ಅಗಣಿತ ಅಚ್ಚರಿಯ ಗಣಪ
Team Udayavani, Aug 24, 2017, 7:45 AM IST
ಹೊಸ ರೂಪ, ಹೊಸ ಗಾತ್ರಗಳೊಂದಿಗೆ ಪ್ರತಿ ವರುಷ ಬಂದು ಕೂರುವ ಗಣಪನಿಗೆ ಮತ್ತೆ ಚೌತಿಯ ಸಂಭ್ರಮ. ಈ ಪ್ರಥಮಪೂಜಿತ ಬೇರೆಲ್ಲ ದೇವರುಗಳಿಗಿಂತ ಏಕೆ ಭಿನ್ನ? ಅದರಲ್ಲೂ ಮಕ್ಕಳಿಗೆ ಗಣಪ ಹೆಚ್ಚು ಅಚ್ಚುಮೆಚ್ಚಿನ ದೇವರಾಗುತ್ತಾನೆ? ಕಾರಣ ಒಂದೇ, “ಗಣಪ’ ಈ ಜಗದ ಅಭೂತಪೂರ್ವ ವಿಸ್ಮಯ…
ಹಲ್ಲು ಆಕಾಶ ಸೇರಿದ ಕತೆ…
ಗಣಪನಿಗೇಕೆ ಒಂದೇ ಹಲ್ಲು ಎಂಬುದಕ್ಕೆ ಪುರಾಣದಲ್ಲಿ ಅನೇಕ ಕಥೆಗಳಿವೆ. ಒಮ್ಮೆ ಹೊಟ್ಟೆ ತುಂಬಾ ಲಡ್ಡು ತಿಂದು ನಡೆಯಲಾರದೆ, ಎಡವಿ ಬಿದ್ದು ಗಣಪತಿಯ ಹೊಟ್ಟೆ ಒಡೆಯಿತಂತೆ. ಅದನ್ನು ನೋಡಿ ಚಂದ್ರ ಜೋರಾಗಿ ನಕ್ಕು ಬಿಟ್ಟ. ಅದರಿಂದ ಕೋಪಗೊಂಡ ಗಣಪತಿ ತನ್ನ ಒಂದು ಹಲ್ಲನ್ನು ಮುರಿದು ಆಕಾಶಕ್ಕೆಸೆದನಂತೆ ಎಂದು ಹೇಳುತ್ತಾರೆ. ಹಾಗೆಯೇ ವ್ಯಾಸ ಮಹರ್ಷಿಗಳು ಮಹಾಭಾರತ ಬರೆ ಯುವಂತೆ ಕೇಳಿ ಕೊಂಡಾಗ ದಂತವನ್ನೇ ಮುರಿ ದು ಲೇಖನಿಯಂತೆ ಬಳಸಿ ದ್ದನಂತೆ ಎಂಬ ಕತೆಯೂ ಇದೆ.
ಇವೆರಡಕ್ಕಿಂತ ಭಿನ್ನ ವಾದ ಇನ್ನೊಂದು ಕತೆ “ಬ್ರಹ್ಮ ವೈವರ್ಥ ಪುರಾಣ’ದಲ್ಲಿದೆ. ಒಮ್ಮೆ ಪರಶುರಾಮ ಮುನಿಗಳು ಶಿವನ ದರ್ಶನಕ್ಕೆಂದು ಕೈಲಾಸಕ್ಕೆ ಬರುತ್ತಾರೆ. ಅವರು ತಪಸ್ಸು ಮಾಡಿ ಶಿವನಿಂದ ಪರಶು (ಕೊಡಲಿ) ಮತ್ತು ಪಾಶುಪತಾಸ್ತ್ರ ಪಡೆದವರು. ಆದರೆ, ಗಣಪತಿ ಒಳಗೆ ಹೋಗದಂತೆ ಅವರನ್ನು ತಡೆಯುತ್ತಾನೆ. ಆಗ ಇಬ್ಬರ ನಡುವೆ ಕಾಳಗವೇ ನಡೆದು ಹೋಗುತ್ತದೆ. ಮುನಿಗಳು ಗಣಪತಿಯ ಮೇಲೆ ಪರಶುವನ್ನು ಪ್ರಯೋಗಿಸುತ್ತಾರೆ. ತಂದೆ ನೀಡಿದ ಆಯುಧಕ್ಕೆ ಗೌರವ ಕೊಡುವ ಸಲುವಾಗಿ ಗಣಪತಿ ಪರಶುವಿಗೆ ಮುಖವೊಡ್ಡುತ್ತಾನೆ. ಆಗ ಅವನ ದಂತವೊಂದು ಮುರಿದು ಹೋಗುತ್ತದಂತೆ.
