ಹೋಗಿ ಬರ್ತೆನ್ರಪ್ಪಾ..


Team Udayavani, Aug 19, 2017, 12:09 PM IST

hub6.jpg

ಧಾರವಾಡ: ಅವರು ರಂಗದಲ್ಲಿ ಅಂತರಂಗ ಕಂಡವರು. ಅಂತರಂಗದಲ್ಲಿ ರಂಗಭೂಮಿಯ ವೇದಿಕೆಯನ್ನು ಸದಾ ಜಾಗೃತಾವಸ್ಥೆಯಲ್ಲಿಯೇ ಇಟ್ಟವರು. ಆ ಮುಖ ನಿನ್ನೆಯವರೆಗೂ ಬಣ್ಣ ಹಚ್ಚಿಕೊಳ್ಳಲು ಹಾತೊರೆಯುತ್ತಲೇ ಇತ್ತು. ರಂಗದ ಮೇಲೆ ನಿಂತರೆ ಮೈಯಲ್ಲಿ ಸ್ಫೂರ್ತಿ, ಸ್ಥೈರ್ಯ ತುಂಬಿಕೊಳ್ಳುವ ವಾಮನ ದೇಹ. 

ಬ್ರಿಟಿಷರಿಗೆ ರಂಗದ ಮೇಲಿಂದಲೇ ಚಳ್ಳೆಹಣ್ಣು ತಿನ್ನಿಸಿದ ಅವರ ಚಾಕಚಕ್ಯತೆಗೆ ಸ್ವಾತಂತ್ರ ಚಳವಳಿಯ ಮುಂಚೂಣಿ ನಾಯಕರು ಸೆಲ್ಯೂಟ್‌ ಎಂದಿದ್ದರು. ಅವರು ಬೇರೆ ಯಾರೂ ಅಲ್ಲ. ಭರ್ತಿ 104 ವರ್ಷಗಳ  ಲ ಬದುಕಿ, 85 ವರ್ಷ ಕನ್ನಡ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಕಾಯಕ ಯೋಗಿ, ನಾಡೋಜ ನಟ ಸಾಮ್ರಾಟ ಏಣಗಿ ಬಾಳಪ್ಪನವರು. 

ಅವರದ್ದು ಕಾಯಕ ತತ್ವ, ದೇಹವೇ ದೇಗುಲ ತತ್ವ, ಎನಗಿಂತ ಕಿರಿಯರಿಲ್ಲ ತತ್ವ,  ಹೀಗಾಗಿಯೇ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲಿ ಅವರನ್ನು ಯಾರೂ ಹೆಸರಿನಿಂದ ಕರೆಯುತ್ತಿರಲಿಲ್ಲ. ಅವರಿಗಿದ್ದ ಹೆಸರು ಜಗಜ್ಯೋತಿ ಬಸವೇಶ್ವರ. ಅಭಿನವ ಬಸವಣ್ಣ ಎಂದೇ ಹೆಸರಾಗಿದ್ದ ಅವರು, ಬಸವಣ್ಣನ ಪಾತ್ರ ಮುಗಿಸಿ ನಾಟಕದ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರ ಕಾಲಿಗೆ ಜನ ನಮಸ್ಕರಿಸುತ್ತಿದ್ದರು.

ಇದಕ್ಕೆ ವರನಟ ಡಾ|ರಾಜ್‌ಕುಮಾರ್‌ ಕೂಡ ಹೊರತಾಗಿಲ್ಲ.  ಬಾಳಪ್ಪನವರ ರಂಗಭೂಮಿ ಪರಿಕಲ್ಪನೆಯೇ ವಿಭಿನ್ನ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕ ಮಾತ್ರ ಮಾಡುತ್ತಿದ್ದ ಅವರಿಗೆ 70-80ರ ದಶಕದ ಡಬಲ್‌ಮೀನಿಂಗ್‌ ನಾಟಕಗಳಿಂದ ತೀವ್ರ ಬೇಸರ ಬಂದು ಬಿಟ್ಟಿತು. ಹೀಗಾಗಿ ಬಾಳಪ್ಪನವರು ಕಂಪನಿಯನ್ನೇ ನಿಲ್ಲಿಸಿಬಿಟ್ಟರು. ಸತತ 85 ವರ್ಷಗಳ ಕಾಲ ರಂಗಭೂಮಿಯ ಸೇವೆ ಸಲ್ಲಿಸಿದ್ದ ಅವರು, ಸಿನೆಮಾ ಮತ್ತು ಟಿವಿ ಹಾವಳಿ ಎದ್ದಾಗ ಕೊಂಚ ಸ್ತಬ್ಧರಾಗಬೇಕಾಯಿತು. 

