ಸಡಗರದ ಚೌತಿಯ ಆಚರಣೆಗೆ ಬಂತು ಕಬ್ಬು


Team Udayavani, Aug 23, 2017, 8:20 AM IST

kabbu.jpg

ಗಣಪತಿಯ ಪೂಜೆಗೆ ಕಬ್ಬು ಅತ್ಯಂತ ವಿಶೇಷವಾದದ್ದು. ಅಷ್ಟದ್ರವ್ಯ ನೈವೇದ್ಯ ಗಣಪತಿಗೆ ಅರ್ಪಿಸುವ ರೂಢಿ ಇದೆ. ಈ ದ್ರವ್ಯದಲ್ಲಿ ತೆಂಗಿನಕಾಯಿ, ಅವಲಕ್ಕಿ, ಹೊದಲು, ಶಕು¤, ಮೋದಕ, ಕಬ್ಬು, ಬಾಳೆ ಹಣ್ಣು, ಎಳ್ಳು ಮತ್ತು ಇವುಗಳನ್ನು ಮಿಶ್ರಣ ಮಾಡಲು ಬೆಲ್ಲ, ಜೇನು ಮತ್ತು ತುಪ್ಪ ಸೇರಿಸುತ್ತಾರೆ. ಕಬ್ಬು ಇಲ್ಲದೆ ಈ ನೈವೇದ್ಯ ಆಗದು. ಹೀಗಾಗಿ ಗಣಪತಿಗೆ ಕಬ್ಬು ಅತ್ಯಂತ ಪ್ರೀತಿಕರವಾದುದು.

ಗಣಹೋಮದ ವೇಳೆ ಮಾಡುವ ಪಂಚಕಜ್ಜಾಯಕ್ಕೆ 8 ಗಂಟಿನ ಕಬ್ಬು ಬೇಕು. ಇದನ್ನು ಸುಲಿದ ಸಿಪ್ಪೆ ಗಣ ಹೋಮಕ್ಕೇ ಸಮರ್ಪಿಸಬೇಕು. ಕಬ್ಬು ಬೆರೆಸಿ ಮಾಡಿದ ಕಜ್ಜಾಯ ಹೋಮಕ್ಕೆ ನೀಡಬೇಕು. ಗಣಪತಿಯ ರಂಗ ಪೂಜೆಗೆ 21 ಗಂಟಿನ ಕಬ್ಬು ನೈವೇದ್ಯವಾಗಬೇಕು. ಮಧೂರು ಮಹಾಗಣಪತಿಗೆ ಮೂಡಪ್ಪ ಸೇವೆ ಮಾಡಿದ ವೇಳೆ ಕಬ್ಬಿಗೆ ಅತೀ ಪ್ರಾಮುಖ್ಯತೆ ದೊರೆತಿತ್ತು. ಗಣಪತಿಯ ವಿಗ್ರಹದ ಸುತ್ತಲೂ ಕಬ್ಬಿನ ಆವರಣವನ್ನು ರಚಿಸಿ ಇದರ ಒಳಭಾಗದಲ್ಲಿ ವಿಗ್ರಹದ ಕುತ್ತಿಗೆ ವರೆಗೂ ವಿಶೇಷ ದ್ರವ್ಯಗಳಿಂದ ತಯಾರಿಸಿದ ಅಪ್ಪಗಳನ್ನು ತುಂಬಿಸಿ ಒಂದು ರಾತ್ರಿ ಇರಿಸಿ ಮರುದಿನ ಪ್ರಸಾದ ರೂಪದಲ್ಲಿ ಅಪ್ಪ ಹಾಗೂ ಕಬ್ಬನ್ನು ವಿತರಿಸಲಾಗಿತ್ತು. ಅಂತು ಗಣ ಹೋಮದಿಂದ ಮೊದಲ್ಗೊಂಡು ಮೂಡಪ್ಪ ಸೇವೆ ವರೆಗಿನ ಅತೀ ವಿಶೇವಾದ ಗಣಪತಿ ಆರಾಧನೆಗೆ ಕಬ್ಬು ಬೇಕೇ ಬೇಕು.

