ತನಿಷ್ಕ್ನಿಂದ ರೆಡ್ ಕಾರ್ಪೆಟ್ ಸಂಗ್ರಹ ಅನಾವರಣ
Team Udayavani, Aug 20, 2017, 11:18 AM IST
ಬೆಂಗಳೂರು: ದೇಶದ ಚಿನ್ನಾಭರಣ ಉದ್ಯಮದ ಪ್ರತಿಷ್ಠಿತ ಬ್ರ್ಯಾಂಡ್ ಎನಿಸಿರುವ ತನಿಷ್ಕ್, ತಮ್ಮದೇ ಶೈಲಿಯಲ್ಲಿ ಮಹಿಳೆಯರ ಆಕರ್ಷಕ “ರೆಡ್ ಕಾರ್ಪೆಟ್’ ಸಂಗ್ರಹವನ್ನು ಅನಾವರಣಗೊಳಿಸಿದೆ.
ಶುಕ್ರವಾರ ನಗರದ ಹೋಟೆಲ್ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೈಟಾನ್ ಕಂಪನಿ ಲಿ.,ನ ಆಭರಣ ವಿಭಾಗದ ಸಿಇಒ ಸಿ.ಕೆ. ವೆಂಕಟರಮಣನ್, ಆಭರಣ ವಿಭಾಗದ ರಿಟೇಲ್ ಮತ್ತು ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ, ಮಾರ್ಕೆಟಿಂಗ್ ಸಹ ಉಪಾಧ್ಯಕ್ಷೆ ದೀಪಿಕಾ ತಿವಾರಿ, ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಹ ಉಪಾಧ್ಯಕ್ಷೆ ರೇವತಿಕಾಂತ್, ತನಿಷ್ಕ್ ರಿಟೇಲ್ ಜನರಲ್ ಮ್ಯಾನೇಜರ್ ರಾಜನ್ ಅಂಬ ಹಾಗೂ ಇತರರು ರೆಡ್ ಕಾರ್ಪೆಟ್ ಸಂಗ್ರಹವನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಹಿರಿಯ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ, “ಆಧುನಿಕ ಮಹಿಳೆಯರ ಅಭಿರುಚಿಯನ್ನು ಅರ್ಥ ಮಾಡಿಕೊಂಡಿರುವ ತನಿಷ್ಕ್, ಅವರಿಗಿಷ್ಟವಾಗುವ ವಿಶಿಷ್ಟ ಶೈಲಿಯ ಆಭರಣಗಳನ್ನು ನೀಡುತ್ತಿದೆ. “ರೆಡ್ ಕಾರ್ಪೆಟ್’ ಸಂಗ್ರಹ ಅನನ್ಯವಾಗಿದ್ದು, ಇದರಲ್ಲಿನ ಆಭರಣಗಳು ಜೆಮ್‌ಸ್ಟೋನ್ ಮತ್ತು ವಜ್ರಗಳೊಂದಿಗೆ ಇನ್ನಷ್ಟು ಆಕರ್ಷಕವಾಗಿವೆ. ಐಕಾನಿಕ್ ವಿನ್ಯಾಸದ ಈ ಸಂಗ್ರಹದಲ್ಲಿ ಸುಮಾರು 50 ಡಿಸೈನ್‌ಗಳಿವೆ. ಸುಮಾರು 20 ಲಕ್ಷ ರೂ.ನಿಂದ 1 ಕೋಟಿ 20 ಲಕ್ಷ ರೂ.ವರೆಗಿನ ಬೆಲೆಯ ಒಡವೆಗಳನ್ನು ಈ ನೂತನ ಸಂಗ್ರಹ ಒಳಗೊಂಡಿದೆ,’ ಎಂದರು.
“ಬೆಂಗಳೂರು ನಗರದಲ್ಲಿ ಇದೇ ಮೊದಲ ಬಾರಿ ರೆಡ್ ಕಾರ್ಪೆಟ್ ಸಂಗ್ರಹ ಪರಿಚಯಿಸಿದ್ದೇವೆ. ಇದುವರೆಗೆ ಮುಂಬೈ, ದೆಹಲಿ, ಕೋಲ್ಕತ ಹಾಗೂ ಅಹಮದಾಬಾದ್‌ನ ಆಯ್ದ ಮಳಿಗೆಗಳಲ್ಲಿ ಮಾತ್ರ ಈ ಸಂಗ್ರಹ ಲಭ್ಯವಿತ್ತು. ಪ್ರಸ್ತುತ ಜಯನಗರ ಹಾಗೂ ಡಿಕೆನ್‌ಸನ್ ರಸ್ತೆಯಲ್ಲಿನ ತನಿಷ್ಕ್ ಮಳಿಗೆಗಳಲ್ಲಿ ಈ ಆಕರ್ಷಕ ಸಂಗ್ರಹ ಲಭ್ಯವಿರಲಿದೆ. ಗ್ರಾಹಕರು 1800-3010-5002 ಗೆ ಕರೆ ಮಾಡಿ ಸಂಗ್ರಹದ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು,’ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.