ಡಿಡಿಪಿಐಗಳ 2ನೇ ಹಂತದ ವರ್ಗಾವಣೆ
Team Udayavani, Aug 20, 2017, 7:25 AM IST
ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ
ಎರಡನೇ ಹಂತದ ವರ್ಗಾವಣೆ ಶನಿವಾರ ನಡೆದಿದೆ.
ಈ ಹಿಂದೆ 30 ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಹಲವು ಶಾಸಕರ ಅಸಮಾಧಾನದಿಂದ ಆ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆಹಿಡಿದು, ಶಾಸಕರ ಒತ್ತಾಸೆಯಂತೆ ಪರಿಷ್ಕರಿಸಿ ಪುನರ್ ಪ್ರಕಟಿಸಿದ್ದರು.
ಇದಾದ ನಂತರ ಶನಿವಾರ ಡಿಡಿಪಿಐಗಳ ವರ್ಗಾವಣೆಯ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲಾ ಉಪನಿರ್ದೇಶಕಿ ಎಂ.ಎಂ.ಸಿಂಧೂರ ಅವರನ್ನು ವಿಜಯಪುರದ ಡಯಟ್ ಪ್ರಾಂಶುಪಾಲರ ಹುದ್ದೆಗೆ, ರಾಯಚೂರು ಉಪನಿರ್ದೇಶಕ ಮಂಜುನಾಥ್ ರನ್ನು ಹಾಸನ ಜಿಲ್ಲೆಗೆ, ಯಾದಗಿರಿ ಡಯಟ್ ಪ್ರಾಂಶುಪಾಲ ವಾಲ್ಟರ್ ಹಿಲೇರಿ ಡಿಮೇಲೋ ಅವರನ್ನು ಕೊಡಗು ಡಯಟ್‌ಗೆ ವರ್ಗಾಯಿಸಲಾಗಿದೆ.
ಕೊಡಗು ಡಯಟ್ ಪ್ರಾಂಶುಪಾಲ ಶ್ರೀಶೈಲ ಶಾಂತಪ್ಪ ಬಿರಾದರ್-ಯಾದಗಿರಿಗೆ, ಉಡುಪಿ ಜಿಲ್ಲಾ ಉಪನಿರ್ದೇಶಕ ಈಶ್ವರ ಎಚ್.ನಾಯ್ಕ- ಉತ್ತರ ಕನ್ನಡ ಜಿಲ್ಲಾ ಡಯಟ್‌ಗೆ, ಬೀದರ್ ಉಪನಿರ್ದೇಶಕ ಎಚ್.ಸಿ.ಚಂದ್ರಶೇಖರ್- ಚಾಮರಾಜನಗರ ಡಯಟ್‌ಗೆ, ಕುಮಟಾ ಡಯಟ್ ಪ್ರಾಂಶುಪಾಲ ಎಚ್.ಆರ್. ಬಸಪ್ಪ- ಶಿಕ್ಷಕರ ಕಲ್ಯಾಣ ನಿಧಿ ಉಪನಿರ್ದೇಶಕ ಹುದ್ದೆಗೆ, ಕೊಪ್ಪಳ ಜಿಲ್ಲಾ ಉಪನಿರ್ದೇಶಕಿ ಅಮಿತಾ ಎನ್. ಯರಗೋಳ್ಕರ್-ಸಿಟಿಇ ಕಲಬುರಗಿಗೆ ರೀಡರ್ ಆಗಿ ಮತ್ತು ಚಾಮರಾಜನಗರ ಡಯಟ್ ಪ್ರಾಂಶುಪಾಲ ಎ.ಶ್ಯಾಮಸುಂದರ್ ಅವರನ್ನು ಬೀದರ್ ಜಿಲ್ಲಾ ಡಯಟ್‌ಗೆ ವರ್ಗಾಯಿಸಲಾಗಿದೆ. ಪಟ್ಟಿಯಲ್ಲಿ ಈ ಹಿಂದೆ ವರ್ಗಾವಣೆಯಾದವರ ಹೆಸರು ಸೇರಿಕೊಂಡಿದೆ. ವರ್ಷದ
ಆರಂಭದಲ್ಲಿ ಕೆಲವು ಅಧಿಕಾರಿಗಳ ವರ್ಗಾವಣೆಯಾಗಿತ್ತು. ಇದರಿಂದ ಅತೃಪ್ತಿಗೊಂಡಿರುವ ಕೆಲವರು ಶಾಸಕರ ಮೂಲಕ ಸಿಎಂ ಮೇಲೆ ಒತ್ತಡ ಹೇರಿದ್ದರು. ಇದರ ಪರಿಣಾಮ ಹೊಸ ಆದೇಶದಂತೆ ಕೆಲವರು ಹಳೇ ಸ್ಥಾನಕ್ಕೆ ವಾಪಸ್ ಆಗಿದ್ದಾರೆ.
ಕೆಇಎ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಪಿಜಿಸಿಇಟಿ-2017ರ ಎಂಬಿಎ, ಎಂಸಿಎ, ಎಂ.ಇ., ಎಂ.ಟೆಕ್ ಕೋರ್ಸ್‌ಗಳ ಪ್ರವೇಶದ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ದಾಖಲೆ ಪರಿಶೀಲನೆ, ಆಪ್ಷನ್ ಎಂಟ್ರಿ, ಸೀಟು ಹಂಚಿಕೆ ವೇಳಾಪಟ್ಟಿಯು ವೆಬ್‌ಸೈಟ್ http://kea.kar.nic.in ನಲ್ಲಿ ಲಭ್ಯವಿದೆ.
ಡಿಸಿಇಟಿ ಫಲಿತಾಂಶ: ಡಿಪ್ಲೊಮಾ ಅಭ್ಯರ್ಥಿಗಳಿಗೆ 2017ನೇ ಸಾಲಿನ 2ನೇ ವರ್ಷದ ಎಂಜಿನಿಯರಿಂಗ್‌ಕೋರ್ಸ್‌ಗೆ ಪ್ರವೇಶ ಪಡೆಯಲು ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗಿದೆ. ಪ್ರಾಧಿಕಾರದ
ವೆಬ್‌ಸೈಟ್ http://kea.kar.nic.in ನಲ್ಲಿ ಮಾಹಿತಿ ಲಭ್ಯವಿದ್ದು, ಫಲಿತಾಂಶ ಪರೀಶಿಲಿಸಿದ ನಂತರ
ಅಭ್ಯರ್ಥಿಗಳು ಆಪ್ಷನ್ ಎಂಟ್ರಿ ಮಾಡಿ ಮುಂದಿನ ಕ್ರಮ ವಹಿಸುವಂತೆ ಪ್ರಾಧಿಕಾರ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.