ಅಮೆರಿಕಕ್ಕೆ ಅಫ್ಘಾನಿಸ್ಥಾನ ಕಬರಿಸ್ಥಾನವಾಗಲಿದೆ: ತಾಲಿಬಾನ್
Team Udayavani, Aug 22, 2017, 11:18 AM IST
ಕಾಬೂಲ್ : ಅಮೆರಿಕದ ಪಾಲಿಗೆ ಅಪಾ^ನಿಸ್ಥಾನ ಕಬರಿಸ್ಥಾನವಾಗಲಿದೆ ಎಂಬ ಎಚ್ಚರಿಕೆಯನ್ನು ತಾಲಿಬಾನ್ ಉಗ್ರ ಸಂಘಟನೆ ವಕ್ತಾರ ಝೈಬುಲ್ಲಾ ಮುಜಾಹಿದ್ ನೀಡಿದ್ದಾನೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ ತ್ರಸ್ತ ಅಫ್ಘಾನಿಸ್ಥಾನಕ್ಕೆ ಸಾವಿರಾರು ಅಮೆರಿಕನ್ ಸೈನಿಕರನ್ನು ಕಳುಹಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿರುವ ಬೆನ್ನಲ್ಲೇ ತಾಲಿಬಾನ್ ಈ ಎಚ್ಚರಿಕೆ ನೀಡಿದೆ.
ಅಫ್ಘಾನಿಸ್ಥಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದೆಗೆಯದಿದ್ದರೆ ಅಫ್ಘಾನಿಸ್ಥಾನವು 21ನೇ ವತಮಾನದ ಸೂಪರ್ ಪವರ್ ಎನಿಸಿರುವ ಅಮೆರಿಕದ ಪಾಲಿಗೆ ಕಬರಿಸ್ಥಾನವಾಗಲಿದೆ ಎಂದು ತಾಲಿಬಾನ್ ವಕ್ತಾರ ಝೈಬುಲ್ಲಾ ಎಚ್ಚರಿಸಿದ್ದಾನೆ.
ಅಫ್ಘಾನಿಸ್ಥಾನದಲ್ಲಿ ಯುದ್ಧವನ್ನು ಮುಂದುವರಿಸುವ ಬದಲು ಅಮೆರಿಕ ಅಲ್ಲಿಂದ ತನ್ನ ಸೇನೆಯನ್ನು ಹಿಂದೆಗೆಯುವ ಕ್ರಮ ಕೈಗೊಳ್ಳಬೇಕು ಎಂದು ಝೈಬುಲ್ಲಾ ಹೇಳಿದ್ದಾನೆ.
ನಮ್ಮ ನೆಲದಲ್ಲಿ ಅಮೆರಿಕನ್ ಸೈನಿಕರು ಇರುವಷ್ಟು ಕಾಲ ಮತ್ತು ಅವರು ನಮ್ಮ ಮೇಲೆ ಯುದ್ಧವನ್ನು ಹೇರುವ ತನಕ ನಾವು ಅತ್ಯುನ್ನತ ನೈತಿಕ ಸ್ಥೈರ್ಯದೊಂದಿಗೆ ಜಿಹಾದ್ ಮುಂದುವರಿಸುತ್ತೇವೆ ಎಂದು ಝೈಬುಲ್ಲಾ ಗುಡುಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.