10 ಸಚಿವರು,15 ಜಿಲ್ಲಾಧಿಕಾರಿ, 20 ಜಿ.ಪಂ.ಅಧ್ಯಕ್ಷರನ್ನು ಕಂಡ ಜಿಲ್ಲೆ
Team Udayavani, Aug 23, 2017, 8:15 AM IST
ಉಡುಪಿ: ಜಿಲ್ಲೆ ಉದಯವಾಗಿ 20 ವರ್ಷಗಳ ಸಿಂಹಾವಲೋಕನ ಮಾಡಿದಾಗ ಇದನ್ನು ಕಟ್ಟಲು ಹಲವರು ಶ್ರಮಿಸಿರುವುದು ಕಂಡುಬರುತ್ತದೆ.
ಸರಾಸರಿ 2 ವರ್ಷಗಳಿಗೆ ಒಬ್ಬರು ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲನೆಯವರು ಜಯಪ್ರಕಾಶ್ ಹೆಗ್ಡೆ ಯವರಾದರೆ ಈಗ ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದಾರೆ. ವಿಶೇಷ ವೆಂದರೆ ಆಗ ಜಯಪ್ರಕಾಶ್ ಹೆಗ್ಡೆ ಮತ್ತು ಈಗ ಪ್ರಮೋದ್ ಮಧ್ವರಾಜ್ ಇಬ್ಬರೂ ಯುವಕರಾಗಿರುವುದು. ಏತನ್ಮಧ್ಯೆ ಕೇಂದ್ರ ಸಚಿವರಾಗಿ ಜಿಲ್ಲೆಯ ವೀರಪ್ಪ ಮೊಲಿ, ಆಸ್ಕರ್ ಫೆರ್ನಾಂಡಿಸ್ ಸೇವೆ ಸಲ್ಲಿಸಿದ್ದರು. ಹಿಂದೊಮ್ಮೆ ಉಡುಪಿಯಲ್ಲಿ ಸಂಸದರಾಗಿದ್ದ ಡಿ.ವಿ.ಸದಾನಂದ ಗೌಡರು ಈಗ ಕೇಂದ್ರ ಸಚಿವರು.
ಜಿ.ಕಲ್ಪನಾ ಮೊದಲ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರೆ ಈಗ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅದೇ ಹುದ್ದೆಯಲ್ಲಿದ್ದಾರೆ. ಮೊದಲಿನವರು ಮತ್ತು ಈಗಿನವರು ಇಬ್ಬರೂ ಮಹಿಳಾಧಿಕಾರಿಗಳು. ಒಟ್ಟು 15 ಜಿಲ್ಲಾಧಿಕಾರಿಗಳು ಜಿಲ್ಲೆಯನ್ನಾಳಿದ್ದಾರೆ.
ಜಿ.ಪಂ. ಅಧ್ಯಕ್ಷರಾಗಿ 20 ಜನರು ಸೇವೆ ಸಲ್ಲಿಸಿದ್ದು ಸರಾಸರಿ ವರ್ಷ ಕ್ಕೊಬ್ಬರಾದಂತಾಯಿತು. ಪ್ರಥಮಾಧ್ಯಕ್ಷರಾಗಿ ರೆಮಿಡಿಯಾ ಡಿ’ಸೋಜಾ ಸೇವೆ ಸಲ್ಲಿಸಿದ್ದರೆ ಈಗ ದಿನಕರ ಬಾಬು ಅಧ್ಯಕ್ಷರಾಗಿದ್ದಾರೆ. 12 ಉಪಾಧ್ಯಕ್ಷರು ಸೇವೆ ಸಲ್ಲಿಸಿದ್ದಾರೆ. ಬಿ.ಎಸ್.ಪ್ರತಾಪಚಂದ್ರ ಶೆಟ್ಟಿ ಮೊದಲ ಉಪಾಧ್ಯಕ್ಷರಾದರೆ ಈಗ ಶೀಲಾ ಕೆ. ಶೆಟ್ಟಿ ಆ ಸ್ಥಾನದಲ್ಲಿದ್ದಾರೆ. ಬಿ.ಎಚ್.ಅನಿಲ್‌ಕುಮಾರ್ ಪ್ರಥಮ ಸಿಇಒ ಆಗಿದ್ದರೆ ಈಗ ಶಿವಾನಂದ ಕಾಪಶಿ ಸೇವೆಯಲ್ಲಿದ್ದಾರೆ.