ಇದರಿಂದಾಗಿ ಚೌತಿ ವೇಳೆಗೆ ಕಬ್ಬಿಗೆ ಬಾರೀ ಬೇಡಿಕೆ. ಇದನ್ನು ಪೂರೈಸಲು ಕಾಸರಗೋಡು ಪೇಟೆಗೆ ಈಗಾಗಲೇ ಕಬ್ಬಿನ ರಾಶಿಯೇ ಬಂದಿದೆ. ಸಾಮಾನ್ಯವಾಗಿ ಕಬ್ಬು ಲಾರಿಯಲ್ಲಿ ಸಾಗಿಸುವಾಗ ಅದರ ಮೇಲಿನ ತುದಿ ಕಡಿದು ಕೊಂಡೇ ಬರುತ್ತದೆ. ಇದು ಹೆಚ್ಚಾಗಿ ಕಬ್ಬಿನ ರಸಕ್ಕಾಗಿ ಉಪಯೋಗಿಸುವುದರಿಂದ ತಿರಿ ಕಬ್ಬಿನ ಆವಶ್ಯಕತೆ ಇಲ್ಲ. ಆದರೆ ಚೌತಿ ವೇಳೆಗೆ ಕಜ್ಜಾಯದ ಜತೆಗೆ ಗಣಪತಿ ಪೀಠದ ಹಾಗೂ ಪೂರ್ತಿ ವೇದಿಕೆಯ ಅಲಂಕಾರಕ್ಕಾಗಿ ತಿರಿ ಕಬ್ಬು ಅಗತ್ಯವಾಗಿ ಬೇಕಾಗುತ್ತಿದ್ದು ಈ ಕಾರಣಕ್ಕೆ ವ್ಯಾಪಾರಿಗಳು ತಿರಿ (ಎಲೆಗಳು ಇರುವ) ಕಬ್ಬುಗಳನ್ನೇ ತರಿಸುತ್ತಾರೆ. ಇದನ್ನು ಸುಳಿ ಕಬ್ಬು ಎಂದು ಹೆಸರಿಸಲಾಗಿದೆ. ಚೌತಿ ವೇಳೆಗೆ ಮತ್ತು ತುಳಸಿ ಪೂಜೆ ವೇಳೆಗೆ ಮಾತ್ರ ಈ ಸುಳಿ ಕಬ್ಬು ಮಾರುಕಟ್ಟೆಗೆ ಬರುತ್ತಿದ್ದು, ಆ ಮೇಲೆ ಇದಕ್ಕೆ ಖಾಯಸು ಕಮ್ಮಿ. ಒಂದು ವೇಳೆ ಹಬ್ಬದ ಅಗತ್ಯ ಮುಗಿದು ಸುಳಿ ಕಬ್ಬು ಉಳಿದರೆ ತಲೆ ಕಡಿದು ಈ ಕಬ್ಬನ್ನು ರಸಕ್ಕೆ ವ್ಯಾಪಾರಿಗಳು ಉಪಯೋಗಿಸುತ್ತಾರೆ. ಅಂತು ಕಬ್ಬಿಗೆ ಇಲ್ಲೂ ನಷ್ಟದ ಚಿಂತೆ ಇಲ್ಲ.

ಹಿಂದೆ ಕಾಸರಗೋಡಿನ ಹೊರವಲಯ ವಾದ ಆಲಂಪಾಡಿ, ಎರ್ದುಂಕಡವು, ಬಾರಿಕ್ಕಾಡ್‌ ಪ್ರದೇಶದಲ್ಲಿ ಯಥೇತ್ಛ ಕಬ್ಬು ಬೆಳೆಸಲಾಗುತ್ತಿತ್ತು. ಉದ್ದನೆಯ ತೆಳು ಕಬ್ಬು ಇದಾಗಿದ್ದು ಹೆಚ್ಚಾಗಿ ಬೆಲ್ಲ ತಯಾರಿಸಲು ಉಪಯೋಗವಾಗುತ್ತಿತ್ತು. 
ಈ ಭಾಗದಲ್ಲಿ ಆ ಕಾಲದಲ್ಲಿ ಬೆಲ್ಲದ ಆಲೆ ಮನೆಗಳೇ ತುಂಬಿದ್ದುವು. ಇಲ್ಲಿಂದ ಬೆಲ್ಲ ದೂರದ ಊರಿಗೂ ಹೋಗುತ್ತಿತ್ತು.