ಚಂದ್ರನಿಗೆ ಅಂಟಿದ ಶಾಪ
ಬಿದ್ದು ಹೊಟ್ಟೆ ಒಡೆದುಕೊಂಡ ಗಣಪತಿಯನ್ನು ನೋಡಿ ಚಂದ್ರ ಮೇಲಿನಿಂದ ನಕ್ಕು ಬಿಡುತ್ತಾನೆ. ಆಗ ಗಣಪತಿಗೆ ತಡೆಯಲಾರದಷ್ಟು ಕೋಪ ಬರುತ್ತದೆ. ತನ್ನ ಒಂದು ದಂತವನ್ನೇ ಮುರಿದು ಚಂದ್ರನತ್ತ ಎಸೆದು, “ಚೌತಿಯ ದಿನ ನಿನ್ನ ಮುಖ ನೋಡಿದವರಿಗೆ ಕಳ್ಳತನದ ಆರೋಪ ಬರಲಿ’ ಎಂದು ಶಪಿಸುತ್ತಾನೆ. ಹಾಗಾಗಿ, ಚೌತಿಯ ದಿನ ಚಂದ್ರನ ಮುಖ ನೋಡುವುದು ಒಳ್ಳೆಯದಲ್ಲ ಎಂಬ ಮಾತಿದೆ.
ವಿದೇಶದಲ್ಲೂ ಗಣೇಶ!
ಗಣೇಶ ಭಾರತೀಯರಿಗೆ ಮಾತ್ರ ದೇವರಲ್ಲ. ಬೇರೆ ದೇಶಗಳಲ್ಲಿಯೂ ಆತ ಪೂಜನೀಯ. ಇಂಡೋನೇಷ್ಯಾದ 20,000 ರುಪಾಯಿ ಕರೆನ್ಸಿ ನೋಟು, ನಾಣ್ಯ ಮತ್ತು ಸ್ಟಾಂಪ್‌ಗ್ಳ ಮೇಲೆ ಗಣಪತಿಯ ಚಿತ್ರ ಇದೆ. ಅಲ್ಲಿಯೂ ಗಣೇಶನನ್ನು ಆರಾಧಿಸುತ್ತಾರೆ. ತಮಿಳುನಾಡಿನಲ್ಲಿ ಸಿಕ್ಕ ಗಣಪತಿಯ ವಿಗ್ರಹಗಳು ಕ್ರಿ.ಶ. 6ನೇ ಶತಮಾನಕ್ಕೆ ಸೇರಿದ್ದಾದರೆ, ಇಂಡೋನೇಷ್ಯಾದ ಪನೈಟಾನ್ ದ್ವೀಪಗಳಲ್ಲಿ ಪತ್ತೆಯಾದ ಗಣೇಶನ ವಿಗ್ರಹಗಳು 1ನೇ ಶತಮಾನದಲ್ಲಿ ಸ್ಥಾಪನೆಯಾದವುಗಳು! ಜಾವಾ ದ್ವೀಪವನ್ನು “ಗಣಪತಿಯ ನಾಡು’ ಎಂದೇ ಕರೆಯುತ್ತಾರೆ. ಕಪಾಲ ಗಣಪತಿಯ ದೊಡ್ಡ ವಿಗ್ರಹವೊಂದು ಹಾಲೆಂಡ್‌ನ ಲೈಡೆನ್ ಮ್ಯೂಸಿಯಂನಲ್ಲಿದೆ.
ಗಣಪನ ದೇಹವೇ ಒಂದು ಪಾಠಶಾಲೆ!
ದೊಡ್ಡ ತಲೆ, ಅಗಲವಾದ ಕಿವಿ, ಸಣ್ಣ ಕಣ್ಣು, ಕೈಯಲ್ಲಿ ಕೊಡಲಿ, ಹಗ್ಗ… ಹೀಗೆ ವಿಘ್ನ ವಿನಾಶಕನ ಆಕಾರ, ಸ್ವರೂಪ ತುಂಬಾ ವಿಚಿತ್ರವಾಗಿದೆ. ಶಿವನ ಕೋಪಕ್ಕೆ ಗುರಿಯಾಗಿ ತಲೆ ಕಳೆದುಕೊಂಡು ಗಜಮುಖನಾದ ಗಣೇಶನ ಅಗಲ ಕಿವಿ, ಸಣ್ಣ ಕಣ್ಣುಗಳು ಬದುಕಿನ ಪಾಠವನ್ನು ಬೋಧಿಸುತ್ತವೆ. ಗಣಪನ ಆಕಾರದಿಂದ ನಾವು ಕಲಿಯಬೇಕಾದದ್ದು ಏನೇನು ಗೊತ್ತಾ?
* ನತಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.