15 ಜಿಲ್ಲಾಧಿಕಾರಿಗಳು:
1. ಜಿ.ಕಲ್ಪನಾ (25-08-1997ರಿಂದ 15-12-1997)
2. ಬಿ.ಎಚ್.ಅನಿಲ್‌ಕುಮಾರ್ (ಹೆಚ್ಚುವರಿ ಪ್ರಭಾರ) (19-12-1997ರಿಂದ 10-06-1998)
3. ಗಂಗಾರಾಮ್ ಬಡೇರಿಯಾ (11-06-1998ರಿಂದ 23-04-2000)
4. ಗೌರವ ಗುಪ್ತಾ (23-04-2000ರಿಂದ 03-07-2002)
5. ಎಸ್.ಆರ್.ಉಮಾಶಂಕರ್ (04-07-2002ರಿಂದ 23-09-2004)
6. ಟಿ. ಶಾಮ್ ಭಟ್ (23-09-2004ರಿಂದ 02-01-2006)
7. ಆರ್. ಶಾಂತರಾಜ್ (02-01-2006ರಿಂದ 10-05-2006)
8. ವಿ. ಪೊನ್ನುರಾಜ್ (10-05-2006ರಿಂದ 27-01-2008)
9. ಪಿ.ಹೇಮಲತಾ (27-01-2008ರಿಂದ 16-05-2011)
10. ಡಾ| ಎಂ.ಟಿ. ರೆಜು (23-05-2011ರಿಂದ 28- 02-2014)
11. ಡಾ| ಮುದ್ದುಮೋಹನ್ (28-2-2014ರಿಂದ 30-08-2014)
12. ಎಸ್.ಎಸ್. ಪಟ್ಟಣಶೆಟ್ಟಿ (01-09-2014ರಿಂದ 05-11-2014)
13. ಡಾ| ಆರ್. ವಿಶಾಲ್ (05-11-2014ರಿಂದ 07-05-2016)
14. ಪ್ರಿಯಾಂಕಾ ಮೇರಿ ಫ್ರಾನ್ಸಿಸ್ (07-05-2016ರಿಂದ 29-07-2016)
14. ವೆಂಕಟೇಶ್ ಟಿ. (29-07-2016ರಿಂದ 23-2-2017)
15. ಪ್ರಿಯಾಂಕಾ ಮೇರಿ ಫ್ರಾನ್ಸಿಸ್ (23-07-2017ರಿಂದ …)
ದಶ ಉಸ್ತುವಾರಿ ಸಚಿವರು:
1. ಕೆ.ಜಯಪ್ರಕಾಶ ಹೆಗ್ಡೆ
2. ವಸಂತ ಸಾಲ್ಯಾನ್
3. ರೋಶನ್ ಬೇಗ್
4. ಸುಮಾ ವಸಂತ್
5. ಮೋಟಮ್ಮ
6. ಡಿ.ಟಿ.ಜಯಕುಮಾರ್
7. ಡಾ|ವಿ.ಎಸ್.ಆಚಾರ್ಯ
8. ಕೋಟ ಶ್ರೀನಿವಾಸ ಪೂಜಾರಿ
9. ವಿನಯಕುಮಾರ ಸೊರಕೆ
10. ಪ್ರಮೋದ್ ಮಧ್ವರಾಜ್ (ಹಾಲಿ)
ಕೇಂದ್ರ ಸಚಿವರು:
1. ಎಂ.ವೀರಪ್ಪ ಮೊಲಿ
2. ಆಸ್ಕರ್ ಫೆರ್ನಾಂಡಿಸ್
1997-2017: ಶಾಸಕರಾಗಿ ಸೇವೆ:
ಯು.ಆರ್.ಸಭಾಪತಿ
ಪ್ರತಾಪಚಂದ್ರ ಶೆಟ್ಟಿ
ವೀರಪ್ಪಮೊಲಿ
ಕೆ. ಜಯಪ್ರಕಾಶ ಹೆಗ್ಡೆ
ವಸಂತ ಸಾಲ್ಯಾನ್
ವಿ. ಸುನೀಲ್‌ಕುಮಾರ್ (ಹಾಲಿ)
ಗೋಪಾಲ ಪೂಜಾರಿ (ಹಾಲಿ)
ಕೆ.ರಘುಪತಿ ಭಟ್
ಲಾಲಾಜಿ ಮೆಂಡನ್
