ಹೆರಿಗೆ ಆಸ್ಪತ್ರೇಲಿ ಸಂಸದರಿಗೆ ಇಲ್ಲಗಳ ದರ್ಶನ: ಅಧಿಕಾರಿಗಳಿಗೆ ತರಾಟೆ 


Team Udayavani, Aug 22, 2017, 12:44 PM IST

mys4.jpg

ನಂಜನಗೂಡು: ರಾಜ್ಯದ ಆರೋಗ್ಯ ಸಚಿವ ರಮೇಶಕುಮಾರ್‌ರಿಂದ ಚಾಲನೆಗೊಂಡು 7 ತಿಂಗಳಾದರೂ ಕಂದನ ಸೊಲ್ಲೇ ಕೇಳದ ನಂಜನಗೂಡಿನ ಹೆರಿಗೆ ಆಸ್ಪತ್ರೆಗೆ ಸಂಸದ ಧ್ರುವನಾರಾಯಣ್‌ ಸೋಮವಾರ ಭೇಟಿ ನೀಡಿ ತ್ವರಿತವಾಗಿ ಹೆರಿಗೆ ಪ್ರಕ್ರಿಯೆ ಪ್ರಾರಂಭಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ನಂಜನಗೂಡಿನ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಸುಮಾರು 7 ಕೋಟಿ ರೂ., ವೆಚ್ಚದಲ್ಲಿ ನಿರ್ಮಿತವಾದ ಅತ್ಯಾಧುನಿಕ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಕಟ್ಟಡದ ಉದ್ಘಾಟನೆಯಾಗಿ ನವಮಾಸ ತುಂಬುವ ವೇಳೆಗಾದರೂ ಹೆರಿಗೆ ಆರಂಭಿಸಿ ಎಂದರು.

ಸಂಸದರ  ಸೂಚನೆಗೆ ಪ್ರತಿಕ್ರಿಯಿಸಿದ ನಂಜನಗೂಡು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪದ್ಮರಾಜು, ತಾಲೂಕು ವೈದ್ಯಾಧಿಕಾರಿ ಕಲಾವತಿ , ಮಹಿಳಾ ವೈದ್ಯೆ ಪುಟ್ಟತಾಯಮ್ಮ, ಹೆರಿಗೆ ಮಾಡಿಸಲು ಮಹಿಳಾ ವೈದ್ಯರಾದ ನಾವಿದ್ದೇವೆ.  ಅನಸ್ತೇಷಿಯಾಕ್ಕೂ ವೈದ್ಯರು ಬಂದಿದ್ದಾರೆ. ಆದರೆ ಮಕ್ಕಳ ವೈದ್ಯರೇ ಇನ್ನೂ ಬಂದಿಲ್ಲ ಎಂದರು.

ಪ್ರಾರಂಭದಲ್ಲಿ ವೈದ್ಯರನ್ನು ನೇಮಿಸದೆ ಆಪರೇಷನ್‌ ವಿಭಾಗ ಸಿದ್ಧಪಡಿಸಲಾಗಿತ್ತು. ಈಗ ಮತ್ತೆ ಅದನ್ನು ಸುಸ್ಥಿತಿಗೆ ತರಲು ತಿಂಗಳಾದರೂ ಬೇಕು. ಹೀಗಾಗಿ ಸುಲಭ ಹೆರಿಗೆಯಾದರೆ ಮಾತ್ರ ಕಂದನ ಸೊಲ್ಲು ಕೇಳಿಸಬಹುದು ಎಂದರು.   

ಮುಖ್ಯಮಂತ್ರಿಗಳಿಗೆ ದೂರು: ಸಾರ್ವಜನಿಕ ಆಸ್ಪತ್ರೆ ರಕ್ತ ಪರೀûಾ ಯಂತ್ರವನ್ನು 15 ದಿನದಲ್ಲಿ ದುರಸ್ತಿ ಪಡಿಸದಿದ್ದರೆ  ತಾವು ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಸಂಸದ ಆರ್‌.ಧ್ರುವನಾರಾಯಣ್‌ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಡಿಎಚ್‌ಒ ರನ್ನು  ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಈ ಕುರಿತು ನಿಮಗೆಲ್ಲ  ಆದೇಶಿಸಿ ತಿಂಗಳ ಮೇಲಾದರೂ ಅದು ದುರಸ್ತಿಯಾಗಿಲ್ಲ. ಮುಖ್ಯಮಂತ್ರಿಗಳೂ ಸೇರಿದಂತೆ ಜನಪ್ರತಿನಿಧಿಗಳಾದ ನಮಗೆಲ್ಲಾ ಅಧಿಕಾರಿ ಮಾಡುತ್ತಿರುವ ಅಪಮಾನ. ಈ ಕುರಿತು ತಾವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ  ದೂರು ಸಲ್ಲಿಸುವುದಾಗಿ ಗುಡುಗಿದರು.

