ಬರದಲ್ಲೂ ಕೈ ಹಿಡಿದ ಬದನೆ 20 ಗುಂಟೆಯಲ್ಲಿ ಭರ್ಜರಿ ಬೆಳೆ

Team Udayavani, Aug 21, 2017, 7:50 AM IST

badane.jpg

ಕಲಬುರಗಿಯ ಕಡೆ ನೀರಿಧ್ದೋನೇ ಪುಣ್ಯಾತ್ಮ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಿರುವಾಗ ಇಲ್ಲೊಂದು ಕುಟುಂಬ 20 ಗುಂಟೆ ಜಮೀನಿನಲ್ಲಿ ಭರ್ಜರಿಯಾಗಿ ಬದನೆಕಾಯಿ ಬೆಳೆಯುತ್ತಿದೆ. 

ಜೇವರ್ಗಿ ತಾಲೂಕಿನ ಕಲ್ಲೂರು (ಬಿ) ಗ್ರಾಮದ ಮಲಕಣ್ಣ ತಳವಾರ ಕುಟುಂಬ 20 ಗುಂಟೆ ಭೂಮಿಯಲ್ಲಿ  ಬದನೆಕಾಯಿ ಬೆಳೆದು ಗೆದ್ದಿದ್ದಾರೆ. ತಕ್ಕ ಮಟ್ಟಿಗೆ ಓದಿಕೊಂಡಿರುವ ಮಕ್ಕಳಾದರೂ ಸರಕಾರಿ ನೌಕರಿ, ಖಾಸಗಿ ನೌಕರಿ ಸಿಗಲಿಲ್ಲ ಎಂದು ಕೊರಗುವುದಕ್ಕಿಂತ ಇರುವ ಭೂಮಿಯಲ್ಲೇ ಅಪ್ಪನ ಹೆಗಲಿಗೆ ಹೆಗಲು ಕೊಟ್ಟು, ಅವ್ವನೊಂದಿಗೆ ಸೇರಿಕೊಂಡು ದುಡಿಯಲು ಮುಂದಾಗಿ, ಈಗ ತಿಂಗಳಿಗೆ 40 ಸಾವಿರ ರೂ.ಗೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. 

20 ಗುಂಟೆ ಭೂಮಿ
ಮಲಕಣ್ಣ ತಳವಾರ ಅವರು 20 ಗುಂಟೆಯಲ್ಲಿ ಮಾಂಜರಿ ಎನ್ನುವ ತಳಿಯ ಬದನೆ ಬೀಜಗಳನ್ನು ತಂದು, ಹೊಲದಲ್ಲಿಯೇ ಸಸಿಗಳನ್ನು ಮಾಡಿ, ನಾಟಿ ಮಾಡಿದ್ದಾರೆ. 20 ಸಾಲುಗಳಲ್ಲಿ ಒಟ್ಟು 2,500 ಗಿಡಗಳನ್ನು ಬೆಳೆದಿದ್ದಾರೆ. ಈಗ ಪ್ರತಿ ನಿತ್ಯ 1,000ದಿಂದ 1500 ರೂ. ಗಳಿಕೆ ಶುರುವಾಗಿದೆ.

“ನೀರಿನ ಲಭ್ಯತೆ ನೋಡಿಕೊಂಡು ಕೇವಲ 20ಗುಂಟೆಯಲ್ಲಿ ಬದನೆ ಬೆಳೆಯುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ನನ್ನ ಪತ್ನಿ ಸಂಗಮ್ಮ, ಮಕ್ಕಳಾದ ಸಿದ್ದಣ್ಣ, ಶಿವರಾಜ್‌ ಬದನೆಕಾಯಿ ಕಿತ್ತು, ಟ್ರೇಗಳಿಗೆ ತುಂಬಿ ಇಡುತ್ತಾರೆ. ದೊಡ್ಡ ಮಗ ಸಿದ್ದಣ್ಣ ತಳವಾರ ಮಾರುಕಟ್ಟೆಗೆ ಕೊಂಡೋಯ್ದು ಮಾರಾಟ ಮಾಡುವ ಹೊಣೆ ಹೊತ್ತಿದ್ದಾನೆ ಎನ್ನುತ್ತಾರೆ. ನಮಗೆ ಮಾರಾಟದ ಸಮಸ್ಯೆ ಇಲ್ಲ. ವಾರದ ಎರಡು ದಿನ ಹೊರತು ಪಡಿಸಿದರೆ ಜೇವರ್ಗಿ, ಸಿಂದಗಿ, ನೆಲೋಗಿ, ಮಂದೇವಾಲಗಳಲ್ಲಿ ಸಂತೆ ಇರುತ್ತದೆ. ಅಲ್ಲದೆ, ಕಲಬುರಗಿ ಮಾರುಕಟ್ಟೆಗೂ ಬದನೆಕಾಯಿ ತಗೊಂಡು ಹೋಗ್ತೀವೆ ಎನ್ನುತ್ತಾರೆ ಮಲಕಣ್ಣ ತಳವಾರ.

3ಲಕ್ಷ ರೂ. ಬಂದಿತ್ತು
ಕಳೆದ ವರ್ಷ ಬದನೆಕಾಯಿ ಇವರನ್ನು ಸಂಕಷ್ಟದಿಂದ ಪಾರು ಮಾಡಿದೆಯಂತೆ.  ಹೊಲದಿಂದ ಅನತಿ ದೂರದಲ್ಲಿ ಭೀಮಾ ನದಿ ಇದೆ. ಅಲ್ಲದೆ ಹೊಲದಲ್ಲಿ ಬಾವಿ ತೋಡಿಕೊಂಡಿದ್ದೇವೆ. ಹಾಗಾಗಿ ನಮ್ಮ ಜಮೀನಿನಲ್ಲಿ ಸಾಕಷ್ಟು ನೀರಿದೆ. ಹಾಗಂತ ಹೆಚ್ಚು ನೀರು ಬಳಸುತ್ತಿಲ್ಲ. 

ಕಳೆದ ವರ್ಷ 30 ಗುಂಟೆಯಲ್ಲಿ ಬದನೆ ಬೆಳೆದು 3ಲಕ್ಷ ರೂ.ಗಳನ್ನು ಗಳಿಕೆ ಮಾಡಿದ್ದೆವು.  ಅದರಿಂದ ಈ ವರ್ಷವೂ ಬದನೆಯನ್ನು ಬೆಳೆಯುತ್ತಿದ್ದೇವೆ. ಬದನೆಯಿಂದ ನಮಗೆ ಪ್ರತಿ ತಿಂಗಳು 40 ಸಾವಿರ ರೂ.ಗಿಂತ ಹೆಚ್ಚಿನ ಆದಾಯ ಬರುತ್ತಿದೆ. ಇಡೀ ಕುಟುಂಬ ಟೊಂಕ ಕಟ್ಟಿನಿಂತು ದುಡಿಯುತ್ತಿದ್ದೇವೆ. ಕೃಷಿ ನಂಬಿದವರನ್ನು ಯಾವತ್ತೂ ಕೈ ಬಿಟ್ಟಿಲ್ಲ. ಬಿಡೋದಿಲ್ಲ.. ಆದರೆ, ತುಂಬಾ ಜತನದಿಂದ ದುಡಿಯಬೇಕು ಎನ್ನುತ್ತಾರೆ ಮಕಲಣ್ಣ ತಳವಾರ.

– ಸೂರ್ಯಕಾಂತ ಎಂ.ಜಮಾದಾರ

ಟಾಪ್ ನ್ಯೂಸ್

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.