ಆಟಕ್ಕಿಂತ ಕಬಡ್ಡಿ ಕಾಮೆಂಟರಿ ಅನುಭವ ವಿಭಿನ್ನ: ಮಮತಾ ಪೂಜಾರಿ

Team Udayavani, Aug 22, 2017, 7:25 AM IST

mamatha.jpg

ದೇಶಿ ಕ್ರೀಡೆಯಾಗಿರುವ ಪ್ರೊ ಕಬಡ್ಡಿ ಈಗ ಕ್ರಿಕೆಟ್‌ನಷ್ಟೇ ಜನಪ್ರಿಯತೆ ಪಡೆಯುತ್ತಿದೆ. ಕಬಡ್ಡಿ ಅಂಕಣದಲ್ಲಿ ಮಿಂಚುತ್ತಿರುವ ಪ್ರತಿಭೆಗಳು ಈಗ ಅಭಿಮಾನಿಗಳ ಸ್ಟಾರ್‌ಗಳಾಗುತ್ತಿದ್ದಾರೆ. ಅದೇ ರೀತಿ ಕರಾವಳಿಯ ಹೆಮ್ಮೆಯ ಕಬಡ್ಡಿ ಪಟು ಮಮತಾ ಪೂಜಾರಿ ಕನ್ನಡದಲ್ಲಿ ಕಾಮೆಂಟರಿ ಮೂಲಕ ಕನ್ನಡಿಗರ ಮನೆಮಾತಾಗಿದ್ದಾರೆ. 

ಸ್ಟಾರ್‌ ಸುವರ್ಣ ಪ್ಲಸ್‌ ಚಾನೆಲ್‌ನಲ್ಲಿ ಕಬಡ್ಡಿ ಪಂದ್ಯಾವಳಿ ನೇರ ಪ್ರಸಾರವಾಗುತ್ತಿದ್ದು, ಕನ್ನಡದ ಅವತರಣಿಕೆಯಲ್ಲಿ ಮಮತಾ ಪೂಜಾರಿ ಅವರು ಚಂದ್ರಮೌಳಿ ಕಣವಿ, ಸುಮೇಶ್‌ ಹಾಗೂ ಚಂದ್ರಶೇಖರ್‌ ತಂಡದೊಂದಿಗೆ ಕಾಮೆಂಟರಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಕಬಡ್ಡಿ ಆಟದ ಮೂಲಕ ಖ್ಯಾತಿ ಗಳಿಸಿರುವ ಮಮತಾ ಅವರು ಈಗ ಸ್ಪಷ್ಟವಾದ ಕನ್ನಡ ವೀಕ್ಷಕ ವಿವರಣೆಗೂ ಸೈ ಎನಿಸಿದ್ದಾರೆ. ಕಬಡ್ಡಿ ಕುರಿತ ಟಿವಿ ಶೋಗಳಲ್ಲಿ ಪಾಲ್ಗೊಂಡ ಅನುಭವವಿದ್ದರೂ, ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಕಾಮೆಂಟರಿ ಮಾಡುತ್ತಿದ್ದಾರೆ. ಈ ಬಗ್ಗೆ ಅವರೊಂದಿಗೆ “ಉದಯವಾಣಿ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ. 

– ಆಟಗಾರ್ತಿಯಾಗಿರುವ ನಿಮಗೆ ಕಾಮೆಂಟರಿ ಅನುಭವ ಹೇಗಿದೆ?
ವಾವ್‌.. ಕಳೆದ ವರ್ಷ ಆಟಗಾರ್ತಿಯಾಗಿ ಪ್ರೊ ಕಬಡ್ಡಿಯಲ್ಲಿ ಪಾಲ್ಗೊಂಡ ನನಗೆ ಈ ಬಾರಿ ಕಾಮೆಂಟೇರ್‌ ಆಗಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಆಟಕ್ಕಿಂತ ಕಾಮೆಂಟರಿ ವಿಭಿನ್ನ ಅನುಭವ ನೀಡಿದೆ. ಅದರಲ್ಲೂ ಕನ್ನಡದಲ್ಲಿ ಕಾಮೆಂಟರಿ ನೀಡುತ್ತಿರುವುದು ಖುಷಿ ಕೊಟ್ಟಿದೆ. 

