ಸ್ಕಿಲ್ ಇಂಡಿಯಾದಷ್ಟೇ ಸೇಫ್ ಇಂಡಿಯಾ ಮುಖ್ಯ
Team Udayavani, Aug 25, 2017, 8:55 AM IST
ಮುಂಬಯಿ: ಲೈಂಗಿಕ ಕಿರುಕುಳ, ದೌರ್ಜನ್ಯದಿಂದ ಮಕ್ಕಳನ್ನು ಪಾರು ಮಾಡಲು ಪ್ರತಿಯೊಬ್ಬರೂ ಸಂಘಟಿತ ಪ್ರಯತ್ನ ಮಾಡಬೇಕಿದೆ. ಸ್ಕಿಲ್ ಇಂಡಿಯಾ(ಕೌಶಲ ಭಾರತ)ದಷ್ಟೇ ಸೇಫ್ ಇಂಡಿಯಾ(ಸುರಕ್ಷ ಭಾರತ)ವೂ ಮುಖ್ಯ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ.
ತಮ್ಮ 35 ದಿನಗಳ ರಾಷ್ಟ್ರವ್ಯಾಪಿ “ಭಾರತ್ ಯಾತ್ರೆ’ ಕಾರ್ಯ ಕ್ರಮದ ಅಂಗವಾಗಿ ಗುರುವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಅವರು ಕಾರ್ಪೊರೇಟ್ಗಳನ್ನು ಉದ್ದೇಶಿಸಿ ಮಾತನಾಡಿದರು. ದೇಶವು ಸಮಗ್ರ ಪ್ರಗತಿ ಸಾಧಿಸಿ ನಿಜವಾದ ಅರ್ಥದಲ್ಲಿ ಸಾಧನೆ ಮಾಡಿದೆ ಎಂಬ ಮಾತಿಗೆ ಬೆಲೆ ಬರಬೇಕಾದರೆ, ಮಕ್ಕಳು ಎಲ್ಲ ರೀತಿ ಶೋಷಣೆಗಳಿಂದ ಮುಕ್ತರಾಗಿ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಅದನ್ನು ನಿರ್ಮಿಸುವ ಹೊಣೆ ನಮ್ಮದು ಎಂದವರು ಪ್ರತಿಪಾದಿಸಿದ್ದಾರೆ.
ಭಾರತವು ಕೇವಲ ಸ್ಕಿಲ್ ಇಂಡಿಯಾ ಆದರೆ ಸಾಲದು. ಸೇಫ್ ಇಂಡಿಯಾ ಕೂಡ ಆಗಬೇಕು. ಅದಕ್ಕಾಗಿ ನಿಮ್ಮ ಅಧಿಕಾರ, ಪ್ರಭಾವ ಮತ್ತು ಕೌಶಲವನ್ನು ಬಳಸಿ ಎಂದೂ ಸತ್ಯಾರ್ಥಿ ಅವರು ಉದ್ಯಮಿಗಳಿಗೆ ಕರೆ ನೀಡಿದ್ದಾರೆ. ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಸುರಕ್ಷಿತ ಬಾಲ್ಯ ಸಿಕ್ಕರೆ ಭಾರತದ ಜಿಡಿಪಿ ಶೇ.9ಕ್ಕೇರಿದ್ದಕ್ಕಿಂತಲೂ ದೊಡ್ಡ ದಾದ ಸಾಧನೆ ಮಾಡಿದಂತಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಕರ್ನಾಟಕ ಸೇರಿ 22 ರಾಜ್ಯಗಳಲ್ಲಿ ಯಾತ್ರೆ
ಮಕ್ಕಳ ಕಳ್ಳ ಸಾಗಣೆ ಮತ್ತು ಅವರ ಮೇಲಿನ ಲೈಂಗಿಕ ದೌರ್ಜನ್ಯಗಳ ವಿರುದ್ಧ ದೇಶಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ಸತ್ಯಾರ್ಥಿ ಅವರು 35 ದಿನಗಳ “ಭಾರತ ಯಾತ್ರೆ’ ಕೈಗೊಂಡಿದ್ದಾರೆ. ತಮಿಳುನಾಡಿನ ಕನ್ಯಾ ಕುಮಾರಿಯಿಂದ ಸೆ.11ರಂದು ಆರಂಭವಾ ಗುವ ಯಾತ್ರೆ ಕರ್ನಾಟಕ ಸೇರಿದಂತೆ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳನ್ನು ಪ್ರದಕ್ಷಿಣೆ ಹಾಕಿ(ಒಟ್ಟು 15 ಸಾವಿರ ಕಿ.ಮೀ.), ಅಕ್ಟೋಬರ್ 15 ರಂದು ದೆಹಲಿ ಯಲ್ಲಿ ಸಮಾರೋಪಗೊಳ್ಳಲಿದೆ. ಈ ಯಾತ್ರೆಯಲ್ಲಿ ಲೈಂಗಿಕ ದೌರ್ಜನ್ಯದ ಸಂತ್ರಸ್ತರು, ವಿದ್ಯಾರ್ಥಿಗಳು, ರಾಜಕೀಯ ನಾಯಕರು ಹಾಗೂ ಜನಸಾಮಾನ್ಯರು ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.