ಅವ್ಯವಸ್ಥೆ ನಡುವೆಯೇ ಬೆಂಗ್ಳೂರಲ್ಲಿ ಹಾಕಿ ಆಟಗಾರರ ಐಸ್ ಬಾತ್
Team Udayavani, Aug 21, 2017, 2:52 PM IST
ಬೆಂಗಳೂರು: ಉದ್ಯಾನಗರಿ ಸಾಯ್ (ಭಾರತೀಯ ಕ್ರೀಡಾ ಪ್ರಾಧಿಕಾರ)ನಲ್ಲಿ ನಡೆಯುತ್ತಿರುವ ಭಾರತ ಕಿರಿಯರ ರಾಷ್ಟ್ರೀಯ ಹಾಕಿ ತಂಡದ ತರಬೇತಿ ಶಿಬಿರದಲ್ಲಿ ಆಟಗಾರರು ಕಳಪೆ ಮೂಲ ಸೌಕರ್ಯಕ್ಕೊಳಗಾಗಿ ಸುದ್ದಿಯಾಗಿದ್ದಾರೆ. ಮುರಿದು ಹೋದ ಪ್ಲ್ರಾಸ್ಟಿಕ್ ಟ್ಯಾಂಕ್‌ನಲ್ಲಿ ಆಟಗಾರರನ್ನು “ಐಸ್ ಬಾತ್’ (ಐಸ್ ನೀರಿನ ಸ್ನಾನ) ಮಾಡಿಸಲಾಗಿದೆ ಎನ್ನುವ ದೂರು ಕೇಳಿ ಬಂದಿದೆ. ಆಂಗ್ಲ ಮಾಧ್ಯಮವೊಂದು ಫೋಟೋ ಸಹಿತ ವರದಿ ಮಾಡಿದೆ. ವೃತ್ತಿಪರ ಯುವ ಪ್ರತಿಭೆಗಳಿಗೆ ಕಳಪೆ ಮೂಲ ಸೌಕರ್ಯ ನೀಡಿದ ಸಾಯ್ ವಿರುದ್ಧ ಈಗ ಭಾರೀ ಟೀಕೆ ವ್ಯಕ್ತವಾಗಿದೆ.
ಬಯಲಿನಲ್ಲೇ “ಐಸ್ ಬಾತ್’: ಘಟನೆ ಬಗ್ಗೆ ಹೆಸರು ಹೇಳಲಿಚ್ಛಿಸದ ಪ್ರತ್ಯಕ್ಷದರ್ಶಿ ಆಂಗ್ಲ ಪತ್ರಿಕೆಗೆ ಮಾತನಾಡಿದ್ದಾರೆ. ಅವರು ಹೇಳಿದ್ದು ಇಷ್ಟು. “ತಂಡ ಉಳಿದು ಕೊಂಡಿರುವ ಹಾಸ್ಟೇಲ್ ಪಕ್ಕದಲ್ಲಿ ಮುರಿದು ಹೋಗಿರುವ ಹಳೆಯ ಪ್ಲ್ರಾಸ್ಟಿಕ್ ಟ್ಯಾಂಕಿಯೊಂದು ಇದೆ. ಆಟಗಾರರಿಗೆ ಅಲ್ಲಿಯೇ “ಐಸ್ ಬಾತ್’ ಮಾಡಿ ಸಲಾ ಗುತ್ತಿದೆ. ಹಾಗೆ ನೋಡುವುದಾದರೆ ತಲಾ ಇಬ್ಬರು ಆಟಗಾರರಿಗೆ ಒಳಾಂಗಣ ಜಾಗದಲ್ಲಿ ಟಬ್‌ಗಳನ್ನು ನೀಡಿ “ಐಸ್ ಬಾತ್’ಗೆ ವ್ಯವಸ್ಥೆ ಮಾಡಿಸಬೇಕು. ಪ್ರತಿಯೊಬ್ಬ ಆಟಗಾರನಿಗೆ 10-15 ನಿಮಿಷ ಐಸ್ ನೀರಿನ ಸ್ನಾನ ಸಿಗಬೇಕು. ಆದರೆ ಇಲ್ಲಿ ಒಂದೇ ಟಬ್‌ನಲ್ಲಿ 6-8 ಆಟಗಾರರು ಐಸ್ ನೀರಿನ ಸ್ನಾನ ಮಾಡುತ್ತಾರೆ. ಇದರಿಂದ ಐಸ್ ನೀರಿನ ಸ್ನಾನದ ಪರಿಣಾಮ ಆಟಗಾರರ ಮೇಲೆ ಬೀರುವುದಿಲ್ಲ ಎಂದಿದ್ದಾರೆ.
ಸಾಯ್ ಸ್ಟಷ್ಟನೆ: ಘಟನೆ ಕುರಿತಂತೆ ಸಾಯ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಕಳೆದ ತಿಂಗಳಷ್ಟೇ ಕಿರಿಯರ ರಾಷ್ಟ್ರೀಯ ಕ್ಯಾಂಪ್ ಆರಂಭವಾಗಿದೆ. ಟಬ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಶೀಘ್ರದಲ್ಲೇ ಅಳವಡಿಸುತ್ತೇವೆ ಎಂದಿದ್ದಾರೆ.
ಏನಿದು ಐಸ್ ಬಾತ್?
ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದ ಬಳಿಕ ಆಟಗಾರರು ರಿಲ್ಯಾಕ್ಸ್ ಮಾಡಲು ಐಸ್ ನೀರಿನ ಸ್ಥಾನ ಮಾಡುತ್ತಾರೆ. ಇದನ್ನು ಪ್ರತಿ ದಿನವೂ ಮಾಡಿದರೆ ಒಳ್ಳೆಯದು. ಇದನ್ನು “ಐಸ್ ಬಾತ್’ ಎಂದು ಕರೆಯಲಾಗುತ್ತದೆ. “ಐಸ್ ಬಾತ್” ಮಾಡುವುದರಿಂದ ಹಲವು ಪ್ರಯೋಜನವಿದೆ. ಆಟಗಾರನ ಆಯಾಸ ಶೀಘ್ರ ಪರಿಹಾರವಾಗುತ್ತದೆ. ಜತೆಗೆ ನೋವು ನಿವಾರಣೆಯಾಗುತ್ತದೆ. ಐಸ್ ನೀರಿನ ಸ್ನಾನಕ್ಕೆ ಒಳಾಂಗಣ ಕ್ರೀಡಾಂಗಣ ಉತ್ತಮ. ಕನಿಷ್ಠ ಎಂದರೂ 10/10 ವಿಸ್ತೀರ್ಣದಲ್ಲಿ ಟ್ಯಾಂಕ್ ಅಳವಡಿಸಬೇಕು. ಅದರಲ್ಲಿ ಒಬ್ಬ ಅಥವಾ ಇಬ್ಬರಿಗಷ್ಟೇ ಅವಕಾಶ. ಹೀಗೆ ಮಾಡಿದಾಗ ಐಸ್ ನೀರಿನ ಸ್ನಾನದ ಪರಿಣಾಮ ಕಾಣಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.