ಟ್ವೆಂಟಿ20 ಪಂದ್ಯ: ಶಾಹಿದ್ ಅಫ್ರಿದಿ ಸ್ಫೋಟಕ ಶತಕ
Team Udayavani, Aug 24, 2017, 9:16 AM IST
ಡರ್ಬಿಶೈರ್: ಪಾಕಿಸ್ಥಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಸಿಡಿಸಿದ ಸ್ಫೋಟಕ ಶತಕದಿಂದಾಗಿ ಹ್ಯಾಂಪ್‌ಶೈರ್ ತಂಡವು ಡರ್ಬಿಶೈರ್‌ನಲ್ಲಿ ನಡೆದ ಟ್ವೆಂಟಿ20 ಬ್ಲಾಸ್ಟ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫಾಲ್ಕನ್ಸ್ ತಂಡದೆದುರು 101 ರನ್ನುಗಳಿಂದ ಜಯ ಸಾಧಿಸಿದೆ.
ಡರ್ಬಿಶೈರ್‌ನಲ್ಲಿ ನಡೆದ ಈ ಪಂದ್ಯದಲ್ಲಿ 37ರ ಹರೆಯದ ಅಫ್ರಿದಿ 10 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ ಕೇವಲ 42 ಎಸೆತಗಳಲ್ಲಿ ಶತಕ ಸಿಡಿಸಿದರು. ಇದರಿಂದಾಗಿ ಹ್ಯಾಂಪ್‌ಶೈರ್ ತಂಡ 8 ವಿಕೆಟಿಗೆ 249 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಇದು ಹ್ಯಾಂಪ್‌ಶೈರ್ ತಂಡ ಟ್ವೆಂಟಿ20 ಪಂದ್ಯದಲ್ಲಿ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ನಾಯಕ ಜೇಮ್ಸ್ ವಿನ್ಸ್ 36 ಎಸೆತಗಳಿಂದ 55 ರನ್ ಹೊಡೆದರು. ಹ್ಯಾಂಪ್‌ಶೈರ್ ಈ ಹಿಂದೆ 2006ರಲ್ಲಿ ಮಿಡ್ಲ್ಸೆಕ್ಸ್ ವಿರುದ್ಧ 2 ವಿಕೆಟಿಗೆ 225 ರನ್ ಪೇರಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.
ಗೆಲ್ಲಲು 250 ರನ್ ಗಳಿಸುವ ಗುರಿ ಪಡೆದ ಫಾಲ್ಕನ್ಸ್ ತಂಡ 148 ರನ್ನಿಗೆ ಆಲೌಟಾಗಿ ಶರಣಾ ಯಿತು. ಲಿಯಮ್ ಡಾಸನ್ ಮತ್ತು ಅಬೋಟ್ ತಲಾ 3 ವಿಕೆಟ್ ಕಿತ್ತರು. 20 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ್ದ ಅಫ್ರಿದಿ 65 ರನ್ ತಲುಪಿದ ವೇಳೆ ಜೀವದಾನ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಪೊಲೀಶ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.