ಹಾಲಾಡಿ ಶ್ರೀನಿವಾಸ ಶೆಟ್ಟಿ (ಹಾಲಿ)
ಲಕ್ಷ್ಮೀನಾರಾಯಣ
ಗೋಪಾಲ ಭಂಡಾರಿ
ವಿನಯಕುಮಾರ ಸೊರಕೆ (ಹಾಲಿ)
ಪ್ರಮೋದ್ ಮಧ್ವರಾಜ್ (ಹಾಲಿ)
ಬಾಲಕೃಷ್ಣ ಭಟ್
ಡಿ.ಎಚ್.ಶಂಕರಮೂರ್ತಿ (ಹಾಲಿ)
ಕೋಟ ಶ್ರೀನಿವಾಸ ಪೂಜಾರಿ (ಹಾಲಿ)
ಕ್ಯಾ|ಗಣೇಶ ಕಾರ್ಣಿಕ್ (ಹಾಲಿ)
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು:
1. ಬಿ.ಎಚ್.ಅನಿಲ್‌ಕುಮಾರ್ (01-04-1998ರಿಂದ 17-06-1998)
2. ಗಂಗಾರಾಮ ಬಡೇರಿಯಾ (18-06-1998ರಿಂದ 13-10-1999)
3. ಬಿ.ಎಂ.ಶಿವಪ್ರಕಾಶ (14-10-1999ರಿಂದ 02-01-2001)
4. ಕೆ.ಸುಂದರ ನಾಯ್ಕ (11-01-2001ರಿಂದ 18-12-2004)
5. ಎ.ಎಂ.ಕುಂಜಪ್ಪ (19-12-2004ರಿಂದ 01-07-2005)
6. ಆರ್.ಶಾಂತರಾಜ್ (01-07-2005ರಿಂದ 20-05-2006)
7. ಪಿ.ಹೇಮಲತಾ (20-05-2006ರಿಂದ 23-02-2008)
8. ಎನ್.ಎಸ್.ಪ್ರಸನ್ನಕುಮಾರ್ (23-02-2008ರಿಂದ 11-12-2009)
9. ಎನ್.ರಾಜಶೇಖರ (07-05-2010ರಿಂದ 09-05-2011)
10. ಎಸ್.ಎ.ಪ್ರಭಾಕರ ಶರ್ಮ (01-08-2011ರಿಂದ 17-01-2014)
11. ಎಂ. ಕನಗವಲ್ಲಿ (17-01-2014 ರಿಂದ 17-11-2015)
12. ಪ್ರಿಯಾಂಕ ಮೇರಿ ಫ್ರಾನ್ಸಿಸ್ (17-11-2015 ರಿಂದ 09-08-2017)
13. ಶಿವಾನಂದ ಕಾಪಶಿ (09-08-2017ರಿಂದ…)
(ನಡುನಡುವೆ ಉಪಕಾರ್ಯದರ್ಶಿಗಳು ಪ್ರಭಾರ ಸಿಇಒ ಆಗಿ ಸೇವೆ ಸಲ್ಲಿಸಿದ್ದರು)
ಜಿ.ಪಂ.: ದ್ವಾದಶ ಉಪಾಧ್ಯಕ್ಷರು:
1. ಬಿ.ಎಸ್.ಪ್ರತಾಪಚಂದ್ರ ಶೆಟ್ಟಿ
2. ಸುಗುಣಾ ಎನ್. ಶೆಟ್ಟಿ
3. ರಾಜು ದೇವಾಡಿಗ
4. ಡಾ|ಯು.ವನಜಾಕ್ಷಿ
5. ಎಚ್.ಪ್ರಸನ್ನ ಬಲ್ಲಾಳ್
6. ಶಾರದಾ ಬಿಜೂರು
7. ಸುಜಾತಾ ವಾಸುದೇವ
8. ಡಾ|ಸಂತೋಷಕುಮಾರ್ ಶೆಟ್ಟಿ
9. ಜ್ಯೋತಿ ಸೀತಾರಾಮ ಶೆಟ್ಟಿ
10. ಮಮತಾ ಆರ್. ಶೆಟ್ಟಿ
11. ಪ್ರಕಾಶ್ ಟಿ. ಮೆಂಡನ್
12. ಶೀಲಾ ಕೆ. ಶೆಟ್ಟಿ
1997-2017: ಜಿಲ್ಲೆಯ ಸಂಸದರು:
– ಆಸ್ಕರ್ ಫೆರ್ನಾಂಡಿಸ್
