ಹದಿಹರಯದಲ್ಲಿ ದೈಹಿಕ ಪರಿವರ್ತನೆಗಳು


Team Udayavani, Aug 20, 2017, 6:05 AM IST

Physical.jpg

ವೈದ್ಯಕೀಯವಾಗಿ, ಹರೆಯಕ್ಕೆ ಬರುವುದು ಅಥವಾ ಪ್ರೌಢ ವಯಸ್ಕರಾಗುವುದು ಎಂದರೆ ಹುಡುಗ ಅಥವಾ ಹುಡುಗಿ ದೈಹಿಕವಾಗಿ ಪ್ರೌಢರಾಗಿ, ಲೈಂಗಿಕವಾಗಿ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಗಳಿಸುವುದು ಎಂದರ್ಥ. ಹೀಗೆ ಹರೆಯಕ್ಕೆ ಬರುವ ವಯಸ್ಸಿನ ಮೇಲೆ ವಂಶವಾಹಿ ಮತ್ತು ಪಾರಿಸರಿಕ ಕಾರಣಗಳೆರಡೂ ಪ್ರಭಾವ ಬೀರುತ್ತವೆ. ಆಡುಮಾತಿನಲ್ಲಿ ಮೈನರೆಯುವುದು ಎಂದೂ ಇದನ್ನು ಕರೆಯುತ್ತಾರೆ. ದೈಹಿಕ ಕೊಬ್ಬು ಮತ್ತು / ಅಥವಾ ದೇಹದ ಸಂರಚನೆಗಳು ಹರೆಯಕ್ಕೆ ಬರುವ ಪ್ರಕ್ರಿಯೆಯ ಸಹಜತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ದ್ವಿತೀಯ ಲೈಂಗಿಕ ಗುಣಲಕ್ಷಣಗಳು ಹಾಗೂ ಕ್ಷಿಪ್ರ ದೈಹಿಕ ಬೆಳವಣಿಗೆಯ ಜತೆಗೆ ಹರೆಯಕ್ಕೆ ಬರುವುದು ಅಥವಾ ಮೈ ನರೆಯುವುದು ನಿಕಟ ಸಂಬಂಧವನ್ನು ಹೊಂದಿದೆ. ಹರೆಯಕ್ಕೆ ಬರುವ ಸಂದರ್ಭದಲ್ಲಿ ಕೆಲವು ವೈದ್ಯಕೀಯ ಸಮಸ್ಯೆಗಳು ಹದಗೆಡುವ ಅಥವಾ ಎದ್ದು ಕಾಣುವ ಸಾಧ್ಯತೆಗಳಿವೆ. ಅವಧಿಪೂರ್ವ ಮೈನರೆಯುವಿಕೆ ಎಂದರೆ ಸಹಜ ಸಾಮಾನ್ಯ ವಯಸ್ಸಿಗೆ ಮುನ್ನವೇ ವಯಸ್ಸಿಗೆ ಬರುವುದು. ಇದು ಬಾಲಕರಿಗಿಂತ ಬಾಲಕಿಯರಲ್ಲೇ ಕಂಡುಬರುವುದು ಹೆಚ್ಚು. 

ಹರೆಯಕ್ಕೆ ಬರುವುದು ಎಂದರೇನು?
ಬೆಳೆಯುತ್ತಿರುವ ಬಾಲಕ – ಬಾಲಕಿಯರು ಲೈಂಗಿಕ ಪ್ರೌಢಾವಸ್ಥೆಯನ್ನು ತಾಳುವ ಅವಧಿಯನ್ನು ಹರೆಯಕ್ಕೆ ಬರುವುದು ಅಥವಾ ಮೈ ನರೆಯುವುದು ಎನ್ನಬಹುದು. ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಗಳಿಸುವುದಕ್ಕೆ ಕಾರಣವಾಗುವ ವಿವಿಧ ದೈಹಿಕ ಹಂತಗಳು ಅಥವಾ ಹೆಜ್ಜೆಗಳನ್ನು ಇದು ಒಳಗೊಂಡಿದೆಯಲ್ಲದೆ, ವಯಸ್ಕ ಗಂಡು ಮತ್ತು ಹೆಣ್ಣು ಹೊಂದಿರುವ ದ್ವಿತೀಯ ಲೈಂಗಿಕ ಗುಣಲಕ್ಷಣಗಳನ್ನು ಗಳಿಸುವುದು ಕೂಡ ಇದೇ ಸಮಯದಲ್ಲಿ ನಡೆಯುತ್ತದೆ. ಹೈಪೊಥಾಲಮಸ್‌ – ಪಿಟ್ಯುಟರಿ – ಆಡ್ರಿನಾಲ್‌ – ಗೊನಾಡ್ಸ್‌ ಎಂಬ ಹರೆಯಕ್ಕೆ ಬರುವುದಕ್ಕೆ ಕಾರಣವಾಗುವ ಗ್ರಂಥಿಗಳ ಮಾಗುವಿಕೆಯ ಜತೆಗೆ ಸಂಬಂಧ ಹೊಂದಿದೆ. ಹರೆಯಕ್ಕೆ ಬರುವುದು ಹಲವಾರು ಜೈವಿಕ ಅಥವಾ ದೈಹಿಕ ಪರಿವರ್ತನೆಗಳ ಸರಣಿಯನ್ನು ಒಳಗೊಂಡಿದ್ದು, ಈ ಪ್ರಕ್ರಿಯೆಯು ಹದಿಹರೆಯದ ಮಕ್ಕಳ ಮನೋಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಮೇಲೆ ಕೂಡ ಪ್ರಭಾವ ಬೀರಬಲ್ಲುದಾಗಿದೆ.

