ಮೂರು ಕ್ಷಿಪಣಿ ಉಡಾಯಿಸಿ ಹುಚ್ಚಾಟ ಮೆರೆದ ಉತ್ತರ ಕೊರಿಯ
Team Udayavani, Aug 26, 2017, 11:50 AM IST
ವಾಷಿಂಗ್ಟನ್ : ಉತ್ತರ ಕೊರಿಯ ತನ್ನ ಪರ್ಯಾಯ ದ್ವೀಪದ ಪೂರ್ವ ಸಮುದ್ರದಲ್ಲಿ ಮೂರು ಖಂಡಾಂತರ ಅಣು ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಅಮೆರಿಕದ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.
ಅತ್ಯಂತ ಕ್ಷಿಪ್ರಗತಿಯಲ್ಲಿ ತನ್ನ ಪರಮಾಣು ಶಸ್ತ್ರಾಸ್ತ್ರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ಯಾಂಗ್ಯಾಂಗ್‌ನ ಈ ಹುಚ್ಚಾಟವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಚೆಗೆ ವಹಿವಾಟೊಂದನ್ನು ಕುದಿರಿಸಿದ್ದು ಅದೀಗ ಉತ್ತರ ಕೊರಿಯದ ಈ 3 ಕ್ಷಿಪಣಿ ಉಡಾವಣೆಯಿಂದ ಹುಸಿಯಾಗಿದೆ.
ಉತ್ತರ ಕೊರಿಯ ಉಡಾಯಿಸಿರುವ ಮೂರು ಖಂಡಾಂತರ ಕ್ಷಿಪಣಿಗಳು ಕಿರು ವ್ಯಾಪ್ತಿಯದ್ದಾಗಿದೆ. ಮೂರರಲ್ಲಿ ಮೊದಲೆರಡು ಕ್ಷಿಪಣಿಗಳು ಗಗನಕ್ಕೆ ನೆಗೆಯುವಲ್ಲಿ ವಿಫಲವಾಗಿವೆ. ಮೂರನೇ ಕ್ಷಿಪಣಿ ಉಡಾವಣೆಯೊಂದಿಗೆ ಸ್ಫೋಟಗೊಂಡಿದೆ ಎಂದು ಅಮೆರಿಕದ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.
ಉತ್ತರ ಕೊರಿಯದ ಈ ಕ್ಷಿಪಣಿ ಉಡಾವಣೆ ದುಸ್ಸಾಹಸದಿಂದ ಅಮೆರಿಕದ ಗುವಾಂ ದ್ವೀಪಕ್ಕೆ ಯಾವುದೇ ಬೆದರಿಕೆ ಉಂಟಾಗಿಲ್ಲ ಎಂದು ಅಮೆರಿಕ ಹೇಳಿದೆ. ಈ ಮೊದಲಿನ ಹೇಳಿಕೆಯಲ್ಲಿ ಉತ್ತರ ಕೊರಿಯಾ ಅಮೆರಿಕದ ಗುವಾಂ ದ್ವೀಪವನ್ನು ನಾಶ ಮಾಡುವ ಬೆದರಿಕೆಯನ್ನು ಒಡ್ಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.