ಇಂದು ಈ ಭಾಗದಲ್ಲಿ ಒಂದೇ ಒಂದು ಕಬ್ಬು ಸಿಗದು. ಕೃಷಿಯೇ ಇಲ್ಲವಾಗಿದ್ದು ಈ ತಳಿ ಕಬ್ಬು ನಿರ್ನಾಮವಾಗಿದೆ. ಹಳದಿ ಬಣ್ಣದ ಈ ಕಬ್ಬು ಕಾಮಾಲೆ ರೋಗಕ್ಕೆ ಔಷಧವೆಂದು ತಿಳಿದಿರುವ ಅನೇಕರು ಇದೀಗ ಪೇಟೆಗೆ ಬಂದು ಹಳದಿ ಕಬ್ಬಿನ ಹಾಲು ಕೇಳಿ ಬಂದರೆ ವ್ಯಾಪಾರಿಗಳು ಕರ್ನಾಟಕದ ಕಬ್ಬಿನ ಹಾಲನ್ನೇ ಹಿಂಡಿ ನೀಡುತ್ತಿದ್ದಾರೆ. ಅವರೆನ್ನುವಂತೆ ಹಳದಿ ಕಬ್ಬು ಇದೀಗ ದೊರೆಯುತ್ತಲೇ ಇಲ್ಲ.

ಕಬ್ಬು ಭಾರತೀಯ ಮೂಲದ್ದು. ಇಲ್ಲಿಂದಲೇ ಕಬ್ಬು ಇತರ ರಾಷ್ಟ್ರಗಳಿಗೆ ಸಾಗಿ ಅಲ್ಲಿ ಕೃಷಿ ಪ್ರಾರಂಭಿಸಲಾಗಿತ್ತು. ವೇದ ಕಾಲದಲ್ಲೇ ಇದರ ಇರುವು ಇತ್ತು ಎಂದು ಶಾಸ್ತ್ರ ಹೇಳುತ್ತದೆ. ಅಂದೇ ಕಬ್ಬಿನ ಔಷಧೀಯ ಗುಣವನ್ನು ಕಂಡಿದ್ದರು. ಅತರ್ವಣ ವೇದ, ಅಮರಕೋಶ, ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ಕಬ್ಬಿನ ಔಷಧೀಯ ಗುಣಗಳನ್ನು ತಿಳಿಸಲಾಗಿದೆ. ಎ, ಬಿ, ಸಿ ಜೀವಸತ್ವ ಇದರಲ್ಲಿ ಅಡಕವಾಗಿದ್ದು ಚರ್ಮರೋಗ, ಸಾಂಕ್ರಾಮಿಕ ರೋಗ, ಕಣ್ಣಿನ ತೊಂದರೆ, ಶರೀರ ಬೆಳವಣಿಗೆಗೆ ಸ್ನಾಯು ದೌರ್ಬಲ್ಯ, ಹೃದಯ ಮತ್ತು ಮೆದುಳು ಚುರುಕುಗೊಳಿಸುವುದು, ನರಮಂಡಲದ ಕೆಲಸ ಸರಿಮಾಡುವುದು, ವಸಡು ಮತ್ತು ಎಲುಬು ಗಟ್ಟಿ ಮಾಡಿ ಹಲ್ಲುಗಳನ್ನು ಹೊಳೆಯುವಂತೆ ಮಾಡುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಜೀವ ಸತ್ವಗಳನ್ನು ಸರಿಪಡಿಸುವುದು.

