ಪಾಸ್‌ಪೋರ್ಟ್: ಇನ್ನು ಮುಂದೆ ಪೊಲೀಸ್ ಪರಿಶೀಲನೆ ಸುಲಭ!
Team Udayavani, Aug 22, 2017, 8:25 AM IST
ಹೊಸದಿಲ್ಲಿ: ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಋಜುವಾತುಪಡಿಸಲು ಅರ್ಜಿದಾರರ ಮನೆಗಳಿಗೆ ಪೊಲೀಸ್ ಭೇಟಿ ಇದ್ದದ್ದೇ. ಇದಕ್ಕಾಗಿ ದಿನಗಟ್ಟಲೆ ಸಮಯ ತೆಗೆದುಕೊಳ್ಳುವುದಕ್ಕೆ ಇನ್ನು ಸಂಪೂರ್ಣ ಬ್ರೇಕ್ ಬೀಳಲಿದೆ. ನೂತನ ಕ್ರಮವೊಂದರಲ್ಲಿ ರಾಷ್ಟ್ರೀಯ ಅಪರಾಧ ದತ್ತಾಂಶಗಳನ್ನು ವಿದೇಶಾಂಗ ಇಲಾಖೆ ಜತೆ ಹಂಚಿಕೊಳ್ಳಲು ಕೇಂದ್ರ ಗೃಹ ಇಲಾಖೆ ಮುಂದಾಗಿದೆ. ಇದಕ್ಕಾಗಿ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಆ್ಯಂಡ್ ಸಿಸ್ಟಮ್ಸ್ (ಸಿಸಿಟಿಎನ್‌ಎಸ್) ಹೆಸರಿನ ವ್ಯವಸ್ಥೆಯೊಂದನ್ನು ಹೊರತರಲಾಗುತ್ತಿದೆ. ಇದರಿಂದ ಕಂಪ್ಯೂಟರ್‌ನಲ್ಲೇ ಅರ್ಜಿದಾರರಿಗೆ ಅಪರಾಧ ಹಿನ್ನೆಲೆಯಿದೆಯೇ ಎಂಬುದನ್ನು ಒಂದು ಸಿಂಗಲ್ ಕ್ಲಿಕ್‌ನಲ್ಲೇ ನೋಡಬಹುದು! ಮುಂದಿನ ವರ್ಷದಿಂದ ನೂತನ ವ್ಯವಸ್ಥೆ ಜಾರಿಗೆ ಬರಲಿದೆ.
ಸದ್ಯದ ವ್ಯವಸ್ಥೆಯಲ್ಲಿ ಪಾಸ್‌ಪೋರ್ಟ್ ಕಚೇರಿಯಿಂದ ಪೊಲೀಸ್ ಠಾಣೆಗೆ ಅರ್ಜಿದಾರರ ವಿವರಗಳು ಹೋಗಿ, ಬಳಿಕ ಪೊಲೀಸರು ಅರ್ಜಿದಾರರ ಮನೆಗೆ ಹೋಗಿ, ಋಜುವಾತುಪಡಿಸುತ್ತಿದ್ದಾರೆ. ಇದಕ್ಕೆ 15 ದಿನ, ಕೆಲವೊಮ್ಮೆ 1 ತಿಂಗಳು ತೆಗೆದುಕೊಳ್ಳುತ್ತಿದ್ದರು. ಅದರೆ ಇನ್ನು ಟ್ಯಾಬ್ ಮೂಲಕ ಸಿಸಿಟಿಎನ್‌ಎಸ್ ವ್ಯವಸ್ಥೆ ಬಳಸಿ ಪೊಲೀಸರು ಸುಲಭವಾಗಿ ಗರಿಷ್ಠ ಎರಡೇ ದಿನದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಸಿಸಿಟಿಎನ್‌ಎಸ್ ವ್ಯವಸ್ಥೆ ದೇಶದ 15,398 ಪೊಲೀಸ್ ಠಾಣೆಗಳ ಅಪರಾಧ ದತ್ತಾಂಶಗಳನ್ನು ಹೊಂದಲಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಷಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.