13,000 ಕೋಟಿ ರೂ. ಶೇರು ಮರು ಖರೀದಿಸುವ ಇನ್‌ಫೋಸಿಸ್
Team Udayavani, Aug 19, 2017, 3:18 PM IST
ಹೊಸದಿಲ್ಲಿ : ದೇಶದ ಎರಡನೇ ಅತೀ ದೊಡ್ಡ ಸಾಫ್ಟ್ ವೇರ್ ಸೇವೆಗಳ ಸಂಸ್ಥೆಯಾಗಿರುವ ಇನ್‌ಫೋಸಿಸ್ ಇಂದು ಶನಿವಾರ 13.000 ಕೋಟಿ ರೂ. ಮೌಲ್ಯದ ತನ್ನ ಶೇರುಗಳನ್ನು ತಲಾ ಶೇರಿಗೆ 1,150 ರೂ. ಬೆಲೆಯಲ್ಲಿ ಮರು ಖರೀದಿಸಲು ನಿರ್ಧರಿಸಿದೆ. ಕಂಪೆನಿಯ ಆಡಳಿತ ಮಂಡಳಿಯು ಈ ಶೇರು ಮರುಖರೀದಿ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.
ಮಾರುಕಟ್ಟೆಯಲ್ಲಿ ಈಗ ಇನ್‌ಫೋಸಿಸ್ ಶೇರು ದರ 923.10 ರೂ. ಇದೆ. ಎಂದರೆ ಇನ್‌ಫೋಸಿಸ್ ನಿಗದಿಸಿರುವ ಮರು ಖರೀದಿ ದರವು (ರೂ.1,150) ನಿನ್ನೆ ಶುಕ್ರವಾರದ ಮಾರುಕಟ್ಟೆ ದರಕ್ಕಿಂತ ಶೇ.25ರಷ್ಟು ಹೆಚ್ಚು.
ತನ್ನ ಶೇರು ದಾರರಿಂದ 13,000 ಕೋಟಿ ರೂ. ಮೌಲ್ಯದ ಶೇರುಗಳನ್ನು ಮರು ಖರೀದಿಸುವ ಕೊಡುಗೆಯ ಅನುಷ್ಠಾನ ಪ್ರಕ್ರಿಯೆಯ ಉಸ್ತುವಾರಿಗೆ ಇನ್‌ಫೋಸಿಸ್ ಏಳು ಸದಸ್ಯರ ಸಮಿತಿಯೊಂದನ್ನು ರೂಪಿಸಿದೆ. ಈ ಸಮಿತಿಯಲ್ಲಿ ಕಂಪೆನಿಯ ಸಹ-ಅಧ್ಯಕ್ಷ ರವಿ ವೆಂಕಟೇಶನ್, ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಶಾಲ್ ಸಿಕ್ಕಾ, ಮಧ್ಯಾವಧಿ ಸಿಇಓ ಮತ್ತು ಎಂಡಿ ಆಗಿರುವ ಯು ಬಿ ಪ್ರವೀಣ್ ರಾವ್ ಇದ್ದಾರೆ.
2017ರ ಜೂನ್ 30ರ ಪ್ರಕಾರ ಇನ್‌ಫೋಸಿಸ್ ಬಳಿ ನಗದು ಅಥವಾ ನಗದಿಗೆ ಸಮಾನವಾಗಿರುವ 3.5 ಶತಕೋಟಿ ಡಾಲರ್ ಹಣ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.