ಗುರು ಕರುಣಾ ಸಾಗರ..

Team Udayavani, Aug 20, 2017, 12:13 PM IST

hub2.jpg

ಧಾರವಾಡ: ಗುರು ಕರುಣಾಮಯ, ದಯಾಮಯ, ಸತ್‌ಕ್ರಿಯೆಯ ಆಗರ, ಸುಜ್ಞಾನ ಸಾಗರ, ಮತಿಗೆ ಮಂಗಲವನೀಯುವ ಮಹಾದೇವನ ಸ್ವರೂಪನಾಗಿರುವನು. ಭಕ್ತಿಯ ಸಾಧಕನ ಅಂತರಂಗದಲ್ಲಿರುವ ಅಜ್ಞಾನ-ಅಂಧಕಾರ ಕಳೆದು ಸುಜ್ಞಾನದ ಜ್ಯೋತಿ ಬೆಳಗಿಸುವವವನು.

ನರಜನ್ಮತೊಡೆದು ಹರಜನ್ಮವನ್ನಾಗಿ ಮಾಡಿ ಪರಮ ಸುಖ ತೋರಿ ಭವಮುಕ್ತಗೊಳಿಸುವನು. ಕಣ್ಣಿಗೆ ಕಾಣದಿರುವ ನಿರ್ಗುಣ, ನಿರಾಕಾರ, ನಿರೂಪಮ, ನಿರಂಜನ ಮೂರ್ತಿಯಾದ ಮಹಾದೇವನನ್ನು ಸಾಕಾರ ಸಗುಣ ರೂಪದಲ್ಲಿ ಕರಸ್ಥಲಕೆ ತಂದು ಕೊಟ್ಟು ಭಕ್ತರ ಅಥವಾ ಸಾಧಕ ಶಿಷ್ಯರ ಹೃದಯದ ತಾಪ ಕಳೆದು ಬದುಕಿನ ತುಂಬಾ ಪ್ರಶಾಂತಿ ಹರಡುವನು.

ಅದಕ್ಕಾಗಿ ಬಸವಣ್ಣನವರು “ಶಿವಪಥವನರಿವೊಡೆ ಗುರುಪಥವೇ ಮೊದಲು’ ಎಂದಿದ್ದಾರೆ. ಅಕ್ಕಮಹಾದೇವಿ “ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ ಶರಣು’ಎಂದಿದ್ದಾಳೆ. ಚನ್ನಬಸವಣ್ಣನವರು “ಗುರು ಕರುಣಿಸಲು ಬಿಟ್ಟಿತ್ತು ಮಾಯೆ, ಮರವೆ, ಪ್ರಪಂಚ, ಕರ್ಮಪಾಶ’ ಎಂದಿದ್ದಾರೆ. 

ಗುರುವಾದವನು ಶಿಷ್ಯರ ಅಥವಾ ಭಕ್ತರ ಅಂಗದಾಶ್ರಯದಲ್ಲಿರುವ ಕಾಮ, ಕ್ರೋಧಾದಿಗಳನ್ನು, ಸಪ್ತವ್ಯಸನಗಳನ್ನು ಅಷ್ಟ ಮದಂಗಗಳನ್ನು, ತ್ತೈಮಲಗಳನ್ನು ಕಳೆದು ಲಿಂಗಾದಾಶ್ರದಲ್ಲಿರುವ ಭಕ್ತಿ, ಜ್ಞಾನ ವೈರಾಗ್ಯ, ಸದಾಚಾರ ಸತ್ಪಥದ ಸದ್ಗುಣಗಳನ್ನು ಬೆಳೆಸಿ ಪರಮ ಸುಖ ತೋರುವ ಕರುಣಾ ಸಾಗರನೇ ನಿಜವಾದ ಗುರುವಾಗಿರುವನು.

ಅಂತಹ ಗುರುವಿಗೆ ಶರಣಾಗತರಾಗಿ ಗುರುವಿಗೆ ಶರಣೆಂದು, ಗುರುವಿತ್ತ ಲಿಂಗಕ್ಕೆ ಶರಣೆಂದು ಜೀವಭಾವವಳಿದು ಶಿವಭಾವದಲ್ಲಿ ಬದುಕಿದಾಗ ನಮ್ಮ ಬದುಕು ಭವ್ಯವಾಗುವುದು. ಅಂತಹ ಸದ್ಗುರುವಿನ ಮಹತಿಯನ್ನು ಅಜಗಣ್ಣ ಶರಣರು ಸುಂದರವಾಗಿ ವಚನದಲ್ಲಿ ಚಿತ್ರಿಸಿದ್ದಾರೆ.

ಅಂಗದಾಶ್ರಯವ ಕಳೆದು ಲಿಂಗದಾಶ್ರಯ ಮಾಡಿದ 
ಗುರುವೇ ಶರಣು ಶ್ರೀ ಗುರುಲಿಂಗವೇ ಶರಣು
ಪರಮ ಸುಖವ ತೋರಿದೆಯಾಗಿ
ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ
ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೇ ಶರಣು | ಎಂದಿದ್ದಾರೆ.

-ಸಂಗಮೇಶ್ವರ ದೇವರು, ಅನುಭವ ಮಂಟಪ, ಬಸವಕಲ್ಯಾಣ, ಬೀದರ ಜಿಲ್ಲೆ

ಟಾಪ್ ನ್ಯೂಸ್

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.