ಕ್ವಿಟೋವಾಗೆ ಮೊದಲ ಸುತ್ತಿನ ಆಘಾತ
Team Udayavani, Aug 23, 2017, 8:00 AM IST
ನ್ಯೂ ಹೆವನ್: ಪೆಟ್ರಾ ಕ್ವಿಟೋವಾ ಅವರ ಯುಎಸ್ ಓಪನ್ ಸಿದ್ಧತೆಗೆ ಮೊದಲ ಸುತ್ತಿನಲ್ಲೇ ಏಟು ಬಿದ್ದಿದೆ. ನ್ಯೂ ಹೆವನ್ನಲ್ಲಿ ಆರಂಭ ಗೊಂಡ “ಕನೆಕ್ಟಿಕಟ್’ ಟೆನಿಸ್ ಪಂದ್ಯಾವಳಿಯಲ್ಲಿ ಅವರು ಪ್ರಥಮ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಸೋಮವಾರ ರಾತ್ರಿಯ ಸ್ಪರ್ಧೆಯಲ್ಲಿ ಜೆಕ್ ಆಟಗಾರ್ತಿ ಕ್ವಿಟೋವಾಗೆ ಚೀನದ 29ನೇ ರ್ಯಾಂಕಿಂಗ್ ಆಟಗಾರ್ತಿ ಶುಯಿ ಜಾಂಗ್ 6-2, 6-1ರಿಂದ ಆಘಾತವಿಕ್ಕಿದರು. ಇಲ್ಲಿ 2 ಸಲ ಚಾಂಪಿಯನ್ ಆಗಿ ಮೂಡಿಬಂದಿದ್ದ, 2 ಸಲ ವಿಂಬಲ್ಡನ್ ಟ್ರೋಫಿ ಎತ್ತಿದ ಕ್ವಿಟೋವಾ ಪಾಲಿಗೆ ಇದೊಂದು ದೊಡ್ಡ ಹಿನ್ನಡೆಯಾಗಿದೆ. ಜಾಂಗ್ ಹಿಂದಿನ ರಾತ್ರಿಯಷ್ಟೇ ಚೀನದಿಂದ ಆಗಮಿಸಿ ನೇರವಾಗಿ ಕಣಕ್ಕಿಳಿದಿದ್ದರು.
ದಿನದ ಇನ್ನೊಂದು ಪಂದ್ಯದಲ್ಲಿ ಕೆನಡಾದ ಯುಗೆನಿ ಬೌಷಾರ್ಡ್ 6-3, 6-1 ಅಂತರದಿಂದ ಅಮೆರಿಕದ ಲಾರೆನ್ ಡೇವಿಸ್ ಅವರನ್ನು ಸೋಲಿಸಿದರು. ಬೌಷಾರ್ಡ್ ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು. ಇವರ ಮುಂದಿನ ಸುತ್ತಿನ ಎದುರಾಳಿ ಅಗ್ರ ಶ್ರೇಯಾಂಕದ ಅಗ್ನಿàಸ್ಕಾ ರಾದ್ವಂಸ್ಕಾ.
ಬೆಲ್ಜಿಯಂನ ಕರ್ಸ್ಟನ್ ಫ್ಲಿಪ್ಕೆನ್ಸ್ ಉಕ್ರೇನಿನ ಲೆಸಿಯಾ ಸುರೆಂಕೊ ಅವರನ್ನು 6-2, 6-3 ಅಂತರದಿಂದ; ರೊಮೇನಿಯಾದ ಅನಾ ಬೊಗ್ಧಾನ್ ರಶ್ಯದ ಎಲೆನಾ ವೆಸ್ನಿನಾ ಅವರನ್ನು 7-5, 7-5 ಅಂತರದಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Ranji match: ಉತ್ತರಪ್ರದೇಶ ಬೃಹತ್ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ
MUST WATCH
ಹೊಸ ಸೇರ್ಪಡೆ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.