ಫಿಜಿಯಲ್ಲಿ 6.4 ಅಂಕಗಳ ಪ್ರಬಲ ಭೂಕಂಪ; ಜೀವ ಹಾನಿ ಇಲ್ಲ
Team Udayavani, Aug 19, 2017, 11:10 AM IST
ವೆಲಿಂಗ್ಟನ್ : ಫಿಜಿಯಲ್ಲಿಂದು 6.4 ಅಂಕಗಳ ಪ್ರಬಲ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಕಂಪನ ಶಾಸ್ತ್ರಜ್ಞರು ಹೇಳಿದ್ದಾರೆ. ಆದರೆ ಭೂಕಂಪವು ಭೂಮಿಯ ಅತ್ಯಂತ ಆಳದಲ್ಲಿ ಉಂಟಾಗಿರುವ ಕಾರಣ ಯಾವುದೇ ನಾಶ, ನಷ್ಟ, ಜೀವ ಹಾನಿ ಸಂಭವಿಸಿಲ್ಲ ಎಂದವರು ಹೇಳಿದ್ದಾರೆ.
ಭೂಕಂಪವು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ (ಜಿಎಂಟಿ ಕಾಲಮಾನ 0200) ಸಂಭವಿಸಿದ್ದು ಅದು ಸುವಾ ಪೂರ್ವದಲ್ಲಿ 287 ಕಿ.ಮೀ. ದೂರದಲ್ಲಿ (178 ಮೈಲು), 538 ಕಿ.ಮೀ. ಆಳದಲ್ಲಿ ಸಂಭವಿಸಿರುವುದಾಗಿ ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ಹೇಳಿದೆ.
ಹವಾಯಿಯಲ್ಲಿರುವ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ತತ್‌ಕ್ಷಣಕ್ಕೆ ಯಾವುದೇ ಮುನ್ನೆಚ್ಚರಿಕೆಯನ್ನು ನೀಡಿಲ್ಲ. ಪದೇ ಪದೇ ಭೂಕಂಪ ಸಂಭವಿಸಿರುವ ಪೆಸಿಫಿಕ್ ಅಗ್ನಿ ವರ್ತುಲದಲ್ಲಿ ಈ ಖಂಡಾಂತರ ಭೂಗರ್ಭ ಫಲಕಗಳು ಪರಸ್ಪರ ಡಿಕ್ಕಿಯಾಗುವ ಕಾರಣ ಈ ಭೂಕಂಪವು ಘಟಿಸಿದೆ ಎಂದು ಪರಿಣತರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.