– ಮಹಿಳಾ ಪ್ರೊ ಕಬಡ್ಡಿಗೆ ಈ ಬಾರಿ ಅವಕಾಶ ನೀಡದ ಕುರಿತು?
ಖಂಡಿತವಾಗಲೂ ಪ್ರೊ ಕಬಡ್ಡಿಯಲ್ಲಿ ಆಟ ವಾಡುವುದನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನನ್ನಂತೆ ಅನೇಕರು ಇದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ಬಾರಿ ನಡೆಸುವ ಯೋಜನೆಯಿದೆ ಅಂತೆ. ಆ ಕ್ಷಣ ಮತ್ತೆ ಬರಲಿದೆ ಎನ್ನುವ ನಂಬಿಕೆಯಿದೆ.

– ಪುರುಷರ ಪಂದ್ಯಗಳನ್ನು ಕಡಿತಗೊಳಿಸಿ 2 -3 ಮಹಿಳಾ ತಂಡಗಳ ಮಹಿಳಾ ಪ್ರೊ ಕಬಡ್ಡಿ ನಡೆಸಬಹುದಿತ್ತೇ? 
ಪುರುಷರಲ್ಲಿಯೂ ತುಂಬಾ ಮಂದಿ ಕಬಡ್ಡಿ ಆಟಗಾರರು ಬರುತ್ತಿದ್ದು, ಅದಕ್ಕಾಗಿ ಹೆಚ್ಚಿನ ತಂಡಗಳನ್ನು ಮಾಡಿದ್ದಾರೆ. ಹಾಗೆಯೇ ಸುದೀರ್ಘ‌ ಟೂರ್ನಿಯನ್ನು ಆಯೋ ಜಿಸಲಾಗಿದೆ. ಆದರೆ ಮಹಿಳಾ ಕಬಡ್ಡಿಗೋಸ್ಕರ ಪುರಷರಿಗೆ ಅನ್ಯಾಯ ಮಾಡುವುದು ಬೇಡ. ಪ್ರೊ ಕಬಡ್ಡಿಯಿಂದಾಗಿ ಈ ಕ್ರೀಡೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನೇಕ ಯುವಕರ ಬದುಕು ಉತ್ತಮ ಹಂತಕ್ಕೆ ತಲುಪಿದೆ. ಕುಟುಂಬಕ್ಕೂ ನೆರವಾಗುತ್ತಿದ್ದಾರೆ ಆ ಬಗ್ಗೆ ಹೆಮ್ಮೆಯಿದೆ. 

– ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಸೇರಿಸುವ ಕುರಿತು ನಿಮ್ಮ ಅಭಿಪ್ರಾಯವೇನು? 
ದೇಶಿ ಕ್ರೀಡೆಯಾಗಿರುವ ಕಬಡ್ಡಿಯನ್ನು 2020ರ ಒಲಿಂಪಿಕ್ಸ್‌ನಲ್ಲಾದರೂ ಸೇರಿಸುವ ಆಶಾ ಭಾವನೆಯಿತ್ತು. ಕಬಡ್ಡಿ ಅಸೋಸಿಯೇಶನ್‌ ಹಲವು ವರ್ಷಗಳಿಂದ ಒಲಿಂಪಿಕ್ಸ್‌ನಲ್ಲಿ ಸೇರಿಸುವ ಕುರಿತು ಪ್ರಯತ್ನಿಸುತ್ತಲೇ ಇದೆ. ಆದರಿದು ಸಾಧ್ಯವಾಗುತ್ತಿಲ್ಲ. ನಮಗಲ್ಲದಿದ್ದರೂ, ಮುಂದಿನ ವರ್ಷಗಳಲ್ಲಿ ನಾವು ಕಲಿಸಿದ ಕ್ರೀಡಾಳುಗಳಾದರೂ ಆಡುವ ಭಾಗ್ಯ ಸಿಗಲಿ. 