ಹರೆಯಕ್ಕೆ ಬರುವುದು 
ಯಾವಾಗ ಸಂಭವಿಸುತ್ತದೆ?

ಹರೆಯಕ್ಕೆ ಬರುವ ಪ್ರಕ್ರಿಯೆಯ ಆರಂಭ ವ್ಯಕ್ತಿಗತವಾಗಿ ವಿಭಿನ್ನ ವಯಸ್ಸಿನಲ್ಲಿ ಸಂಭವಿಸುತ್ತದೆ. ಬಾಲಕಿಯರಲ್ಲಿ ಸಾಮಾನ್ಯವಾಗಿ ಹರೆಯಕ್ಕೆ ಬರುವುದು ಅಥವಾ ಮೈನರೆಯುವುದು 10ರಿಂದ 14 ವರ್ಷ ವಯೋಮಾನಗಳ ನಡುವೆ ಸಂಭವಿಸಿದರೆ, ಬಾಲಕರಲ್ಲಿ ಇದು ಸ್ವಲ್ಪ ತಡವಾಗಿ, 12ರಿಂದ 16 ವರ್ಷ ವಯಸ್ಸುಗಳ ನಡುವೆ ನಡೆಯುತ್ತದೆ. 

ಇತ್ತೀಚೆಗಿನ ವರ್ಷಗಳಲ್ಲಿ ಬಾಲಕಿಯರಲ್ಲಿ ಈ ಹಿಂದೆ ದಾಖಲಾಗಿರುವುದಕ್ಕಿಂತ ಮುಂಚಿತವಾಗಿಯೇ ಹರೆಯಕ್ಕೆ ಬರುತ್ತಿದ್ದಾರೆ. ಈ ಪರಿವರ್ತನೆಗೆ ಪೌಷ್ಟಿಕಾಂಶ ಮತ್ತು ಇತರ ಪಾರಿಸರಿಕ ಪ್ರಭಾವಗಳು ಕಾರಣವಾಗಿರಬಹುದು. ಹರೆಯಕ್ಕೆ ಬರುವ ಪ್ರಕ್ರಿಯೆಯ ಆರಂಭದ ಅವಧಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಮತ್ತು ಇದಕ್ಕೆ ಅನೇಕ ಅಂಶಗಳು ಕಾರಣವಾಗಬಲ್ಲ ಸಾಧ್ಯತೆಯಿದೆ. ಹೈಪೊಥಾಲಮಸ್‌ ಸ್ರವಿಸುವ ಒಂದು ಹಾರ್ಮೋನ್‌ ಪಿಟ್ಯುಟರಿ ಗ್ರಂಥಿಗೆ ಸಂಕೇತಗಳನ್ನು ನೀಡುತ್ತದೆ. ಇದಕ್ಕೆ ಪ್ರತಿಯಾಗಿ ಪಿಟ್ಯುಟರಿ ಗ್ರಂಥಿಯು ಸ್ರವಿಸುವ ಎರಡು ಹಾರ್ಮೋನುಗಳು ಲೈಂಗಿಕ ಅಭಿವೃದ್ಧಿಗೆ ಕಾರಣವಾಗುತ್ತವೆ. ಹರೆಯಕ್ಕೆ ಬರುವ ಅವಧಿಯ ನಿರ್ಧಾರದಲ್ಲಿ ವಂಶವಾಹಿ ಅಂಶಗಳು ಒಳಗೊಂಡಿರುವ ಸಾಧ್ಯತೆಗಳಿವೆ ಹಾಗೂ ಹರೆಯಕ್ಕೆ ಬರುವ ಸಮಯವನ್ನು ಅನೇಕ ಬಾರಿ “”ಕೌಟುಂಬಿಕ ಲಕ್ಷಣ”ವಾಗಿ ವ್ಯಾಖ್ಯಾನಿಸಲಾಗುತ್ತದೆ.

