಸುಮಾರು 84ರಷ್ಟು ಹಾರಾಟಗಳನ್ನು ರದ್ದುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎ320 ವಿಮಾನಗಳಲ್ಲಿ ಆಗಾಗ ಇಂಜಿನ್ ಹಾಗೂ ಇನ್ನು ಕೆಲವು ಬಗೆಯ ತಾಂತ್ರಿಕ ದೋಷಗಳು ಕಂಡುಬರುವ ಕಾರಣ ಅವುಗಳ ಹಾರಾಟ ರದ್ದಾಗುವುದು ಈಚಿನ ದಿನಗಳಲ್ಲಿ ಸಾಮಾನ್ಯವಾಗಿದೆ ಎನ್ನುತ್ತವೆ ಮೂಲಗಳು.
ಈ ವರ್ಷ ಜೂನ್ 21ರಿಂದ ಜುಲೈ 3ರ ವರೆಗಿನ ಅವಧಿಯಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಒಟ್ಟು 667 ಹಾರಾಟಗಳು ರದ್ದಾಗಿವೆ ಎಂದು ಮೂಲಗಳು ಹೇಳಿವೆ. ತಾಂತ್ರಿಕ ದೋಷದ ಕಾರಣ ವಿಮಾನಗಳು ನೆಲದಲ್ಲೇ ಬೀಡುಬಿಟ್ಟ ಪ್ರಯುಕ್ತ ಜೂನ್ 27ರಂದು ಒಂದೇ ದಿನ 61 ಹಾರಾಟಗಳು ರದ್ದಾಗಿವೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.