– ನಿಮ್ಮ ನೆಚ್ಚಿನ ತಂಡ ಯಾವುದು?
ನಮ್ಮ ರಾಜ್ಯದ ತಂಡವಾಗಿರುವ ಬೆಂಗಳೂರು ಬುಲ್ಸ್‌ ನಿಸ್ಸೆಂದೇಹವಾಗಿ ನನ್ನ ನೆಚ್ಚಿನ ತಂಡ. ಬೆಂಗಳೂರು ಬುಲ್ಸ್‌ ತಂಡವೇ ಗೆಲ್ಲಲಿ ಎಂದು ಹಾರೈಸುತ್ತೇನೆ. ಆದರೆ ಉತ್ತಮ ಆರಂಭ ಪಡೆದಿದ್ದ ಬೆಂಗಳೂರು ಈಗ ಸೋಲುತ್ತಿರುವುದು ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ. ಹೆಚ್ಚಿನ ಎಲ್ಲ ತಂಡಗಳಲ್ಲಿ ಕರ್ನಾಟಕದವರೇ ಪ್ರಮುಖವಾಗಿ ಲೀಡ್‌ ಮಾಡುತ್ತಿದ್ದಾರೆ. ಗುಜರಾತ್‌ನ ಸುಕೇಶ್‌ ಹೆಗ್ಡೆ, ತೆಲುಗಿನ ರಿಶಾಂಕ್‌ ದೇವಾಡಿಗ, ಶಬ್ಬೀರ್‌ ಬಾಪು ಸಹಿತ ಅನೇಕರು ಮಿಂಚುತ್ತಿರುವುದು ಖುಷಿ ಕೊಟ್ಟಿದೆ. 

– ನಿಮ್ಮ ಪ್ರಕಾರ ಪ್ರೊ ಕಬಡ್ಡಿ ಚಾಂಪಿಯನ್‌ ಆಗುವ ತಂಡ ಯಾವುದು? 
ಸುದೀರ್ಘ‌ ಪಂದ್ಯಾವಳಿಯಲ್ಲಿ ಈಗಲೇ ನಿರ್ದಿಷ್ಟವಾಗಿ ಚಾಂಪಿಯನ್‌ ತಂಡವನ್ನು ನಿರ್ಧರಿಸುವುದು ಸವಾಲಿನ ಸಂಗತಿ. ಆದರೂ ಬೆಸ್ಟ್‌ 4 ತಂಡಗಳೆಂದರೆ ಸುಕೇಶ್‌ ಹೆಗ್ಡೆ ನಾಯಕತ್ವದ ಗುಜರಾತ್‌ ಸೂಪರ್‌ ಜೈಂಟ್ಸ್‌, ರಾಜ್ಯದವರೇ ಕೋಚ್‌ ಆಗಿರುವ ಬಿ.ಸಿ. ರಮೇಶ್‌ ಅವರ ಪುನೇರಿ ಪಲ್ಟಾನ್ಸ್‌, ಪಾಟ್ನಾ ಪೈರೇಟ್ಸ್‌ ಹಾಗೂ ಬೆಂಗಳೂರು ಬುಲ್ಸ್‌ ಉತ್ತಮ ಗುಂಪಿನಲ್ಲಿರುವ ಕಾರಣ ಅವಕಾಶ ಹೆಚ್ಚಿದೆ. 

– ಕಾಮೆಂಟರಿ ಬಗ್ಗೆ ಕುಟುಂಬ ಹಾಗೂ ಊರವರ ಪ್ರತಿಕ್ರಿಯೆ ಹೇಗಿದೆ?
ಕಬಡ್ಡಿ ಟೂರ್ನಿಯಿಂದಾಗಿ ಊರಿಗೆ ಹೋಗದೆ ತುಂಬಾ ದಿನಗಳಾಗಿವೆ. ಆದರೆ ಪ್ರತಿದಿನ ಪಂದ್ಯಕ್ಕೂ ಮುನ್ನ ನಡೆಯುವ ಪ್ರಿ-ಶೋದಲ್ಲಿ ಮನೆಯವರು ನೋಡಲು ಕಾಯುತ್ತಿರುತ್ತಾರೆ. . 

– ವೀಕ್ಷಕ ವಿವರಣೆಗೆ ಆಯ್ಕೆ ಮಾಡಿದ ಬಗ್ಗೆ?
ಕಳೆದ ಬಾರಿಯೂ ಕಾಮೆಂಟರಿಗೆ ಕರೆದಿ ದ್ದರೂ ಆಟವಿದ್ದುದರಿಂದ ಹೋಗಿರಲಿಲ್ಲ. ಈ ಬಾರಿ ಆಟದ ಮೂಲಕ ಅಲ್ಲವಾದರೂ ಕಾಮೆಂಟರಿ ಮೂಲಕ ಪ್ರೊ ಕಬಡ್ಡಿ ಭಾಗ ವಾಗಿರುವುದು ಖುಷಿ ಕೊಡುತ್ತಿದೆ. ಕನ್ನಡ ದಲ್ಲಿ ಕಾಮೆಂಟರಿ ಕೊಡುತ್ತಿರುವ ಏಕೈಕ ಮಹಿಳೆಯಾಗಿದ್ದು, ಆ ಬಗ್ಗೆ ಹೆಮ್ಮೆಯಿದೆ. ಮೊದಲ 10 ದಿನ ಕಾಮೆಂಟರಿ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ವಾಯ್ಸ ಮಾಡ್ಯುಲೇಶನ್‌ ಕುರಿತು ತಿಳಿದುಕೊಳ್ಳಲು ನೆರವಾಯಿತು. 

