ಬೆಂಗಳೂರಿಗೆ 5ನೇ ಸೋಲು
Team Udayavani, Aug 19, 2017, 12:25 PM IST
ಲಕ್ನೋ: ಜಸ್ವೀರ್ ಸಿಂಗ್ ಚುರುಕಿನ ರೈಡಿಂಗ್ (10 ಅಂಕ) ಹಾಗೂ ಮಂಜಿತ್ ಚಿಲ್ಲಾರ್ (8 ಅಂಕ) ಅಮೋಘ ಕ್ಯಾಚಿಂಗ್‌ನಿಂದಾಗಿ ಬೆಂಗಳೂರು ಬುಲ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ ರೋಚಕ 30-28 ಅಂತರದ ಜಯ ಸಾಧಿಸಿದೆ. ಸೋಲುಂಡ ಬೆಂಗಳೂರು ಬುಲ್ಸ್ ಕೂಟದಲ್ಲಿ
ಒಟ್ಟಾರೆ 5ನೇ ಮುಖಭಂಗ ಅನುಭವಿಸಿತು.
ಕೊನೆ 2 ನಿಮಿಷದಲ್ಲಿ ಬುಲ್ಸ್‌ಗೆ ಸೋಲು: ಬಾಬು ಬನಾರಸಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯ ರೋಚಕವಾಗಿತ್ತು. ಕೊನೆ 5 ನಿಮಿಷದವರೆಗೆ ಬೆಂಗಳೂರು ಹಾಗೂ ಜೈಪುರ ಸಮಬಲ ಕಾಯ್ದುಕೊಂಡಿದ್ದವು. ಆದರೆ ಪಂದ್ಯ ಮುಗಿಯಲು ಇನ್ನೇನು 2 ನಿಮಿಷವಷ್ಟೇ ಇದ್ದಾಗ
ಜೈಪುರ ಮಿಂಚಿನ ಆಟ ಪ್ರದರ್ಶಿಸಿತು. ಏಕಾಏಕಿ ದಾಳಿಯಿಂದ ಬುಲ್ಸ್ ಕುಸಿಯಿತು. ಒಟ್ಟಾರೆ 22 ರೈಡಿಂಗ್ ಮಾಡಿದ್ದ ಜಸ್ವೀರ್ 10 ಅಂಕ ತಂದರು. ಟ್ಯಾಕ್ಲಿಂಗ್ ಮೂಲಕ ಮಂಜಿತ್ ಚಿಲ್ಲಾರ್ ಜೈಪುರ ತಂಡಕ್ಕೆ ನೆರವಾದರು.
ನಡೆಯಲಿಲ್ಲ ರೋಹಿತ್ ಜಾದೂ: ಬುಲ್ಸ್ ಪರ ನಾಯಕ ರೋಹಿತ್ ಕುಮಾರ್ (10 ಅಂಕ) ಏಕಾಂಗಿ ಹೋರಾಟ ನಡೆಸಿದರು. ತಂಡವನ್ನು ಗೆಲ್ಲಿಸಲು ಗರಿಷ್ಠ ಪ್ರಯತ್ನ ನಡೆಸಿದರು. ಆದರೆ ರೋಹಿತ್‌ಗೆ ತಂಡದ ಉಳಿದ ಆಟಗಾರರಿಂದ ಉತ್ತಮ ಬೆಂಬಲ ಸಿಗದ ಕಾರಣ ಪಂದ್ಯ
ಕಳೆದುಕೊಳ್ಳಬೇಕಾಯಿತು.
ಹರ್ಷವರ್ಧನ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.