ಸಮಾಜಮುಖೀ ಚಟುವಟಿಕೆಗಳಿಂದ ಅಭಿವೃದ್ಧಿ ಸಾಧ್ಯ : ಸುರೇಶ್ ಚೆಂಗಪ್ಪ
Team Udayavani, Aug 24, 2017, 7:40 AM IST
ಉಪ್ಪಿನಂಗಡಿ: ಸಮಾಜಮುಖೀ ಚಟುವಟಿಕೆಗಳೊಂದಿಗೆ ಸಂಘ-ಸಂಸ್ಥೆಗಳು ಮುಂದುವರಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಉತ್ತಮ ಕೆಲಸ ಮಾಡುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಪಿಎಚ್‌ಎಫ್ ಎಂ.ಎಂ. ಸುರೇಶ್ ಚೆಂಗಪ್ಪ ತಿಳಿಸಿದರು.
ಉಪ್ಪಿನಂಗಡಿ ರೋಟರಿ ಕ್ಲಬ್‌ಗ ಅಧಿಕೃತ ಭೇಟಿ ನೀಡಿದ ಅವರು ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತ ನಾಡಿದರು.
ವಲಯ 4ರ ಅಸಿಸ್ಟೆಂಟ್ ಗವರ್ನರ್ ಪಿಎಚ್‌ಎಫ್ ಎ.ಎಂ. ಕುಮಾರ್ ಉಪ್ಪಿ ನಂಗಡಿ ರೋಟರಿ ಕ್ಲಬ್‌ನ ಸೇವಾ ಸಂಗಮ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಲೆಫ್ಟಿನೆಂಟ್ ಗವರ್ನರ್ ಪಿ.ಎಚ್.ಎಫ್. ಲಾರೆನ್ಸ್ ಗೋನ್ವಾಲ್ವಿàಸ್ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಉಪ್ಪಿನಂಗಡಿಯಲ್ಲಿ ರೋಟರಿ ಕ್ಲಬ್ ಹಲವು ಸಮಾಜಮುಖೀ ಕಾರ್ಯಗಳನ್ನು ನಡೆಸಿದೆ ಎಂದರು.
ಕಳೆದ 50 ವರ್ಷಗಳಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ವಿನ್ಸೆಂಟ್ ಫೆರ್ನಾಂಡಿಸ್ ಅವರನ್ನು ರೋಟರಿ ಕ್ಲಬ್ ವತಿಯಿಂದ ಸಮ್ಮಾನಿಸಲಾಯಿತು.
ಅಂಡೆತ್ತಡ್ಕದ ಸ.ಉ.ಹಿ.ಪಾ. Åಶಾಲೆಗೆ 130 ಊಟದ ತಟ್ಟೆ ಹಾಗೂ ಗ್ಲಾಸ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಜಾರ್ಜ್ ನೊರೋನ್ಹಾ ಅವರು ಶಾಲೆಗೆ ದತ್ತಿ ನಿಧಿ ಸ್ಥಾಪಿಸಲು ನೆರವು ನೀಡಿದರು.
ಪದಾಧಿಕಾರಿಗಳ ಆಯ್ಕೆ
ಸದಾಶಿವ ರೈ ಮಠಂತಬೆಟ್ಟು, ಮಹೇಶ್, ಸಮೀರ್ ಹಿರೇಬಂಡಾಡಿ, ಮಹೇಶ್ ಪಿ., ಉಮ್ಮರ್ ಕೊಯಿಲ, ಸುರೇಶ್ ಅತ್ರೆಮಜಲು, ವೇಣುಗೋಪಾಲ್, ಝಕಾ ರಿಯಾ ಕೊಡಿಪ್ಪಾಡಿ ಅವರಿಗೆ ರೋಟರಿ ಸದಸ್ಯತ್ವ ನೀಡಲಾಯಿತು. ರೋಟರ್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ಮುಹಮ್ಮದ್ ತೌಸೀಫ್ ಯು.ಟಿ., ಕಾರ್ಯದರ್ಶಿಯಾಗಿ ಚೇತನ್, ಕೋಶಾ ಧಿಕಾರಿಯಾಗಿ ಅಶ್ರಫ್ ಎಂ.ಜಿ., ಚೇರ್‌ವೆುನ್ ಆಗಿ ಅಶ್ರಫ್ ಅಗ್ನಾಡಿ ಅವರನ್ನು ನೇಮಕಗೊಳಿಸಲಾಯಿತು.
ಉಪ್ಪಿನಂಗಡಿ ರೋಟರಿ ಕ್ಲಬ್‌ನ ನಿಕಟ ಪೂರ್ವಾಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ, ನಿಯೋಜಿತ ಅಧ್ಯಕ್ಷ ಸುಧಾಕರ ಶೆಟ್ಟಿ ಕೋಟೆ ಉಪಸ್ಥಿತರಿದ್ದರು.
ನ್ಯಾಯವಾದಿ ಮನೋಹರ್ ಸ್ವಾಗತಿ ಸಿ, ಕಾರ್ಯದರ್ಶಿ ಹರೀಶ್ ನಾಯಕ್ ನಟ್ಟಿಬೈಲ್ ವಂದಿಸಿದರು. ಉಪ್ಪಿ ನಂಗಡಿ ಸರಕಾರಿ ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ನಿರೂಪಿಸಿದರು. ರೋಟರಿಗಳಾದ ಶಿವಶಂಕರ್ ನಾಯಕ್, ಅಝೀಝ್ ಬಸ್ತಿಕ್ಕಾರ್, ಡಾ| ನಿರಂಜನ್ ರೈ, ಡಾ| ರಾಜಾರಾಮ್ ಕೆ.ಬಿ., ಅಬೂಬಕ್ಕರ್ ಪುತ್ತ, ಗುಣಕರ ಅಗ್ನಾಡಿ, ಕೇಶವ ಮುಡಿಪು, ಇಸ್ಮಾಯೀಲ್ ಇಕ್ಬಾಲ್ ಪಾಂಡೇಲು ಸಹಕರಿಸಿದರು.
ಸೌಹಾರ್ದತೆ ಮೂಡಿಸುವ ಕೆಲಸ
ರೋಟರಿ ಕ್ಲಬ್‌ಗಳ ಮೂಲಕ ಸಮಾಜವನ್ನು ಸೌಹಾರ್ದತೆಯ ನೆಲೆಯಲ್ಲಿ ಒಗ್ಗೂ ಡಿಸುವುದರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ದೀನದಲಿತರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ. ರೋಟರಿ ಕ್ಲಬ್‌ನೊಂದಿಗೆ ಕೈಜೋಡಿಸುವ ಮೂಲಕ ಯುವ ಮನಸ್ಸುಗಳು ಸಮಾಜಸೇವೆಯತ್ತ ಒಲವು ತೋರಬೇಕು ಎಂದು ಸುರೇಶ್ ಚೆಂಗಪ್ಪ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ
Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು
1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್ ಹುಕುಂ ಚೀಟಿ
Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ
GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.