ಭ್ರಷ್ಟಾಚಾರ;ಸ್ಯಾಮ್ ಸಂಗ್ ಕಂಪನಿ ಮುಖ್ಯಸ್ಥ ಲೀಗೆ 5 ವರ್ಷ ಜೈಲುಶಿಕ್ಷೆ
Team Udayavani, Aug 25, 2017, 1:43 PM IST
ಸಿಯೋಲ್:ದಕ್ಷಿಣ ಕೊರಿಯಾದ ಅತೀ ಶ್ರೀಮಂತ ಉದ್ಯಮಿ, ಜಗದ್ವಿಖ್ಯಾತ ಇಲೆಕ್ಟ್ರಾನಿಕ್ಸ್ ಪರಿಕರಗಳ ಉತ್ಪನ್ನಗಳ ಸಂಸ್ಥೆ ಸ್ಯಾಮ್ ಸಂಗ್ ಅಧ್ಯಕ್ಷ, ಗ್ರೂಪ್ ಉಪಾಧ್ಯಕ್ಷ ಜೇ ವೈ ಲೀ (ಲೀ ಜೇ ಯಾಂಗ್) ಅವರನ್ನು ಭ್ರಷ್ಟಾಚಾರ ಹಾಗೂ ಹಲವು ಹಗರಣಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಇಲ್ಲಿನ ಕೋರ್ಟ್ ಶುಕ್ರವಾರ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಲೀ ವಿರುದ್ಧ ಸ್ವತಂತ್ರ್ಯವಾಗಿ ತನಿಖೆ ನಡೆಸಲಾಗಿದ್ದು, ಇದರಲ್ಲಿ ಸ್ಯಾಮ್ ಸಂಗ್ ಕಂಪನಿಯೊಂದಿಗೆ ದೋಸ್ತಿ ಹೊಂದಿರುವ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯಾದ ಪಾರ್ಕ್ ಗುಯೆನ್ ಹೈಗೆ 40 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪದಡಿ ಲೀ ಬಂಧಿತರಾಗಿದ್ದಾರೆ. ದೇಶದ ಅತಿ ದೊಡ್ಡ ಕಂಪನಿಯ ಮುಖ್ಯಸ್ಥರನ್ನು ಬಂಧಿಸುವುದಕ್ಕೆ ಮುನ್ನ ಅದರ ಆರ್ಥಿಕ ಪರಿಣಾಮಗಳನ್ನು ಪರಿಶೀಲಿಸಲಾಗುವುದು ಎಂದು ಪ್ರಾಸಿಕ್ಯೂಟರ್ ಗಳು ವಿಚಾರಣೆ ವೇಳೆ ತಿಳಿಸಿದ್ದರು.
49 ವರ್ಷದ ಸ್ಯಾಮ್ ಸಂಗ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಉಪಾಧ್ಯಕ್ಷನನ್ನು ಕೈಕೋಳದೊಂದಿಗೆ ಜಸ್ಟೀಸ್ ಮಿನಿಸ್ಟ್ರಿ ಬಸ್ ನಲ್ಲಿ ಸಿಯೋಲ್ ಸೆಂಟ್ರಲ್ ಜಿಲ್ಲಾ ಕೋರ್ಟ್ ಗೆ ಕರೆತರಲಾಗಿತ್ತು. ಲೀ ಅವರನ್ನು ಫೆಬ್ರುವರಿಯಲ್ಲಿ ಬಂಧಿಸಲಾಗಿತ್ತು. ಆದರೆ ತಾನು ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ಲೀ ವಾದಿಸಿದ್ದರು. ಏತನ್ಮಧ್ಯೆ ಲೀ ಅವರು ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲಿದ್ದಾರೆ ಎಂದು ಲೀ ಪರ ವಕೀಲ ಸಾಂಗ್ ವು ಚೆಯೋಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.