ಡಾ|ಎ.ಡಿ.ಧಾರವಾಡ ಅವರು ತಿಳಿಸುವಂತೆ ಜ್ವರ, ನೀರಡಿಕೆ, ಗೊನೋರಿಯಾ, ಕೆಮ್ಮು, ಮಲಬದ್ಧತೆ, ವಾತ, ಎದೆ ಉರಿ, ಅಸಿಡಿಟಿ, ಜಠರ ವೃಣ, ಮರೆವು, ಮಕ್ಕಳಾಗದಿರುವುದು ಮುಂತಾದ ತೊಂದರೆಗಳಲ್ಲಿ ತಾಜಾ ಕಬ್ಬಿನ ಹಾಲು, ಲಿಂಬೆ ರಸ, ಹಸಿ ಶುಂಠಿ ರಸ ಮತ್ತು ಎಳ ನೀರು ಬೆರೆಸಿ ಕುಡಿದರೆ ಉತ್ತಮ ಪರಿಹಾರ ಸಿಗುತ್ತದೆ. ಕಬ್ಬಿನ ಉದ್ದ ಎಲೆಯ ಮೇಲೆ ಶೇಖರಿಸಿದ ಇಬ್ಬನಿ ನೀರು ಕಣ್ಣು ಪೊರೆ, ಕಣ್ಣು ರೆಪ್ಪೆಯ ಒರಟುತನ ಹಾಗೂ ಇರುಳುಗಣ್ಣು ಮುಂತಾದ ದೃಷ್ಟಿ ದೋಷಗಳಿಗೆ ಉತ್ತಮವಾಗಿದೆ. ಕಣ್ಣಿನ ಶ್ರಮ ಪರಿಹರಿಸಲು ಕಬ್ಬು ಉತ್ತಮ ಔಷಧ. ಕಾಮಾಲೆ ರೋಗದವರಿಗೆ ಕಬ್ಬಿನ ಹಾಲು ರಾಮಬಾಣ. ಪ್ರತಿದಿನ ಕುಡಿಯುವುದರಿಂದ ಯಕೃತ್ತಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ತೆರೆದ ಹವೆಯಲ್ಲಿ ರಾತ್ರಿ ಕಬ್ಬು ಇರಿಸಿ ಮುಂಜಾನೆ ಹಲ್ಲಿನಿಂದ ಸಿಪ್ಪೆ ಸುಲಿದು 2-3 ವಾರ ತಿಂದರೆ ಕಾಮಾಲೆ ರೋಗ ಪೂರ್ತಿ ಗುಣವಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಗ್ವಾಯಿಟರ್‌, ಅಜೀರ್ಣ, ಗರ್ಭಿಣಿಯರ ಅಶಕ್ತತೆ, ಚಿಕ್ಕ ಮಕ್ಕಳ ಮೆದುಳು ತೊಂದರೆ, ಹೃದಯ ನೋವು, ತಲೆನೋವು, ಬಂಜೆತನ, ಮಾಸಿಕ ಋತು ಸ್ರಾವದ ನೋವು ಮತ್ತು ನರಗಳ ತೊಂದರೆ ನಿವಾರಣೆಗೆ ಕಬ್ಬಿನ ಹಾಲು ಉತ್ತಮ. ಕಬ್ಬಿನ ಹಾಲನ್ನು ಹಾಲಿನೊಂದಿಗೆ ಕುಡಿದರೆ ದೇಹದ ಕಾಂತಿ ಹೆಚ್ಚುವುದು ಮಾತ್ರವಲ್ಲ ಸುಖನಿದ್ರೆ ಬರುವುದು. ಪಿತ್ತ ವಾಂತಿಯಲ್ಲಿ ಒಂದು ಗ್ಲಾಸ್‌ ಕಬ್ಬಿನ ಹಾಲಿಗೆ ಎರಡು ಚಮಚ ಜೇನು ತುಪ್ಪ ಬೆರೆಸಿ ಕುಡಿದರೆ ಉಪಶಮನ ದೊರೆಯುತ್ತದೆ.

