“ಕಾರ್ಯಬದ್ಧತೆಯಿಂದ ವ್ಯಕ್ತಿತ್ವ ನಿರ್ಮಾಣ’
Team Udayavani, Aug 27, 2017, 6:50 AM IST
ಬೆಳ್ತಂಗಡಿ : ನಿರಂತರ ಕಾರ್ಯ ನಿರ್ವಹಣೆಯ ಬದ್ಧತೆಯೊಂದಿಗೆ ಗುರುತಿಸಿಕೊಳ್ಳುವ ಬೋಧಕರು ಶೈಕ್ಷಣಿಕ ವೃತ್ತಿಪರ ಘನತೆ ಹೆಚ್ಚಿಸುವುದರೊಂದಿಗೆ ಮಾದರಿ ವ್ಯಕ್ತಿತ್ವಗಳನ್ನು ರೂಪಿಸುತ್ತಾರೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆಯ ಎಸ್‌ಡಿಎಂ ಪದವಿ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ವಿವಿಧ ಶೆ„ಕ್ಷಣಿಕ ವಿಭಾಗಗಳ ಅಧ್ಯಾಪಕ ಸಮೂಹವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವೃತ್ತಿ ಸಾಮರ್ಥ್ಯ ಹೆಚ್ಚಾಗಲಿ
ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಶಿಕ್ಷಕರೇ ಹೀರೋ ಗಳಾಗಿರುತ್ತಾರೆ. ತರಗತಿಯಲ್ಲಿ ಪ್ರಸ್ತುತಪಡಿಸುವ ವಿಚಾರ ಮತ್ತು ಶೈಲಿ ವ್ಯಾಪಕ ಪ್ರಭಾವ ಬೀರುತ್ತವೆ. ಪಠ್ಯದ ಚರ್ಚೆಯ ಪ್ರತಿಯೊಂದು ವಿವರವನ್ನೂ ವಿದ್ಯಾರ್ಥಿಗಳು ಗ್ರಹಿಸುವುದಕ್ಕೆ ಬೋಧಕರ ವ್ಯಕ್ತಿ ವೈಶಿಷ್ಟéವೂ ಕಾರಣವಾಗಿರುತ್ತದೆ. ಅವರ ವ್ಯಕ್ತಿತ್ವವೂ ಬೋಧನೆಯ ಪರಿಣಾಮ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಬೋಧಕರು ತಮ್ಮ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಕಡೆಗೆ ಆದ್ಯತೆ ನೀಡಬೇಕು ಎಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಉಪಸ್ಥಿತರಿದ್ದರು.
ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ| ಕೆ. ಎಸ್. ಮೋಹನ ನಾರಾಯಣ ಸ್ವಾಗತಿಸಿದರು. ಡಾ| ಬಿ. ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ದಿನೇಶ್ ಚೌಟ ವಂದಿಸಿದರು.
90ರ ದಶಕದ ಅನಂತರ ಶೆ„ಕ್ಷಣಿಕ ವಲಯದಲ್ಲಿ ಹಲವು ಬದಲಾವಣೆಗಳಾಗಿವೆ. ವ್ಯಕ್ತಿಗತ ಮತ್ತು ಸಾಮಾಜಿಕ ಬದುಕನ್ನು ಶೆ„ಕ್ಷಣಿಕ ರಂಗ ಮರುರೂಪಿಸಿದೆ. ಆಧುನಿಕ ದೃಷ್ಟಿಕೋನದೊಂದಿಗಿನ ಚಿಂತನೆಯ ನೆರವಿನೊಂದಿಗೆ ಹೊಸ ಅಲೆಯನ್ನು ಸೃಷ್ಟಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯೂ ಹೆಚ್ಚಿದೆ. ಅದಕ್ಕನುಗುಣವಾಗಿ ಸಾಮರ್ಥ್ಯ ರೂಢಿಸಿಕೊಂಡರೆ ಮಾತ್ರ ಭಿನ್ನ ಹೊಣೆಗಾರಿಕೆಗಳನ್ನು ನಿಭಾಯಿಸಬಹುದು ಎಂಬುದನ್ನು ಬೋಧಕರು ಮನಗಾಣಬೇಕು.
-ಡಾ| ಡಿ. ವೀರೇಂದ್ರ ಹೆಗ್ಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.