ಹಠ ಬಿಟ್ಟು ಪೀಟರ್‌ ಅಲೆಗ್ಸಾಂಡರ್‌ ಕೇಶಮುಂಡನ


Team Udayavani, Aug 19, 2017, 3:03 PM IST

vijayapur 1.jpg

ವಿಜಯಪುರ: ಜಿಲ್ಲೆಯ ರಾಮಲಿಂಗ ಕೆರೆ ಸಂರಕ್ಷಣೆಗಾಗಿ ಕಳೆದ ಒಂದು ದಶಕದಿಂದ ಕೂದಲು ಕತ್ತರಿಸದೇ ಪ್ರತಿಜ್ಞೆ ಮಾಡಿ
ಸಾಧನೆಗಾಗಿ ಹಠ ಹಿಡಿದಿದ್ದ ಪೀಟರ್‌ ಅಲೆಗ್ಸಾಂಡರ್‌ ಎಂಬ ಹೋರಾಟಗರ ಕೊನೆಗೂ ಶುಕ್ರವಾರ ಕೇಶಮುಂಡನ
ಮಾಡಿಸಿಕೊಂಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜಲ ಸಮಾವೇಶದ ಸಂದರ್ಭದಲ್ಲಿ ರಾಷ್ಟ್ರೀಯ ಜಲಗಾಂಧಿ ಎಂದೇ ಖ್ಯಾತರಾಗಿರುವ ಡಾ|ರಾಜೇಂದ್ರಸಿಂಗ್‌ ಅವರು ಸದರಿ ಸಮಾವೇಶದಲ್ಲಿ ರಾಮಲಿಂಗ ಮಾತ್ರವಲ್ಲ, ಜೀವ ಕಳೆದುಕೊಂಡಿರುವ ಎಲ್ಲ ನದಿ-ಕೆರೆಗಳ ಪುನರುಜ್ಜೀವನಕ್ಕೆ ನಿರ್ಣಯ ಅಂಗೀಕರಿಸುತ್ತೇವೆ. ನಿಮ್ಮ ಆಶಯದಂತೆ ರಾಜ್ಯದ ಜಲಸಂಪನ್ಮೂಲ ಸಚಿವರಾದ
ಡಾ| ಎಂ.ಬಿ. ಪಾಟೀಲ ಅವರಿಂದ ನಿಮ್ಮ ಕನಸಿನ ಕೆರೆಗೆ ಮರು ಜೀವ ಕೊಡಿಸುವ ಹೊಣೆ ಹೊರುತ್ತೇವೆ ಎಂದು ಭರವಸೆ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ ವರೆಗೆ ಒಂಟಿಯಾಗಿದ್ದ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆ. ದೇಶದ ಜಲ ಸಂರಕ್ಷಕ ಹೋರಾಟಗಾರರೆಲ್ಲ ನಿಮ್ಮೊಂದಿಗೆ ಇದ್ದೇವೆ. ಹೀಗಾಗಿ ಈ ಜಲ ಸಮಾವೇಶ ಸಂದರ್ಭದಲ್ಲಿ ನಿಮ್ಮ ಬೇಡಿಕೆ ಈಡೇರಿಸುವ ಭರವಸೆ ದೊರೆಯುವ ಕಾರಣ ಪ್ರತಿಜ್ಞೆ ಕೈಬಿಟ್ಟು, ಕೇಶ ಮುಂಡನ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಇದಲ್ಲದೇ ಜಲ ಬಿರಾದರಿ ಸಮಿತಿಯ ಜಿಲ್ಲಾ ಘಟಕದ ಸಂಚಾಲಕರು ನೀವೇ ಆಗಿರುವ ಕಾರಣ ರಾಮಲಿಂಗ ಕೆರೆ ಸಂರಕ್ಷಣೆ ವಿಷಯದಲ್ಲಿ ನಿಮ್ಮೊಂದಿಗೆ ದೇಶದ ಜನವೇ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಮನವೊಲಿಸಿದರು. ಅಂತಿಮವಾಗಿ ರಾಷ್ಟ್ರೀಯ ಜಲ ಸಮಾವೇಶದ ಸಮಾರೋಪ ನಡೆಯುವ ಶುಕ್ರವಾರ ಬೆಳಗ್ಗೆ ದಶಕದಿಂದ ಬೆಳೆಸಿದ್ದ ಕೇಶಕ್ಕೆ ಕತ್ತರಿ ಹಾಕಿಸಿದ್ದಾರೆ. ಕಳೆದ ಒಂದು ದಶಕದಿಂದ ರಾಮಲಿಂಗ ಕೆರೆ ಸಂರಕ್ಷಣೆಗಾಗಿ ಕೇಶ ಮುಂಡನ
ಮಾಡಿಸದೇ, ಬಗಲಲ್ಲಿ ಬಿಳಿಯ ಬಟ್ಟೆಯ ಜೋಳಿಗೆ, ತಲೆಗೆ ಪೇಟ ಸುತ್ತಿಕೊಂಡು ಜಲ ಸಂತನಂತೆ ಸುತ್ತಿದ್ದ ಪೀಟರ್‌ ಅಲೆಗ್ಸಾಂಡರ್‌, ರಾಮಲಿಂಗ ಕರೆಯ ಪ್ರದೇಶದಲ್ಲೇ ಕೇಶ ಮುಂಡನಕ್ಕೆ ನಿರ್ಧರಿಸಿದರು. ಸ್ಥಳಕ್ಕೆ ತೆರಳಿದ ಡಾ| ರಾಜೇಂದ್ರಸಿಂಗ್‌ ಹಾಗೂ ಜಲ ಬಿರಾದರಿ ಸಂಘಟನೆ ಕಾರ್ಯಕರ್ತರು ಪೀಠರ್‌ ಅವರ ಕೈಗೆ ದೇಶದ 101 ನದಿಗಳ ಜಲತುಂಬಿದ್ದ ಬಿಂದಿಗೆ ನೀಡಿ, ಪ್ರತಿಜ್ಞೆ ಕೈ ಬಿಡಿಸಿ, ಕೇಶಮುಂಡನ ಮಾಡಿಸಿದರು. ಕೇಶ ಮುಂಡನದ ಬಳಿಕ ಜಲ ಜೋಳಿಗೆಯನ್ನೂ ಕಳಚಿ, ಶೂಟುಬೂಟು ತೊಟ್ಟ ಪೀಟರ್‌ ಅವರು ತಲೆಗೆ ತೊಡುತ್ತಿದ್ದ ಬಿಳಿ ವಸ್ತ್ರದ ಪೇಟವನ್ನು ಮಾತ್ರ ಕಳಚಲು ನಿರಾಕರಿಸಿದರು. ಕೇಶಮುಂಡನದ ಬಳಿಕ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಾಮಲಿಂಗ ಕೆರೆ ಸಂರಕ್ಷಣೆಗೆ ಮನವಿ ಮಾಡಿದರು. ಸಮಾವೇಶದಲ್ಲಿ ಕೈಗೊಂಡಿರುವ
ನಿರ್ಣಯದಂತೆ ರಾಮಲಿಂಗ ಕೆರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ.
ಪಾಟೀಲ ಕೂಡ ಭರವಸೆ ನೀಡಿದ್ದಾರೆ ಎಂದು ಪೀಟರ್‌ ಹೇಳಿದರು.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.