ಕಾಸರಗೋಡಿಗೆ ಕಬ್ಬು ಕರ್ನಾಟಕದಿಂದ
ಕಾಸರಗೋಡಿಗೆ ಕಬ್ಬು ಬರುತ್ತಿರುವುದು ಕರ್ನಾಟಕದಿಂದ. ಮಂಡ್ಯ ಜಿಲ್ಲೆಯ ಕಬ್ಬು ಸಕ್ಕರೆಗಾಗಿ ಮಾತ್ರ ಉಪಯೋಗವಾಗುತ್ತಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರ ಮತ್ತು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ ಪೇಟೆಯಿಂದ ಇಲ್ಲಿಗೆ ಕಬ್ಬು ಬರುತ್ತಿದೆ. ಇಲ್ಲಿಂದ ಬರುವ ಕಬ್ಬು ಫರಂ ಕಬ್ಬು  ಮತ್ತು ಪಟುವಾಳಿ ಕಬ್ಬು ಎಂದು ಹೆಸರಿಡಲಾಗಿದೆ. ಫರಂ ಕಬ್ಬು ಸ್ವಲ್ಪ ಕೆಂಪು, ದಪ್ಪ ಮತ್ತು ಉದ್ದನೆಯದ್ದಾಗಿದ್ದರೆ ಪಟುವಾಳಿ ಕಬ್ಬು ಹಸಿರು ನಾಮ ಹೊಂದಿಸಲ್ಪಟ್ಟು  ಗಿಡ್ಡ ವಾದದ್ದು. ಇವು ಕಬ್ಬಿನ ಹಾಲು ತೆಗೆಯಲು ಉಪಯೋಗವಾಗುವವುಗಳು. ಇದನ್ನು ಹೊರತು ಪಡಿಸಿ ಮಂಗಳೂರು ತೊಕ್ಕೊಟ್ಟು ಒಳಭಾಗದಲ್ಲಿ ಕೇಜಿ ಕಬ್ಬು ಬೆಳೆಸಲಾಗುತ್ತಿದ್ದು, ಕಪ್ಪು ಹೊರ ಮೈಯ್ಯ ಈ ಕಬ್ಬು ಕೂಡ ಕಬ್ಬಿನ ಹಾಲು ತೆಗೆಯಲೇ ಬಳಸಲಾಗುತ್ತಿದೆ. ಈ ಮೂರು ಕಬ್ಬುಗಳು ಚೌತಿ ಹಬ್ಬದ ವೇಳೆ ಸುಳಿ ಕಬ್ಬು ರೂಪ ತಾಳಿ ಬರುತ್ತದೆ. ಸಾಮಾನ್ಯ ಚೌತಿ ವೇಳೆಗೆ ಕಾಸರಗೋಡು ವ್ಯಾಪ್ತಿಯಲ್ಲಿ ಸುಮಾರು 5,000 ಸುಳಿ ಕಬ್ಬು ವಿಕ್ರಯವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.

ಸಾಮಾನ್ಯ ಇತರ ದಿನಗಳಲ್ಲಿ ವಾರಕ್ಕೆ 1,200 ಕಟ್ಟ (ಒಂದು ಕಟ್ಟದಲ್ಲಿ 18 ಕಬ್ಬುಗಳು) ಕಬ್ಬು ಈ ಭಾಗದಲ್ಲಿ ಕಬ್ಬಿನ ಹಾಲು ತೆಗೆಯಲು ಬಳಸಲಾಗುತ್ತಿದ್ದು, ಚೌತಿ ದಿನಕ್ಕೆ 5,000 ಹೆಚ್ಚುವರಿ ಕಬ್ಬು ಬೇಕಾಗುತ್ತದೆ. ಚೌತಿಯ ವೇಳೆ ಒಂದು ಕಬ್ಬು ರೂ. 50ರಂತೆ ವಿಕ್ರಯಿಸುತ್ತಾರೆ. ಸುಳಿ ಕಬ್ಬು ಪಡೆಯುವವರು ಕಮ್ಮಿಯಲ್ಲಿ ಒಂದು ಕಟ್ಟ ಕಬ್ಬನ್ನು ಖರೀದಿಸುತ್ತಾರೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ. ಮಂಗಳೂರು ಭಾಗದಲ್ಲಿ ಚೌತಿಯ ದಿನದಂದು ಅನೇಕರು ಕಟ್ಟದಷ್ಟು ಕಬ್ಬು ಖರೀದಿಸಿ ಮನೆಯಲ್ಲಿ ಹಲ್ಲಿನಿಂದ ಸುಲಿದು ಕಬ್ಬು ತಿನ್ನುತ್ತಾರೆ ಅನ್ನುವ ಮಾಹಿತಿಯಿದೆ. ಇದು ಒಂದು ಸಂಪ್ರದಾಯ. ಆ ದಿನ ಮನೆಗೆ ಬಂದವರಿಗೂ ಕಬ್ಬಿನ ತುಂಡುಗಳನ್ನು ನೀಡಿ ತಿನ್ನಿಸುತ್ತಾರಂತೆ. ಈ ಸಂಪ್ರದಾಯ ಹಿಂದಿನ ಕಾಲದಲ್ಲಿ ಇದ್ದಷ್ಟು ಇಲ್ಲದಿದ್ದರೂ ಇದು ಪೂರ್ತಿ ನಿಂತಿಲ್ಲ ಎಂದು ಹೇಳಲಾಗುತ್ತಿದೆ. ಗಣಪತಿಯ ನೆನಪು ಈ ರೀತಿಯಲ್ಲಿ ಮಾಡುವುದು ಇವರ ಉದ್ದೇಶವಾಗಿರಬೇಕು.

ಚಿತ್ರ, ಬರಹ : ರಾಮದಾಸ್‌ ಕಾಸರಗೋಡು

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.