ವಿಶ್ವಶಕ್ತಿ-ವ್ಯಕ್ತಿಯ ಸಂಪರ್ಕ= ಪೂಜೆ

Team Udayavani, Aug 22, 2017, 7:10 AM IST

ganapa.jpg

ಮಳೆಗಾಲದಲ್ಲಿ ಮಳೆ ಆರಂಭವಾದ ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಹಬ್ಬ ಬರುತ್ತದೆ. ಇದೊಂದು ಅಪ್ಪಟ ಪ್ರಕೃತಿ ಆರಾಧನೆಯ ಹಬ್ಬ. ವರ್ಷಾರಂಭದಲ್ಲಿಯೇ ಪ್ರಕೃತಿ ನಮಗಾಗಿ ಕೊಡುತ್ತಿರುವ ಎಲ್ಲ ಸವಲತ್ತುಗಳಿಗಾಗಿ ಕೃತಜ್ಞತಾರ್ಪಣೆ. ಪೂಜೆ ಅಂದರೆ ಕೃತಜ್ಞತಾರ್ಪಣೆ. ಆದರೆ ಸದ್ದುಗದ್ದಲದ ನಡುವೆ ಕೆಲವು ಬಾರಿ ಮೂಲ ಉದ್ದೇಶ ಮರೆಯುವ ಸಾಧ್ಯತೆ ಇರುತ್ತದೆ. 

ಭಾದ್ರಪದ ಮಾಸದಲ್ಲಿ ಗಣೇಶನ ಹಬ್ಬ ಬರುತ್ತದೆ. ನಾಗನ ಸ್ಥಾನದಲ್ಲಿ ಸುಬ್ರಹ್ಮಣ್ಯನನ್ನು ಪೂಜಿಸುವ ಕ್ರಮವೂ ಇದೆ. ಅನಂತರ ಗಣೇಶನಿಗೆ ಪೂಜೆ. 

ಪ್ರಾಚೀನ ಕಾಲದಲ್ಲಿ ಜನರೆಲ್ಲ ಇರುತ್ತಿದ್ದುದು ನದಿ ತಟಗಳಲ್ಲಿ. ಇದಕ್ಕೆ ಮುಖ್ಯ ಕಾರಣ ನೀರಿನ ಆಶ್ರಯ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುವಾಗ ಕೇವಲ ನೀರಲ್ಲ, ಗುಡ್ಡ ಬೆಟ್ಟಗಳಿಂದ ಔಷಧೀಯ ಸಸ್ಯಗಳ ಸಂಪರ್ಕ ಹೊಂದಿದ ನೀರಾಗಿ ಹರಿಯುತ್ತದೆ. ಇದರ ಜೊತೆ ತಾಜಾ ಗುಣಮಟ್ಟದ ಮಣ್ಣೂ ಶೇಖರಣೆಯಾಗುತ್ತದೆ. ಈ ತಾಜಾ ಔಷಧೀಯ ಗುಣದ ಮಣ್ಣನ್ನು ತಂದು ಗಣಪತಿ ವಿಗ್ರಹ ತಯಾರಿಸುವುದು ಕ್ರಮವಾಗಿತ್ತು. ವಿಗ್ರಹ ತಯಾರಿಸುವಾಗ ಅಂದ ಚೆಂದದ ಪ್ರಶ್ನೆ ಮುಖ್ಯವಾಗಿರದೆ, ಪ್ರತಿಯೊಬ್ಬನಲ್ಲಿರುವ ಕಲಾವಂತನಿಗೆ ಒಂದು ವೇದಿಕೆಯಾಗಿರುತ್ತಿತ್ತು. ಒಟ್ಟಾರೆ ಮಣ್ಣಿನಲ್ಲಿ ದೇವನನ್ನು ಕಾಣುವ ಸಂಸ್ಕೃತಿಯಾಗಿತ್ತು. 

ಗಣೇಶ ಮನೆಗೆ ಬರುವುದೆಂದರೆ ಅದು ಸಂಭ್ರಮದ ದಿನ. ಇಲ್ಲಿ ವೈಭವ ಮುಖ್ಯವಲ್ಲ, ಪ್ರೀತಿಯ ಹೃದಯ ಮುಖ್ಯ. ಅದು ದೇವನ ದರ್ಶನ, ಪ್ರದರ್ಶನವಲ್ಲ. 