ಬಾಲಕ ಮತ್ತು ಬಾಲಕಿಯರಲ್ಲಿ, ಹರೆಯಕ್ಕೆ ಬರುವ ಪ್ರಕ್ರಿಯೆಯಲ್ಲಿ ಉಂಟಾಗುವ ಬದಲಾವಣೆಗಳು ನಿರ್ದಿಷ್ಟ ಲಕ್ಷಣಗಳನ್ನು ಹೊಂದಿದ್ದು, ಸಾಮಾನ್ಯವಾಗಿ ಮುಂಗಾಣಬಹುದಾದ ಘಟನೆ ಅಥವಾ ಪರಿವರ್ತನಾ ಸರಣಿಯಿಂದ ಕೂಡಿರುತ್ತದೆ. ಬಹುತೇಕ ಬಾಲಕಿಯರಲ್ಲಿ ಹರೆಯಕ್ಕೆ ಬರುತ್ತಿರುವುದರ ಮೊದಲ ಲಕ್ಷಣವಾಗಿ ಸ್ತನಗಳು ಬೆಳೆಯುತ್ತವೆ, ಇದು 11 ವರ್ಷ ವಯಸ್ಸಿನ ಸರಿಸುಮಾರಿಗೆ ನಡೆಯುತ್ತದೆ. ಬಾಲಕಿಯರಲ್ಲಿ ಇದರ ಮುಂದಿನ ಲಕ್ಷಣವಾಗಿ ಜನನಾಂಗದ ಸುತ್ತ ಕೂದಲು ಗಳು ಬೆಳೆಯಲಾರಂಭಿಸಿದರೆ, ಕಂಕುಳುಗಳಲ್ಲಿ ಕೂದಲು ಬೆಳೆಯುವುದು ಮುಂದಿನ ಹಂತ. ಋತುಚಕ್ರದ ಆರಂಭವು ಹರೆಯಕ್ಕೆ ಬರುವ ಇತರೆಲ್ಲ ದೈಹಿಕ ಲಕ್ಷಣಗಳಿಗಿಂತ ತಡವಾಗಿ, ಹರೆಯಕ್ಕೆ ಬರುವ ಪ್ರಕ್ರಿಯೆ ಆರಂಭಗೊಂಡಲ್ಲಿಂದ ಸುಮಾರು ಎರಡೂವರೆ ವರ್ಷಗಳ ಬಳಿಕ ನಡೆಯುತ್ತದೆ. ಸಂತಾನೋತ್ಪತ್ತಿ ಸಾಮರ್ಥ್ಯ ಗಳಿಕೆಯ ಕುರುಹಾಗಿರುವ ನಿಯಮಿತ ರೀತಿಯಲ್ಲಿ ಅಂಡ ಬಿಡುಗಡೆಯಾಗುವುದು ಬಾಲಕಿಗೆ ಋತುಚಕ್ರ ಆರಂಭವಾದ ಮೇಲೆ ಕ್ಷಿಪ್ರವಾಗಿ ಸಂಭವಿಸುತ್ತದೆ. ಆದರೆ, ತಡವಾಗಿ ಋತುಚಕ್ರ ಆರಂಭಗೊಂಡ ಬಾಲಕಿಯರಲ್ಲಿ (13 ವರ್ಷ ವಯಸ್ಸಿನ ಬಳಿಕ) ಋತುಚಕ್ರ ಆರಂಭಗೊಂಡ ತತ್‌ಕ್ಷಣದ ವರ್ಷಗಳಲ್ಲಿ ಅಂಡ ಬಿಡುಗಡೆಗೊಳ್ಳುವುದು ನಿಯಮಿತವಾಗುವ ಸಾಧ್ಯತೆಗಳು ಕಡಿಮೆ.  

ಬಾಲಕರಲ್ಲಿ, ವೃಷಣಗಳು ದೊಡ್ಡದಾಗುವುದು ಹರೆಯಕ್ಕೆ ಬರುವುದರ ಪ್ರಥಮ ಲಕ್ಷಣವಾಗಿ ಗೋಚರಕ್ಕೆ ಬರುತ್ತದೆ. ಸರಿಸುಮಾರು ಹನ್ನೊಂದೂವರೆ ವರ್ಷ ವಯಸ್ಸಿನಲ್ಲಿ ಆರಂಭವಾಗುವ ವೃಷಣಗಳು ದೊಡ್ಡದಾಗುವ ಪ್ರಕ್ರಿಯೆ ಸುಮಾರು ಆರು ತಿಂಗಳುಗಳ ಕಾಲ ಇರುತ್ತದೆ. ವೃಷಣಗಳು ದೊಡ್ಡದಾದ ಬಳಿಕ ಶಿಶ°ವೂ ಗಾತ್ರದಲ್ಲಿ ಬೆಳೆಯುತ್ತದೆ. ವೃಷಣಗಳು ಮತ್ತು ಶಿಶ° ಗಾತ್ರ ಪಡೆಯುವ ಪ್ರಕ್ರಿಯೆ ನಡೆಯುವುದು ಜನನಾಂಗದ ಸುತ್ತಲೂ ಕೂದಲುಗಳು ಹುಟ್ಟುವುದಕ್ಕಿಂತ ಮುಂಚಿತವಾಗಿ. ಇದರ ಮುಂದಿನ ಹಂತದಲ್ಲಿ ಜನನಾಂಗದ ಸುತ್ತಲೂ ಮತ್ತು ಕಂಕುಳುಗಳಲ್ಲಿ ಕೂದಲು ಬೆಳೆಯುತ್ತದೆ. ಮುಂದೆ ಸ್ವರ ಗಡುಸಾಗುತ್ತದೆ ಹಾಗೂ ಸ್ನಾಯುಗಳು ಸಗಾತ್ರ ಪಡೆಯುತ್ತವೆ. ಹರೆಯಕ್ಕೆ ಬರುವ ಪ್ರಕ್ರಿಯೆಯ ಕೊನೆಯ ಹಂತದಲ್ಲಿ ಮುಖದಲ್ಲಿ ಗಡ್ಡ – ಮೀಸೆಗಳು ಕಾಣಿಸಿಕೊಳ್ಳುತ್ತವೆ. ಬಾಲಕರಲ್ಲಿ ಹರೆಯಕ್ಕೆ ಬರುವ ಪ್ರಕ್ರಿಯೆಯ ಆರಂಭ ಕಾಲದಲ್ಲಿಯೇ, ಟೆಸ್ಟೊಸ್ಟಿರೋನ್‌ ಹಾರ್ಮೋನ್‌ ಉತ್ಪಾದನೆಯಿಂದ ವೀರ್ಯಾಣುಗಳ ಉತ್ಪಾದನೆ ಆರಂಭವಾಗಿ ಸಂತಾನೋತ್ಪತ್ತಿ ಸಾಮರ್ಥ್ಯ ಮೂಡುತ್ತದೆ.

