ಅನಿವಾಸಿ ಭಾರತೀಯ ಸಿಇಒಗೆ ನಿಂದನೆ
Team Udayavani, Aug 24, 2017, 6:05 AM IST
ನ್ಯೂಯಾರ್ಕ್: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಮೇಲೆ ಜನಾಂಗೀಯ ನಿಂದನೆ ಮಾಡುವ ಕಿಡಿಗೇಡಿ ಪ್ರವೃತ್ತಿ ಮುಂದುವರಿದಿದ್ದು, ಇದೀಗ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಸಿಇಒ ಒಬ್ಬರ ಮೇಲೆ ಜನಾಂಗೀಯ ನಿಂದನೆ ನಡೆದಿದೆ. ಅಚ್ಚರಿ ಏನೆಂದರೆ, ಇಲ್ಲಿ ಅನಿವಾಸಿ ಭಾರತೀಯನನ್ನು ನಿಂದಿಸಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು. ಟ್ರಂಪ್ ಆರ್ಥಿಕ ನೀತಿ ಒಪ್ಪಿಕೊಳ್ಳದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಅಮೆರಿಕದಲ್ಲೇ ಹುಟ್ಟಿ ಬೆಳೆದಿರುವ, ಭಾರತ ಮೂಲದವರಾಗಿ ರುವ 44 ವರ್ಷದ ರವಿನ್ ಗಾಂಧಿ, ಜಿಎಂಎಂ ನಾನ್‌ಸ್ಟಿಕ್ ಕೋಟಿಂಗ್ಸ್ ಎಂಬ ಸಂಸ್ಥೆಯ ಸಂಸ್ಥಾಪಕರು ಮತ್ತು ಸಿಇಒ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ಅಡುಗೆ ಸಾಮಗ್ರಿಗಳಿಗೆ ಅಗತ್ಯವಿರುವ ನಾನ್‌ಸ್ಟಿಕ್ ಕೋಟಿಂಗ್ ಅನ್ನು ರವಿನ್‌ರ ಜೆಎಂಎಂ ಸಂಸ್ಥೆ ಪೂರೈಸುತ್ತಿದೆ. ಬರವಣಿಗೆ ಹವ್ಯಾಸವನ್ನೂ ಹೊಂದಿರುವ ರವಿನ್ ಗಾಂಧಿ ಅವರು ಇತ್ತೀಚೆಗೆ ಸಿಎನ್‌ಬಿಸಿ ಸುದ್ದಿ ಸಂಸ್ಥೆಗೆ ಲೇಖನವೊಂದನ್ನು ಬರೆದಿದ್ದರು. ಅದರಲ್ಲಿ ಟ್ರಂಪ್ ಅವರ ಆರ್ಥಿಕ ನೀತಿ ಹಾಗೂ ಸುಧಾರಣೆ ಕ್ರಮಗಳ ಬಗ್ಗೆ ರವಿನ್ ಟೀಕಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.