ವಿಗ್ರಹಕ್ಕೆ ಶುದ್ಧ ಅರಿಶಿನ ಮತ್ತು ಕುಂಕುಮದ ಲೇಪನವೇ ಬಣ್ಣವಾಗಿತ್ತು. ತೇದಿದ ಶ್ರೀಗಂಧದ ಬಳಕೆ ಇದ್ದೇ ಇರುತ್ತದೆ. ತಮ್ಮದೇ ವಠಾರದಲ್ಲಿ ಬೆಳೆದ ಅಕ್ಕಿ ಇತ್ಯಾದಿ ಧಾನ್ಯಗಳಿಂದ ಅಡುಗೆ ತಯಾರಿ ನಡೆಯುತ್ತಿತ್ತು. ಇದೆಲ್ಲವೂ ನಿಸರ್ಗದತ್ತವಾಗಿತ್ತು/ ಸಹಜವಾಗಿತ್ತು. ಕುಂಕುಮ, ಅರಶಿನ, ಶ್ರೀಗಂಧಕ್ಕೆ ಔಷಧೀಯ ಗುಣವಿದೆ. ಇದರ ಲೇಪನ, ಸ್ವೀಕರಣವೂ ಆರೋಗ್ಯದಾಯಿ. ಕುಂಕುಮ, ಅರಶಿನ ಲಕ್ಷಣದ ಸಂಕೇತವೂ ಹೌದು. ಒಟ್ಟಾರೆಯಾಗಿ ಪ್ರಕೃತಿಯಿಂದ ಬಂದ ಇವೆಲ್ಲ ವಸ್ತುಗಳು ನಮ್ಮಲ್ಲಿ ಒಂಥರ ಏಕತೆಯನ್ನು ತರಲೋಸುಗ ಹಬ್ಬಗಳ ಆಚರಣೆ ಬಂದಿರಬೇಕೆಂದೆನಿಸುತ್ತದೆ. ಯಾವುದೇ ರಾಸಾಯನಿಕ ಸಂಪರ್ಕವಿಲ್ಲದೆ ತಯಾರಿಸಿದ ಅಕ್ಕಿ, ಕಬ್ಬು, ಅರಳು, ಬೆಲ್ಲ, ಎಳ್ಳು ಇತ್ಯಾದಿಗಳನ್ನು ಸೇರಿಸಿದ ಅಡುಗೆ ತಯಾರಿಸಿದರೆ ಅದರ ರುಚಿಗಿಂತ ಔಷಧೀಯ ಗುಣ ಹೇಗಿರಲಿಕ್ಕಿಲ್ಲ? ಆಹಾರ ಮತ್ತು ಔಷಧ ಜತೆಜತೆಯಾಗಿದ್ದ ದಿನಗಳು ಅವು.

ಯಾವುದೇ ಒಂದು ವಿಷಯ ಸಹಜವಾಗಿರುತ್ತಿದ್ದರೆ ಅದರ ಪಾವಿತ್ರ್ಯ ಸಹಜವಾಗಿಯೇ ಅನುಭವಕ್ಕೆ ಬರುತ್ತದೆಯೋ ಏನೋ! ಅಸಹಜ ಅರ್ಥಾತ್‌ ಕೃತಕ ಪ್ರಯತ್ನಗಳಾದಲ್ಲಿ ಪಾವಿತ್ರ್ಯ ಅನ್ನೋದು ಅನುಭವಕ್ಕೆ ಬರುವುದೂ ಕಷ್ಟ. ಅಂದರೆ ಮನಸ್ಸುಗಳಿರಬಹುದು, ವಸ್ತುಗಳಿರಬಹುದು. ಅಸಹಜಗಳು ಜಾಸ್ತಿಯಾದಲ್ಲಿ ಪಾವಿತ್ರ್ಯದ ಸೃಷ್ಟಿಯೇ ಸಂಶಯಾತ್ಮಕ ಅಶುದ್ಧ ಮನಸ್ಸುಗಳು, ಅಶುದ್ಧ ವಸ್ತುಗಳನ್ನು ಇರಿಸಿಕೊಂಡು ಉತ್ತಮ ಫ‌ಲಿತಾಂಶ ನಿರೀಕ್ಷಿಸಿದರೆ…! ಸಹಜ ವಸ್ತುಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವಾಗ ತನ್ನೊಳಗೂ ದೇವನನ್ನು ಪ್ರತಿಷ್ಠಾಪನೆ ಮಾಡುವುದು ಸುಲಭ ಸಾಧ್ಯವಾಗಬಹುದು. ಪೂಜೆ ಅಂದರೆ ಕೊನೆಗೂ ವಿಶ್ವಶಕ್ತಿಗೂ (ಯುನಿವರ್ಸಲ್‌ ಎನರ್ಜಿ) ತನಗೂ ಏನೋ ಒಂದು ಸಂಬಂಧದ ಹುಟ್ಟುಹಾಕುವಿಕೆಯಲ್ಲವೆ? ಈ ದೃಷ್ಟಿಯಲ್ಲಿ ಗಣೇಶನ ಹಬ್ಬ ಬರುತ್ತಿದೆ.

- ಸ್ವಾಮಿ

Also Read This…
►Part 1►ಮಾನವ ಪ್ರಪಂಚಕ್ಕೆ ಪ್ರಾಣಿಪ್ರಿಯ ಶಿವ ಸಂದೇಶ : http://bit.ly/2xm3x0G
►Part 2►ಗಣಗಳ ಪತಿಯಾಗಿ ಗಣಪತಿಯ ಸಂದೇಶ: http://bit.ly/2v0gC2U

ಟಾಪ್ ನ್ಯೂಸ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k

Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

14-padubidri

Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ

8

Udupi: ಕಲ್ಸಂಕ ಜಂಕ್ಷನ್‌; ಹಗಲು-ರಾತ್ರಿ ಟ್ರಾಫಿಕ್‌ ಕಿರಿಕಿರಿ

7(2

Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

k

Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.