“ದೈಹಿಕ ಬೆಳವಣಿಗೆಯ ಪ್ರವಾಹ”
“ದೈಹಿಕ ಬೆಳವಣಿಗೆಯ ಪ್ರವಾಹ’ ಎನ್ನಬಹುದಾದ ದೈಹಿಕ ಎತ್ತರದಲ್ಲಿ ಉಂಟಾಗುವ ಕ್ರಿಪ್ರ ಹೆಚ್ಚಳವು ಹರೆಯಕ್ಕೆ ಬರುವುದರ ಜತೆಗೂಡುತ್ತದೆ. ದೈಹಿಕ ಎತ್ತರದಲ್ಲಿ ಉಂಟಾಗುವ ಈ ಹೆಚ್ಚಳವು ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳ ಕಾಲ ನಡೆಯುತ್ತದೆ. ವಯಸ್ಕರು ಹೊಂದಿರುವ ದೈಹಿಕ ಎತ್ತರದ ಶೇ.17-18ರಷ್ಟು ಉಂಟಾಗುವುದು ಹರೆಯಕ್ಕೆ ಬರುವ ಅವಧಿಯಲ್ಲಿಯೇ. ಎತ್ತರದಲ್ಲಿ ಹೆಚ್ಚಳವು ಸೊಂಟದಿಂದ ಎದೆಯವರೆಗಿನ ಮುಂಡ ಭಾಗ ಮತ್ತು ತೋಳುಗಳನ್ನು ಪ್ರಭಾವಿಸುವುದಾದರೂ, ತೋಳುಗಳ ಬೆಳವಣಿಗೆಯು ಮೊದಲು ಸಂಭವಿಸುತ್ತದೆ. ಈ “ಬೆಳವಣಿಗೆಯ ಪ್ರವಾಹ’ ಬಾಲಕರಿಗಿಂತ ಬಾಲಕಿಯರಲ್ಲಿ ಮುಂಚಿತವಾಗಿ ಘಟಿಸುತ್ತಿದ್ದು, ಬಾಲಕಿಯರು ಬಾಲಕರಿಗಿಂತ ಸರಿಸುಮಾರು ಎರಡು ವರ್ಷ ಮುನ್ನವೇ ಈ ಬದಲಾವಣೆಯನ್ನು ಕಾಣುತ್ತಾರೆ. ಬಾಲಕಿಯರು ಸಾಮಾನ್ಯವಾಗಿ ಈ ದೈಹಿಕ ಬೆಳವಣಿಗೆಯನ್ನು ಕಾಣುವುದು ಋತುಚಕ್ರ ಆರಂಭಕ್ಕೆ ಮುಂಚಿತವಾಗಿ. ಹರೆಯಕ್ಕೆ ಬರುವಾಗ ಹದಿಹರೆಯದವರ ದೈಹಿಕ ತೂಕವು ಇಮ್ಮಡಿಸುತ್ತದೆ ಹಾಗೂ ಎತ್ತರವು ಶೇ.15ರಿಂದ 20ರಷ್ಟು ವೃದ್ಧಿಸುತ್ತದೆ. ವಯಸ್ಕ ವ್ಯಕ್ತಿಯ ದೈಹಿಕ ತೂಕದ ಶೇ.40ರಷ್ಟು ಗಳಿಕೆಯಾಗುವುದು ಆತ ಅಥವಾ ಆಕೆ ಹರೆಯಕ್ಕೆ ಬರುವ ಸಂದರ್ಭದಲ್ಲಿಯೇ.

ಎಲುಬುಗಳ ಬೆಳವಣಿಗೆ 
ಮತ್ತು ಖನಿಜೀಭವನ

ಬಾಲಕಿಯರಲ್ಲಿ ಖನಿಜೀಭವನವು, ಋತುಚಕ್ರದ ಆರಂಭ ಕಾಲದಲ್ಲಿ, ದೈಹಿಕ ಬೆಳವಣಿಗೆಯ ಪ್ರವಾಹ ಉತ್ತುಂಗ ಸ್ಥಿತಿಯನ್ನು ತಲುಪಿದ ಬಳಿಕ, ಉಚ್ಛಾ†ಯ ಸ್ಥಿತಿಯಲ್ಲಿರುತ್ತದೆ. ಬಾಲಕರಲ್ಲಿ ಭುಜಗಳು ವಿಸ್ತಾರವಾದರೆ ಬಾಲಕಿಯರಲ್ಲಿ ಪೃಷ್ಠಭಾಗವು ವಿಸ್ತರಿಸುತ್ತದೆ.