ರಂಗಕ್ಕೆ ಚಾಲನೆ: ನಾಡೋಜ ಬಾಳಪ್ಪ ಅವರು, ಬೇಸರ ಬಂದಾಗೆಲ್ಲಾ ಧಾರವಾಡದತ್ತ ಮುಖ ಮಾಡುತ್ತಿದ್ದರು. ಇಲ್ಲಿನ ರಂಗಭೂಮಿಯ ಮೂರು ತಲೆಮಾರಿನ ನಟರು, ನಿರ್ದೇಶಕರೊಂದಿಗೆ ಖುಷಿಯಾಗಿ ಕುಳಿತುಕೊಂಡು ತಮ್ಮ ಕಾಲದ ಘಟನೆಗಳನ್ನು ಮೆಲಕು ಹಾಕುತ್ತಿದ್ದರು. ಉಳವಿ ಬಸವೇಶ್ವರ ದೇವಸ್ಥಾನದ ಪೌಳಿಯಲ್ಲಿನ ಅವರ ಮೌನ ಭಂಗಿ, ಬಸಪ್ಪ ಖಾನಾವಳಿಯ ರೊಟ್ಟಿ, ಎಲ್‌ಇಎ ಕ್ಯಾಂಟೀನ್‌ ತುಪ್ಪದ ಅವಲಕ್ಕಿಯ ನಂಟು ಕೊನೆವರೆಗೂ ಇತ್ತು.

ಜಾತಿ, ಧರ್ಮದ ಸೊಂಕು ಅವರಿಗೆ ಸೋಕಿರಲೇ ಇಲ್ಲ. ಧಾರವಾಡದಲ್ಲಿ ಕರೆದವರ ಮನೆಗೆಲ್ಲ ಶರಣರಂತೆ ಹಣೆಗೆ ವಿಭೂತಿ ಹಚ್ಚಿಕೊಂಡು ಹೊರಟು ಬಿಡುತ್ತಿದ್ದರು. ಆಧುನಿಕ ರಂಗಭೂಮಿಯ ಸಾಧ್ಯತೆಗಳ ಕುರಿತು ರಂಗಕರ್ಮಿಗಳಾದ ಡಾ|ಶಿವಾನಂದ ಶೆಟ್ಟರ್‌, ಡಾ| ಪ್ರಕಾಶ ಗರೂಡ, ಅರವಿಂದ ಕುಲಕರ್ಣಿ, ಡಾ| ಶಶಿಧರ್‌ ನರೇಂದ್ರ, ಕೆ.ಜಗುಚಂದ್ರ ಸೇರಿದಂತೆ ಅನೇಕರೊಂದಿಗೆ ಸದಾ ಚರ್ಚಿಸುತ್ತಿದ್ದರು.  

ವೃತ್ತಿ- ಹವ್ಯಾಸಿ ಒಂದೇ: ರಂಗ ಚಟುವಟಿಕೆಗಳಿಂದ ದಶಕದ ಕಾಲ ದೂರವಿದ್ದ ಅವರು, 1993ರಲ್ಲಿ ಧಾರವಾಡದಲ್ಲಿ ಮ್ಯಾಳ ಸಂಘದ ಮೂಲಕ ಮತ್ತೆ ರಂಗಭೂಮಿಯತ್ತ ಮುಖ ಮಾಡಿದರು. ವಿಶ್ವಚೇತನ ತಂಡಕಟ್ಟಿದರು, ಹೇಮರಡ್ಡಿ ಮಲ್ಲಮ್ಮ, ಸತ್ಯಹರಿಶ್ಚಂದ್ರದಂತಹ ನಾಟಕಗಳನ್ನು ಹೊಸ ತಲೆಮಾರಿಗೆ ಕಲಿಸಿಕೊಟ್ಟರು. ವೃತ್ತಿ ರಂಗಭೂಮಿಯ ಅತಿರೇಕಗಳು, ಹವ್ಯಾಸಿಗಳ ಕೊರತೆಗಳು ಎರಡೂ ಸರಿ ಹೋಗಬೇಕು ಎನ್ನುತ್ತಿದ್ದರು ಬಾಳಪ್ಪನವರು. 

ರಂಗಭೂಮಿಯನ್ನು ಪ್ರಯೋಗ ಶೀಲತೆಗೆ ಒಳಪಡಿಸುವ, ಚಲನಶೀಲವಾಗಿಟ್ಟುಕೊಳ್ಳುವ ಬಗ್ಗೆ ತಾಸುಗಟ್ಟಲೇ ಧಾರವಾಡದ ಬುದ್ಧಿಜೀವಿ ಗಳೊಂದಿಗೆ ಮಾತನಾಡುತ್ತಿದ್ದರು. ವೃತ್ತಿ ಮತ್ತು ಹವ್ಯಾಸಿ ಎಂಬ ಭೇದವಿಲ್ಲದೇ ಎರಡನ್ನೂ ಒಟ್ಟಾಗಿ ನೋಡುವ ಅವರ ಹೊಸ ಪರಿಕಲ್ಪನೆಯೇ ಅವರ ಚಲನಶೀಲತೆಗೆ ಸಾಕ್ಷಿಯಾಗಿತ್ತು. ಕವಿವಿ ಅವರಿಗೆ ಗೌರವ ಡಾಕ್ಟರೆಟ್‌ ಪದವಿ ನೀಡಿ ಗೌರವಿಸಿತು. 

* ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.