– ಐ.ಎಂ.ಜಯರಾಮ ಶೆಟ್ಟಿ
– ವಿನಯಕುಮಾರ ಸೊರಕೆ
– ಮನೋರಮಾ ಮಧ್ವರಾಜ್
– ಡಿ.ವಿ.ಸದಾನಂದ ಗೌಡ
– ಜಯಪ್ರಕಾಶ್ ಹೆಗ್ಡೆ
– ಶೋಭಾ ಕರಂದ್ಲಾಜೆ (ಹಾಲಿ)
ಜಿ.ಪಂ.: 20 ವರ್ಷಕ್ಕೆ 20 ಅಧ್ಯಕ್ಷರು:
1. ರೆಮಿಡಿಯಾ ಡಿ’ಸೋಜಾ (18-04-1998ರಿಂದ 17-12-1999)
2. ಕೇಶವ ಕುಂದರ್ (20-12-1999ರಿಂದ 08-05-2000)
3. ಸರಸು ಡಿ. ಬಂಗೇರ (14-07-2000ರಿಂದ 13-03-2002)
4. ಅಶೋಕಕುಮಾರ್ ಹೆಗ್ಡೆ (15-03-2002ರಿಂದ 29-01-2003)
5. ಭುಜಂಗ ಶೆಟ್ಟಿ (26-02-2003ರಿಂದ 14-11-2003)
6. ಡಾ|ಯು.ವನಜಾಕ್ಷಿ (15-11-2003ರಿಂದ 13-07-2005)
7. ಡಿ.ಎನ್.ನರಸಿಂಹರಾಜು (ಆಡಳಿತಾಧಿಕಾರಿ, 14-07-2005ರಿಂದ 11-09-2005)
8. ಸಿ.ಎಸ್ .ಕೇದಾರ್ (ಆಡಳಿತಾಧಿಕಾರಿ, 12-09-2005ರಿಂದ 27-01-2006)
9. ಬಿ.ಎನ್.ಶಂಕರ ಪೂಜಾರಿ (27-01-2006ರಿಂದ 26-09-2007)
10. ರಾಜು ಪೂಜಾರಿ (27-09-2007ರಿಂದ 26-05-2009)
11. ಎನ್.ಬಿ.ಬಾಬು (ಪ್ರಭಾರ, 27-05-2009ರಿಂದ 19-06-2009)
12. ಜೆರಾಲ್ಡ್ ಫೆರ್ನಾಂಡಿಸ್ (ಪ್ರಭಾರ, 19-06-2009ರಿಂದ 26-08-2009)
13. ಗ್ಲಾಡಿಸ್ ಡಿ’ ಅಲ್ಮೇಡ (26-08-2009ರಿಂದ 26-01-2011)
14. ಎಂ.ವಿ. ಜಯಂತಿ (ಆಡಳಿತಾಧಿಕಾರಿ, 27-01-2011ರಿಂದ 09-02-2011)
15. ಕಟಪಾಡಿ ಶಂಕರ ಪೂಜಾರಿ (09-02-2011ರಿಂದ 8-10-2012)
16. ಉಪೇಂದ್ರ ನಾಯಕ್ (ಪ್ರಭಾರ 09-10-2012ರಿಂದ 04-11-2012, ರೆಗ್ಯುಲರ್ 04-01-2013ರಿಂದ 08-06-2014)
17. ಉದಯ ಕೋಟ್ಯಾನ್ (ಪ್ರಭಾರ 25-07-2014ರಿಂದ 06-08-2014)
18. ಸವಿತಾ ಕೋಟ್ಯಾನ್ (07-08-2014ರಿಂದ 08-02-2016)
19. ಎ.ಎಂ.ಕುಂಜಪ್ಪ (ಆಡಳಿತಾಧಿಕಾರಿ, 08-02-2016ರಿಂದ 26-04-2016)
20. ದಿನಕರ ಬಾಬು (27-4-2016ರಿಂದ…)
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.