ಸುನೀಲ್ ಜೋಶಿ ಬಾಂಗ್ಲಾದ ಸ್ಪಿನ್ ಬೌಲಿಂಗ್ ಕೋಚ್
Team Udayavani, Aug 22, 2017, 2:00 PM IST
ನವದೆಹಲಿ: ಭಾರತದ ಮಾಜಿ ಎಡಗೈ ಸ್ಪಿನ್ನರ್, ಕರ್ನಾಟಕದ ಸುನೀಲ್ ಜೋಶಿ ಅವರಿಗೆ ನೂತನ ಹೊಣೆಗಾರಿಕೆಯೊಂದು ಲಭಿಸಿದೆ. ಅವರೀಗ ಬಾಂಗ್ಲಾದೇಶದ ನೂತನ ಸ್ಪಿನ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಸುನೀಲ್ ಜೋಶಿ ಬಾಂಗ್ಲಾ ಸ್ಪಿನ್ನರ್‌ಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಆಸ್ಟ್ರೇಲಿಯಾದ ಸ್ಟುವರ್ಟ್ ಮೆಕ್‌ಗಿಲ್ ಈ ಆಹ್ವಾನವನ್ನು ನಿರಾಕರಿಸಿದ್ದರಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಜೋಶಿ ಅವರನ್ನು ಸಂಪರ್ಕಿಸಿತ್ತು. ಅವರು ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾಗಿ ಬಿಸಿಬಿ ತಿಳಿಸಿದೆ. ಶ್ರೀಲಂಕಾದ ರುವಾನ್ ಕಲ್ಪಗೆ ಅವರನ್ನು ಪದಚ್ಯುತಿಗೊಳಿಸಿದ ಬಳಿಕ ಈ ಬಾಂಗ್ಲಾದ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆ ಖಾಲಿ ಇತ್ತು. “ಸುನೀಲ್ ಜೋಶಿ ಅವರು ನಮ್ಮ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ವೇಳೆ ಅವರು ತಂಡದ ಜತೆ ಇರುತ್ತಾರೆ’ ಎಂದು ಬಿಸಿಬಿ ಅಧಿಕಾರಿ ಅಕ್ರಮ್ ಖಾನ್ ಹೇಳಿದ್ದಾರೆ. 47ರ ಹರೆಯದ ಸುನೀಲ್ ಜೋಶಿ ಬಾಂಗ್ಲಾದೇಶದ ಸ್ಪಿನ್ ಬೌಲಿಂಗ್ ತರಬೇತು ದಾರನಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ ಬಾಂಗ್ಲಾ ತಂಡ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತಕ್ಕೆ ಬಂದಾಗಲೂ ಜೋಶಿ ಅವರೇ ಈ ಹುದ್ದೆಯಲ್ಲಿದ್ದರು. ಜೋಶಿ ಭಾರತದ ಪರ 69 ಏಕದಿನ ಹಾಗೂ 15 ಟೆಸ್ಟ್‌ಗಳನ್ನಾಡಿದ್ದಾರೆ. ಕ್ರಮವಾಗಿ 69 ಹಾಗೂ 41 ವಿಕೆಟ್ ಉರುಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.