ಜಾತ್ರೋತ್ಸವದಲ್ಲಿ ಗಮನ ಸೆಳೆದ ಭಾರ ಎತ್ತುವ ಸ್ಪರ್ಧೆ


Team Udayavani, Aug 19, 2017, 3:12 PM IST

vijaypur 2.jpg

ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ಜರುಗಿದ ಭಾರ ಎತ್ತುವ ಕಸರತ್ತಿನ ಸ್ಪರ್ಧೆಗಳು ಗಮನ ಸೆಳೆದವು. ಶ್ರೀ ಬಸವೇಶ್ವರ ದೇವಾಲಯದ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ನೆರೆದಿದ್ದ ಜನರು ಭಾರವಾದ ಚೀಲ, ಗುಂಡು, ಕಬ್ಬಿಣದ ಹಾರಿ, ಸಂಗ್ರಾಣಿ ಕಲ್ಲುಗಳನ್ನು ಎತ್ತುವ ಜಟ್ಟಿಗಳನ್ನು ಹುರಿದುಂಬಿಸಿದರು. ಸ್ಪರ್ಧೆಯಲ್ಲಿ ಬಾಗಲಕೋಟೆ, ಬೆಳಗಾವಿ, ಬ್ಯಾಡಗಿ, ಬೀಳಗಿ ಸೇರಿದಂತೆ ವಿವಿಧ ಭಾಗಗಳ ಜಟ್ಟಿಗಳು ಭಾಗವಹಿಸಿದ್ದರು. ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದರು. ವಿವಿಧ ಭಾರ ಎತ್ತುವ ಸ್ಪರ್ಧೆಗಳಲ್ಲಿ ವಿಜೇತರು: ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆ: ಕೊಣ್ಣೂರಿನ ಕರೆಪ್ಪ ಧರೆಪ್ಪ ಅಬ್ಬುನವರ ಪ್ರಥಮ, ಬೀಳಗಿಯ ಸಂಘಣ್ಣ ಕೊಂಚಿಕಲ್ಲ ದ್ವಿತೀಯ, ಹೊನವಾಡದ ಉಮೇಶ ಹರಗೆ ತೃತೀಯ ಸ್ಥಾನ ಪಡೆದರು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ : ಹಳಗೇರಿಯ ಸಾಯಪ್ಪ ಕೆಂದೂರ ಪ್ರಥಮ, ಕುಂಟೋಜಿಯ ಮಲ್ಲು ತಳವಾರ ದ್ವಿತೀಯ, ಗುಳೇದಗುಡ್ಡದ ಮಂಜು ಸಂಗೋಣ್ಣಿ ತೃತೀಯ ಸ್ಥಾನ ಪಡೆದರು. ಗುಂಡು ಎತ್ತುವ ಸ್ಪರ್ಧೆ: ಗುನ್ನಾಪುರದ ಶಿವಲಿಂಗಪ್ಪ ಶಿರೂರ (ಪ್ರಥಮ), ಹಳ್ಳೂರಿನ ಚಂದ್ರಶೇಖರ ಯಾಳವಾರ (ದ್ವಿತೀಯ) ಗಪಳಸಂಗಿಯ ಕೃಷ್ಣಾ ಪವಾರ ತೃತೀಯ ಸ್ಥಾನ ಪಡೆದರು. ಉಸುಕಿನ ಚೀಲ ಎತ್ತುವ ಸ್ಪರ್ಧೆ: ಯಲಗೂರಿನ ಗಂಗಪ್ಪ ಶಿರೂರ ಪ್ರಥಮ, ಗೋನಾಳದ ವಿಠ್ಠಲ ಹಡಗಲಿ ದ್ವಿತೀಯ, ಸಂಗೋಂದಿಯ ಮಳೇಪ್ಪ ಮೇಟಿ ತೃತೀಯ ಸ್ಥಾನ ಪಡೆದರು.ವಿವಿಧ ಭಾರ ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪುರದ ಬಾಲಕ ಬೀರಪ್ಪ ಲೋಣಿ ಮೆಟ್ನಾಲಿಗೆ ಮೇಲೆ ನಿಂತು 68 ಕೆ.ಜಿ. ತೂಕದ ಅಕ್ಕಿ ಚೀಲ ಎತ್ತುವ ಮೂಲಕ ಗಮನ ಸೆಳೆದರು. ಇಂಗಳಯ ಮಾಳಪ್ಪ ಪೂಜಾರಿ, ಮುಳಸಾವಳಗಿಯ ರಮೇಶ ಪಾಟೀಲ ಅವರು ಹಲ್ಲಿನ ಸಹಾಯದಿಂದ ಭಾರವಾದ ಕಬ್ಬಿಣದ ಹಾರಿ ಎತ್ತಿದರು. ನಾಗರಾಜ ಗಾಣಗೇರಿ, ನಿಜಾನಂದ ಹಳ್ಳಿ ಮೆಟನಾಲಿಗೆ ಮೇಲೆ ನಿಂತು. ಭಾರವಾದ ಚೀಲ ಎತ್ತಿದರು. ಪರಶುರಾಮ ಮನಗೂಳಿ ಮೆಟ್‌ ನಾಲಿಗೆ ಮೇಲೆ ನಿಂತು ಕಬ್ಬಿಣದ ಹಾರಿ ಎತ್ತುವ ಮೂಲಕ ಸ್ಪರ್ಧೆಯ ಮೆರಗು ಹೆಚ್ಚಿಸಿದರು. ವಿವಿಧ ಕಸರತ್ತಿನ ಸ ರ್ಧೆಗಳಲ್ಲಿ ವಿಜೇತರಾದವರಿಗೆ ನಾಗರಾಜ ಗುಂದಗಿ ಅವರು ಕಳೆದ 13 ವರ್ಷಗಳಿಂದ ಬೆಳ್ಳಿ ಕಡೆ ಬಹುಮಾನವಾಗಿ ನೀಡುತ್ತಿರುವುದು ವಿಶೇಷ. ಕಸರತ್ತಿನ ಸ್ಪರ್ಧೆಯಲ್ಲಿ ಸಿದ್ದಲಿಂಗ ಸ್ವಾಮೀಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸಪ್ಪ ಹಾರಿವಾಳ, ಬಸವರಾಜ ಗೊಳಸಂಗಿ, ಬಸಣ್ಣ ದೇಸಾಯಿ, ಮೀರಾಸಾಬ್‌ ಕೊರಬು, ಅಪ್ಪು ಮಟ್ಟಿಹಾಳ, ಶರಣು ಕೂಡಗಿ, ಶ್ರೀಶೈಲ ಹಾರಿವಾಳ, ಸಂಗಪ್ಪ ಡಂಬಳ, ಸಂಗಯ್ಯ ಒಡೆಯರ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ಹಂಜಗಿ, ಸಂಗಮೇಶ ಓಲೇಕಾರ, ಬಸವರಾಜ ಕೋಟಿ, ಸಂಗಪ್ಪ ವಾಡೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.