– ಗುಜರಾತ್‌, ಬುಲ್ಸ್‌ಗೆ ಹೆಚ್ಚಿನ ಅವಕಾಶ
ಸುದೀರ್ಘ‌ ಪಂದ್ಯಾವಳಿಯಲ್ಲಿ ಈಗಲೇ ನಿರ್ದಿಷ್ಟವಾಗಿ ಚಾಂಪಿಯನ್‌ ತಂಡವನ್ನು ನಿರ್ಧರಿಸುವುದು ಸವಾಲಿನ ಸಂಗತಿ. ಆದರೂ ಬೆಸ್ಟ್‌ 4 ತಂಡಗಳೆಂದರೆ ಸುಕೇಶ್‌ ಹೆಗ್ಡೆ ನಾಯಕತ್ವದ ಗುಜರಾತ್‌ ಸೂಪರ್‌ ಜೈಂಟ್ಸ್‌, ರಾಜ್ಯದವರೇ ಕೋಚ್‌ ಆಗಿರುವ ಬಿ.ಸಿ. ರಮೇಶ್‌ ಅವರ ಪುನೇರಿ ಪಲ್ಟಾನ್ಸ್‌, ಪಾಟ್ನಾ ಪೈರೇಟ್ಸ್‌ ಹಾಗೂ ಬೆಂಗಳೂರು ಬುಲ್ಸ್‌ ಉತ್ತಮ ಗುಂಪಿನಲ್ಲಿರುವ ಕಾರಣ ಅವಕಾಶ ಹೆಚ್ಚಿದೆ. 

– ಇಬ್ಬರೇ ಮಹಿಳೆಯರು!
ಪ್ರೊ ಕಬಡ್ಡಿಯು ಸ್ಟಾರ್‌ ಒಡೆತನದಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌ನಲ್ಲಿ ಪ್ರಸಾರವಾಗುತ್ತಿದೆ. ಸ್ಟಾರ್‌ ಸುವರ್ಣ ಪ್ಲಸ್‌ನಲ್ಲಿ ಕಳೆದ 3 ವರ್ಷಗಳಿಂದ ಕನ್ನಡ ಅವತರಣಿಕೆಯ ಕಾಮೆಂಟರಿ ಬರುತ್ತಿದ್ದರೆ, ಇದೇ ಮೊದಲ ಬಾರಿಗೆ ತಮಿಳು ಭಾಷೆಯಲ್ಲಿ ಕಾಮೆಂಟರಿ ಪ್ರಸಾರವಾಗ್ತಿದೆ. ಕನ್ನಡದಲ್ಲಿ ಮಮತಾ ಪೂಜಾರಿ ಹಾಗೂ ತೆಲುಗಿನಲ್ಲಿ ನಿವೃತ್ತ ಕಬಡ್ಡಿ ಆಟಗಾರ್ತಿಯೋರ್ವರು ಕಾಮೆಂಟರಿ ಮಾಡುತ್ತಿದ್ದಾರೆ. 3 ತಿಂಗಳ ಟೂರ್ನಿಯಲ್ಲಿ ಚಂದ್ರಮೌಳಿ ಹಾಗೂ ಮಮತಾ ಪೂಜಾರಿ ತಂಡ, ಸುಮೇಶ್‌ ಹಾಗೂ ಚಂದ್ರಶೇಖರ್‌ ತಂಡ ತಲಾ 15 ದಿನಗಳ ಕಾಲ ಕಾಮೆಂಟರಿ ನೀಡುತ್ತಿದ್ದಾರೆ.

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

1-eeeeega

Iga Swiatek doping ban ; ತಿಂಗಳ ನಿಷೇಧಕ್ಕೆ ಒಪ್ಪಿಗೆ

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.