ಕೊಹ್ಲಿ: ಸಾವಿರ ರನ್ ಗುರಿ
Team Udayavani, Aug 23, 2017, 8:40 AM IST
ಹೊಸದಿಲ್ಲಿ: ಪ್ರಚಂಡ ಫಾರ್ಮ್ನಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂದೆ ಈ ವರ್ಷದ ಏಕದಿನ ಪಂದ್ಯಗಳಲ್ಲಿ ಸರ್ವಾಧಿಕ ರನ್ ದಾಖಲಿಸುವ ಜತೆಗೆ ಕ್ಯಾಲೆಂಡರ್ ವರ್ಷವೊಂದರಲ್ಲಿ ಸಾವಿರ ರನ್ ಪೇರಿಸುವ ಮಾರ್ಗ ತೆರೆದುಕೊಂಡಿದೆ.
ಸದ್ಯ ವಿರಾಟ್ ಕೊಹ್ಲಿ ಈ ವರ್ಷದ 14 ಪಂದ್ಯಗಳಿಂದ 769 ರನ್ ಪೇರಿಸಿ ತೃತೀಯ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್ ಅವರಿಗೆ ಅಗ್ರಸ್ಥಾನ. ಅವರು 16 ಪಂದ್ಯಗಳನ್ನಾಡಿದ್ದು, 814 ರನ್ ಗಳಿಸಿದ್ದಾರೆ. ಜೋ ರೂಟ್ 14 ಪಂದ್ಯಗಳಿಂದ 785 ರನ್ ಹೊಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ನಡುವಿನ ಅಂತರ ಕೇವಲ 45 ರನ್ ಮಾತ್ರ. ಭಾರತವಿನ್ನು ಶ್ರೀಲಂಕಾ ಸರಣಿಯಲ್ಲಿ 4 ಪಂದ್ಯಗಳನ್ನು ಆಡಬೇಕಿದೆ. ಅಷ್ಟರಲ್ಲಿ ಕೊಹ್ಲಿ ಮೊದಲ ಸ್ಥಾನಕ್ಕೆ ನೆಗೆಯುವುದರಲ್ಲಿ ಅನುಮಾನವಿಲ್ಲ.
ಲಂಕಾ ಸರಣಿಯ 4 ಪಂದ್ಯಗಳೂ ಸೇರಿದಂತೆ ಭಾರತವಿನ್ನು ಈ ವರ್ಷ 11 ಏಕದಿನ ಪಂದ್ಯಗಳನ್ನಾಡಲಿದೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡಿಗೆ ಹೋಲಿ ಸಿದರೆ ಭಾರತದ ಮುಂದಿರುವ ಏಕದಿನ ಪಂದ್ಯಗಳ ಸಂಖ್ಯೆ ಆಧಿಕ. ಹೀಗಾಗಿ ಕೊಹ್ಲಿ ಮುಂದೆ ಸಾವಿರ ರನ್ ಪೂರೈಸುವ ಅವಕಾಶ ಧಾರಾಳವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.