ತೂಕದಲ್ಲಿ ಬದಲಾವಣೆ
ಹದಿಹರೆಯದ ಬಾಲಕಿಯರು, ಬಾಲಕರಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ದೈಹಿಕ ಕೊಬ್ಬನ್ನು ಬೆಳೆಸಿಕೊಳ್ಳುತ್ತಾರಲ್ಲದೆ, ದೇಹದ ಮೇಲು ಮತ್ತು ಕೆಳಗಿನ ಭಾಗಗಳಲ್ಲಿ ಕೊಬ್ಬಿನ ಪುನರ್‌ ಹಂಚಿಕೆಯನ್ನು ಪಡೆದು ಉಬ್ಬುತಗ್ಗುಗಳುಳ್ಳ ದೈಹಿಕ ರೂಪವನ್ನು ಗಳಿಸುತ್ತಾರೆ. ಬಾಲಕರಲ್ಲೂ ದೈಹಿಕ ಕೊಬ್ಬಿನ ಬೆಳವಣಿಗೆಯಾಗುತ್ತದಾದರೂ ಅವರಲ್ಲಿ ಸ್ನಾಯುಗಳ ಬೆಳವಣಿಗೆಯು ಕ್ಷಿಪ್ರವಾಗಿರುತ್ತದೆ. ವಯಸ್ಕರಾಗುವ ಪ್ರಕ್ರಿಯೆಯ ಅಂತ್ಯದಲ್ಲಿ ಬಾಲಕರು ತಮ್ಮದೇ ದೈಹಿಕ ಗಾತ್ರದ ಬಾಲಕಿಯರಿಗಿಂತ ಸರಿಸುಮಾರು ಒಂದೂವರೆ ಪಟ್ಟು ಹೆಚ್ಚು ಸ್ನಾಯುರಾಶಿಯನ್ನು ಬೆಳೆಸಿಕೊಂಡಿರುತ್ತಾರೆ.