ರಸ್ತೆ ಅವ್ಯವಸ್ಥೆ ಸಚಿವರ ಗಮನಕ್ಕೆ ನೀವೇ ತನ್ನಿ: ನಂಜನಗೂಡು ಪಟ್ಟಣದ ರಸ್ತೆ ಅವ್ಯವಸ್ಥೆ ಕುರಿತು ಸುದ್ದಿಗಾರರು ಸಂಸದರ ಗಮನ ಸೆಳೆದಾಗ ಕಾಮಗಾರಿ ಲೋಕೋಪಯೋಗಿ ಇಲಾಖೆ ನೇರ ಉಸ್ತುವಾರಿಯಲ್ಲಿ ನಡೆಯುತ್ತಿರುವುದರಿಂದ ನಿಮ್ಮವರೇ ಆಗಿರುವ ಡಾ.ಎಚ್‌.ಸಿ.ಮಹದೇವಪ್ಪ ಅವರ ಗಮನಕ್ಕೆ ತನ್ನಿ ಎಂದು ಸಂಸದರು ಜಾರಕೆ ಉತ್ತರ ನೀಡಿದರು.  ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ಗುಂಡ್ಲುಪೇಟೆ ನಂಜಪ್ಪ, ಪುರಸಭಾ ಮಾಜಿ ಅಧ್ಯಕ್ಷ ಶ್ರೀಧರ್‌, ಗಂಗಾಧರ್‌ ಮತ್ತಿತರರಿದ್ದರು.

* ಕಟ್ಟಡ ಉದ್ಘಾಟನೆಯಾಗಿ 7 ತಿಂಗಳಾದರೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು  ಸಂಸದರ ಗಮನಕ್ಕೆ ಬಂದಾಗ, ತಕ್ಷಣ ನಗರಸಭೆ ಆಯುಕ್ತ ವಿಜಯರನ್ನು  ಸ್ಥಳಕ್ಕೆ ಕರೆಸಿಕೊಂಡ ಅವರು ತಕ್ಷಣ ಆಸ್ಪತ್ರೆಗೆ ನೀರಿನ ಸಂಪರ್ಕ ಒದಗಿಸುವಂತೆ ಸೂಚಿಸಿದರು.

ಸಚಿವರೊಂದಿಗೆ ಚರ್ಚಿಸುವೆ
ಲಾಂಡ್ರಿ ಸೌಲಭ್ಯವೂ ಇಲ್ಲ, ಹೆರಿಗೆ ಪ್ರಾರಂಭವಾದರೆ ಬಟ್ಟೆ ಒಗೆದು ಸ್ವತ್ಛ ಮಾಡುವ ಸೌಲಭ್ಯಬೇಕು ಎಂದು ಸಿಬ್ಬಂದಿ ಅಲವತ್ತುಕೊಂಡರು. ಹೀಗಾಗಿ ಸದ್ಯ ಹೊರರೋಗಿಗಳ ವಿಭಾಗ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸೌಲಭ್ಯ ಕಲ್ಪಿಸಿದ ನಂತರವೇ ಹೆರಿಗೆ ಎಂಬ ಅಭಿಪ್ರಾಯ ಕೇಳಿಬಂತು.

ಅಲ್ಲಿಯವರಿಗೆ ತಾಯಿ ಮಕ್ಕಳ ಆಸ್ಪತ್ರೆ ಗರ್ಭಿಣಿಯರು, ಬಾಣಂತಿಯರ ಆಸ್ಪತ್ರೆಯಾಗಿ ಮಾತ್ರ ಕಾರ್ಯ ನಿರ್ವಹಿಸಬಹುದು ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿದರು. ನಂತರ ಮಾತನಾಡಿದ ಸಂಸದರು, ತಾವು  ಕೊರತೆಗಳ ಕುರಿತು ಆರೋಗ್ಯ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.