ಇತರ ಬದಲಾವಣೆಗಳು
ಹೃದಯ ವ್ಯವಸ್ಥೆ ಮತ್ತು ಶ್ವಾಸಕೋಶಗಳ ಮಾಗುವಿಕೆಯು ಈ ಅಂಗಗಳ ಕಾರ್ಯಕ್ಷಮತೆಯ ಹೆಚ್ಚಳಕ್ಕೆ ಕಾರಣವಾಗಿ, ವ್ಯಕ್ತಿಯ ಒಟ್ಟಾರೆ ಕ್ಷಮತೆ ಮತ್ತು ಸಾಮರ್ಥ್ಯಗಳನ್ನು ವೃದ್ಧಿಸುತ್ತದೆ. ಈ ಪರಿವರ್ತನೆಗಳು ಬಾಲಕಿಯರಿಗಿಂತ ಬಾಲಕರಲ್ಲಿ ದಟ್ಟವಾಗಿ ಎದ್ದು ಕಾಣುತ್ತವೆ. ಹರಯಕ್ಕೆ ಬರುವುದು ಒಂದು ಸಹಜ ಸ್ಥಿತಿ, ಪರಿವರ್ತನೆ – ಅನಾರೋಗ್ಯವಲ್ಲ; ಆದರೆ ಈ ಹಂತದಲ್ಲಿ ಅನೇಕ ವೈದ್ಯಕೀಯ ಸಮಸ್ಯಾಸ್ಥಿತಿಗಳು ಮತ್ತು ಅನಾರೋಗ್ಯಗಳು ಉಂಟಾಗಬಹುದು. ಹರಯಕ್ಕೆ ಬರುವುದರ ಜತೆಗೆ ನಿಕಟ ಸಂಬಂಧ ಹೊಂದಿರುವ ಕೆಲವು ಆರೋಗ್ಯ ಸಮಸ್ಯೆಗಳೆಂದರೆ:
– ಮೊಡವೆಗಳು
– ಗೈನೆಕೊಮಾಸ್ಟಿಯಾ: ಬಾಲಕರಲ್ಲಿ ಸ್ತನಗಳು ಊದಿಕೊಳ್ಳುವುದಕ್ಕೆ ವೈದ್ಯಕೀಯ ಪರಿಭಾಷೆಯ ಪದ ಇದು. ಹರಯಕ್ಕೆ ಬರುವ ಸಂದರ್ಭದಲ್ಲಿ ಉಂಟಾಗುವ ಹಾರ್ಮೋನ್‌ ಬದಲಾವಣೆಗಳು ಸಹಜ ಆರೋಗ್ಯ ಹೊಂದಿರುವ ಬಾಲಕರಲ್ಲಿ ಗೈನೆಕೊಮಾಸ್ಟಿಯಾ ಉಂಟು ಮಾಡಬಹುದಾಗಿದ್ದು, ಇದು ಆರರಿಂದ 18 ತಿಂಗಳುಗಳ ತನಕ ಇರುತ್ತದೆ. ಇದು ಸರಿಸುಮಾರು 13ನೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾಗಿದ್ದು, ಸಹಜ ಹದಿಹರಯದ ಬಾಲಕರ ಪೈಕಿ ಒಂದೂವರೆಯಷ್ಟು ಮಂದಿಯಲ್ಲಿ ಉಂಟಾಗುತ್ತದೆ. 
– ರಕ್ತಹೀನತೆ: ಬಾಲಕರಲ್ಲಿ ಹರಯಕ್ಕೆ ಬರುವ ಸಹಜ ಪ್ರಕ್ರಿಯೆಯ ಭಾಗವಾಗಿ ರಕ್ತದಲ್ಲಿ ಕಬ್ಬಿಣದಂಶ ಮತ್ತು ಹಿಮೊಗ್ಲೊಬಿನ್‌ ಅಧಿಕಗೊಳ್ಳುತ್ತವೆ. ಆದರೆ, ಈ ಹೆಚ್ಚಳ ಬಾಲಕಿಯರಲ್ಲಿ ಕಂಡುಬರುವುದಿಲ್ಲ. ಹರಯದ ಬಾಲಕಿಯರು ಕಬ್ಬಿಣದಂಶ ಸಹಿತ ಆಹಾರವನ್ನು ಕಡಿಮೆ ಸೇವಿಸುವ ಸಂಭವವಿರುವುದರ ಜತೆಗೆ, ಋತುಚಕ್ರದ ಸಂದರ್ಭದಲ್ಲಿ ಆಗುವ ರಕ್ತಸ್ರಾವವೂ ಜತೆಗೂಡಿ ರಕ್ತಹೀನತೆಯನ್ನು ಉಂಟುಮಾಡಬಹುದಾಗಿದೆ. 
– ಲೈಂಗಿಕವಾಗಿ ಹರಡುವ ಕಾಯಿಲೆಗಳು: ಹರಯಕ್ಕೆ ಬರುವ ಹೊತ್ತಿನಲ್ಲಿಯೇ ಬಾಲಕ – ಬಾಲಕಿಯರು ಲೈಂಗಿಕವಾಗಿ ಸಕ್ರಿಯರಾದಲ್ಲಿ ಅಂಥವರು ಎಚ್‌ಐವಿ ಸಹಿತ ವಿವಿಧ ಲೈಂಗಿಕವಾಗಿ ಹರಡುವ ಸೋಂಕುರೋಗಗಳಿಗೆ ತುತ್ತಾಗುವ ಸಂಭವ ಅಧಿಕವಾಗಿದೆ. 
– ಸ್ಕೊಲಿಯೋಸಿಸ್‌: ಹರಯಕ್ಕೆ ಬರುವ ಸಂದರ್ಭದಲ್ಲಿ ಉಂಟಾಗುವ ಕ್ಷಿಪ್ರಗತಿಯ ದೈಹಿಕ ಬೆಳವಣಿಗೆಯಿಂದಾಗಿ ಬೆನ್ನುಮೂಳೆಯ ಅಸಹಜ ಬಾಗುವಿಕೆ (ಸ್ಕೊಲಿಯೋಸಿಸ್‌) ತೀವ್ರಗೊಳ್ಳಬಹುದು ಅಥವಾ ಮೊದಲ ಬಾರಿಗೆ ಪತ್ತೆಯಾಗಬಹುದು. 
– ದೃಷ್ಟಿ ಸಾಮರ್ಥ್ಯದಲ್ಲಿ ಬದಲಾವಣೆಗಳು: ಕಣ್ಣಿನ ಆಕ್ಸಿಯಲ್‌ ವ್ಯಾಸ ಬೆಳವಣಿಗೆ ಕಾಣುವುದರಿಂದ ಹರಯಕ್ಕೆ ಬರುವ ಸಂದರ್ಭದಲ್ಲಿ ಸಮೀಪ ದೃಷ್ಟಿದೋಷ (ಮೇಯೋಪಿಯಾ) ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. 
– ಮಸ್ಕಾಲೊಸ್ಕೆಲಿಟಲ್‌ ಹಾನಿಗಳು: ಹರಯಕ್ಕೆ ಬರುವ ಸಮಯದಲ್ಲಿ ನಡೆಯುವ ಕ್ಷಿಪ್ರಗತಿಯ ದೈಹಿಕ ಬೆಳವಣಿಗೆ ಮತ್ತು ಸ್ನಾಯುರಾಶಿಯ ಆಧಿಕ್ಯ ಹದಿಹರಯದವರಲ್ಲಿ ಮಸ್ಕಾಲೊಸ್ಕೆಲಿಟಲ್‌ ಹಾನಿಗಳಿಗೆ ಕಾರಣವಾಗುಬಹುದು. ಎಲುಬುಗಳ ಬೆಳವಣಿಗೆಯು ಎಲುಬುಗಳು ಖನಿಜೀಭವನಕ್ಕಿಂತ ಮುಂಚಿತವಾಗಿಯೇ ನಡೆಯುವುದರಿಂದ ಹದಿಹರಯದವರಲ್ಲಿ ಮೂಳೆಮುರಿತ ಉಂಟಾಗುವ ಸಾಧ್ಯತೆಗಳು ಅಧಿಕ. ಅಲ್ಲದೆ, ಸೊಂಟದಿಂದ ಕುತ್ತಿಗೆಯ ತನಕದ ಭಾಗಕ್ಕಿಂತ ಮುಂಚಿತವಾಗಿ ತೋಳುಗಳ ಬೆಳವಣಿಗೆ ನಡೆಯುವುದರಿಂದ ಕೆಲವು ಸಂದುಗಳು ಸೀಮಿತ ಚಲನೆ – ಚಟುವಟಿಕೆ ಪಡೆಯಬಹುದಾಗಿದ್ದು, ಇದು ಸೆಳೆತ, ಉಳುಕುಗಳು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ.  
– ಅಸಹಜ, ಅಧಿಕ, ಅನಿಯಮಿತ ಋತುಸ್ರಾವ (ಡಿಸ್‌ಫ‌ಂಕ್ಷನಲ್‌ ಯುಟೈರೈನ್‌ ಬ್ಲೀಡಿಂಗ್‌): ಇತ್ತೀಚೆಗೆ ಋತುಚಕ್ರ ಆರಂಭಗೊಂಡ ಬಾಲಕಿಯರು ಅನಿಯಮಿತವಾದ, ಸುದೀರ್ಘ‌ವಾದ ಅಥವಾ ಅಧಿಕ ಋತುಸ್ರಾವವನ್ನು ಅನುಭವಿಸಬಹುದು. ಅಂಡ ಬಿಡುಗಡೆಗೊಳ್ಳದಿರುವುದು (ಅನೊವುಲೇಶನ್‌) ಹರಯಕ್ಕೆ ಬಂದ ಬಾಲಕಿಯರಲ್ಲಿ ಅತಿ ಸಾಮಾನ್ಯವಾಗಿ ಅಸಹಜ ಋತುಸ್ರಾವಕ್ಕೆ ಕಾರಣವಾಗಿರುತ್ತದೆ. ಈ ಸ್ಥಿತಿಯನ್ನು ವಿಸ್ತೃತ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ. 

ಮಾನಸಿಕ ಪರಿವರ್ತನೆಗಳು
ಸಾಮಾಜಿಕ 
ಬದಲಾವಣೆಗಳು:

ಮಕ್ಕಳು ಈ ಕೆಳಗಿನ ಬದಲಾವಣೆಗಳನ್ನು ಅನುಭವಿಸುತ್ತಾರೆ: 
– ಸ್ವವ್ಯಕ್ತಿತ್ವಕ್ಕಾಗಿ ತಹತಹ: ಹದಿಹರಯದ ಮಕ್ಕಳು ತಾನು  ಯಾರು, ತನ್ನ ವ್ಯಕ್ತಿತ್ವವೇನು, ಈ ಜಗತ್ತಿನಲ್ಲಿ ತನ್ನ ಸ್ಥಾನಮಾನವೇನು ಎಂಬುದನ್ನು ಕಂಡುಕೊಳ್ಳುವುದರಲ್ಲಿ ವ್ಯಸ್ತರಾಗಿರುತ್ತಾರೆ. ಈ ಹುಡುಕಾಟವು ಲಿಂಗ, ಸ್ನೇಹಿತ ವಲಯ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಕೌಟುಂಬಿಕ ನಿರೀಕ್ಷೆಗಳಿಂದ ಪ್ರಭಾವಿತವಾಗುತ್ತದೆ. 

– ಹೆಚ್ಚು ಸ್ವಾತಂತ್ರ್ಯದ ಬಯಕೆ: ಇದು ಬಾಲಕ ಅಥವಾ ಬಾಲಕಿ ತೆಗೆದುಕೊಳ್ಳುವ ನಿರ್ಧಾರಗಳು ಹಾಗೂ ಈ ಮಗು ಕುಟುಂಬ ಮತ್ತು ಸ್ನೇಹಿತರ ಜತೆಗೆ ಹೊಂದಿರುವ ಸಂಬಂಧಗಳನ್ನು ಪ್ರಭಾವಿಸುವ ಸಾಧ್ಯತೆಯಿದೆ. 

– ಮನೆ ಹಾಗೂ ಶಾಲೆಯಲ್ಲಿ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುವ ಬಯಕೆ.

– ಹೊಸ ಅನುಭವಗಳ ಬಯಕೆ: ಹದಿಹರಯದ ಮಿದುಳಿನ ಬೆಳವಣಿಗೆಯು ಆ ವಯಸ್ಸಿನವರಲ್ಲಿ ಹೊಸ ಹೊಸ ಅನುಭವಗಳಿಗಾಗಿ ಹುಡುಕಾಡುವುದು ಮತ್ತು ಅಪಾಯಗಳನ್ನು ಮೈಮೇಲೆಳೆದುಕೊಳ್ಳುವ ಸಾಹಸಮಯ ನಡವಳಿಕೆಗಳಿಗೆ ಕಾರಣವಾಗುತ್ತದೆ. ಆದರೆ, ತಮ್ಮ ಭಾವನಾತ್ಮಕ ಒಳತೋಟಿಗಳನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯ ಅವರಿಗಿನ್ನೂ ಬಂದಿರುವುದಿಲ್ಲ.

– “ತಪ್ಪು’ ಮತ್ತು “ಸರಿ’ಗಳ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳುವುದು: ಮಗು ತನ್ನದೇ ಆದ ಬಲಯುತ ಮೌಲ್ಯಗಳು ಮತ್ತು ನೈತಿಕತೆಯ ನಿಯಮಗಳನ್ನು ಬೆಳೆಸಿಕೊಳ್ಳಲು ಆರಂಭಿಸುತ್ತದೆ. ತಮ್ಮ ಚಟುವಟಿಕೆಗಳು, ನಿರ್ಧಾರಗಳು ಮತ್ತು ಅವುಗಳ ಪರಿಣಾಮಗಳ ಜವಾಬ್ದಾರಿ ತಮ್ಮದೇ ಎಂಬುದನ್ನು ಹದಿಹರಯದವರು ಕಂಡುಕೊಳ್ಳಲಾರಂಭಿಸುತ್ತಾರೆ. ಅವರು ಹೆಚ್ಚು ಹೆಚ್ಚು ಪ್ರಶ್ನಿಸುವ ಮನೋಭಾವವುಳ್ಳವರಾಗುತ್ತಾರೆ. ನಿಮ್ಮ ಮಾತುಗಳು ಮತ್ತು ಚಟುವಟಿಕೆಗಳು ನಿಮ್ಮ ಮಗುವಿನ “ಸರಿ’ ಮತ್ತು “ತಪ್ಪು’ಗಳ ಪರಿಕಲ್ಪನೆಗಳ ಮೇಲೆ ಪ್ರಭಾವ ಬೀರಿ ಅವುಗಳನ್ನು ರೂಪುಗೊಳಿಸುತ್ತವೆ.  

– ವಿಶೇಷತಃ ನಡವಳಿಕೆ, ಸ್ವಂತಿಕೆ ಮತ್ತು ಆತ್ಮಗೌರವದ ವಿಚಾರಗಳಲ್ಲಿ ಹದಿಹರಯದವರು ತಮ್ಮ ಸ್ನೇಹಿತವಲಯದಿಂದ ಪ್ರಭಾವಿತರಾಗುತ್ತಾರೆ. 

– ಲೈಂಗಿಕ ವ್ಯಕ್ತಿತ್ವದ ಬೆಳವಣಿಗೆ ಮತ್ತು ಪರಿಶೋಧ: ಮಗು ಪ್ರೇಮಯುಕ್ತ ಸಂಬಂಧಗಳನ್ನು ಬೆಳೆಸಿಕೊಳ್ಳಬಹುದು ಹಾಗೂ “ಡೇಟಿಂಗ್‌’ನಲ್ಲಿ ತೊಡಗಬಹುದು. ಆದರೆ ಇವು ಆಪ್ತ ದೈಹಿಕ ಸಂಬಂಧಗಳೇ ಆಗಿರಬೇಕೆಂದೇನೂ ಇಲ್ಲ. ಕೆಲವು ಹದಿಹರಯದವರಿಗೆ ಆಪ್ತ ಅಥವಾ ಲೈಂಗಿಕ ಸಂಬಂಧಗಳು ಬಹುವರ್ಷಗಳ ತನಕ ಉಂಟಾಗಿರುವುದಿಲ್ಲ. 

– ವಿವಿಧ ರೀತಿಗಳಲ್ಲಿ ಸಂವಹನ:   ನಿಮ್ಮ ಮಗು ತನ್ನ ಸ್ನೇಹಿತರ ಜತೆಗೆ ಹೇಗೆ ಸಂವಹನ ನಡೆಸುತ್ತದೆ ಮತ್ತು ಹೊರಗಿನ ವಿಶಾಲ ಜಗತ್ತನ್ನು ಅರಿತು ಕೊಳ್ಳುತ್ತದೆ ಎಂಬುದರ ಮೇಲೆ ಇಂಟರ್‌ನೆಟ್‌, ಮೊಬೈಲ್‌ ಫೋನ್‌ ಮತ್ತು ಸಾಮಾಜಿಕ ಮಾಧ್ಯಮ ಗಮ ನಾರ್ಹವಾಗಿ ಪ್ರಭಾವ ಬೀರಬಲ್ಲವು.

– ಡಾ| ಜಯಶ್ರೀ ಕೆ.,   
ಪೀಡಿಯಾಟ್ರೀಶಿಯನ್‌, 
ಪೀಡಿಯಾಟ್ರಿಕ್ಸ್‌  ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ,  ಡಾ| ಅಂಬೇಡ್ಕರ್‌ ವೃತ್ತ, ಮಂಗಳೂರು.

ಟಾಪ್ ನ್ಯೂಸ್

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.