ಕಾಡು ಸುರುಳಿಯ ಕಟ್ಟಡ


Team Udayavani, Aug 27, 2017, 7:15 AM IST

kadu-suruli.jpg

ವಾಲ್ಡ್‌ಸ್ಪಿರಾಲೆ! 
ಏನಪ್ಪ ಇದು?
ಜರ್ಮನಿಯ ಡಾಮ್‌ಸ್ಟಾrಟ್‌ ಎನ್ನುವ ಪಟ್ಟಣದಲ್ಲಿರುವ ಒಂದು ವಿಭಿನ್ನ ಮಾದರಿಯ ಕಟ್ಟಡದ ಹೆಸರು. ಜರ್ಮನ್‌ ಭಾಷೆಯ ಹೆಸರಿದು. ಭಾಷಾಂತರಿಸಿದರೆ “ಫಾರೆಸ್ಟ್‌ ಸ್ಪೈರಲ…’ ಆಂಗ್ಲಭಾಷೆಯಲ್ಲಿ.  ಕನ್ನಡದಲ್ಲಿ ಕಾಡು ಸುರುಳಿ ಎನ್ನೋಣವೇ? ಈ ಸೌಧದ ಸಾಮಾನ್ಯ ವಿನ್ಯಾಸ ಹಾಗೂ ತಾರಸಿಯಲ್ಲಿರುವ ಹಸಿರು ಉದ್ಯಾನವನ್ನು ಈ ಶಬ್ದ ಬಿಂಬಿಸುತ್ತದೆ. ಇದರ ವಿನ್ಯಾಸ ಶಿಲ್ಪಿ  ಹುಂಡೆರ್ಟ್‌ ವಸರ್‌, ಆಸ್ಟ್ರಿಯಾ ದೇಶದ ಕಲೆಗಾರ. ಸ್ಪ್ರಿಂಗ್‌ ಮಾನ್‌ ಎಂಬವನು ಇದರ ನಿರ್ಮಾಣ ಶಿಲ್ಪಿ . ಬವೆರಿನ್‌ ಡಾಮ್‌ಸ್ಟಾrಟ್‌ ಕಂಪೆನಿಯು ಇದನ್ನು ಕಟ್ಟುವ ಜವಾಬ್ದಾರಿ ಹೊತ್ತಿತ್ತು.  ಕ್ರಿ. ಶ. 1990ರಲ್ಲಿ ಶುರುವಾದ ಕಾಮಗಾರಿಯು 2000ದಲ್ಲಿ ಪೂರ್ಣಗೊಂಡಿತು.

ಯಾವುದೇ ಕಟ್ಟಡವನ್ನು ಕಟ್ಟುವಾಗ ನಾವು ಪರಿಸರದಿಂದ ಸಾಕಷ್ಟು ಸಂಪನ್ಮೂಲಗಳನ್ನು ಉಪಯೋಗಿಸುತ್ತೇವೆ. ಹಾಗಾಗಿ ನಾವು ಆ ಕಟ್ಟಡದಲ್ಲಿ ವಾಸಿಸುವಾಗ ಸಾಧ್ಯವಾದಷ್ಟು ಪ್ರಾಕೃತಿಕ ಸಂಪತ್ತನ್ನು ಪರಿಸರಕ್ಕೆ ಮರಳಿಸಬೇಕೆಂಬುದು ಹುಂಡೆರ್ಟ್‌ ವಸರ್‌ನ ಯೋಜನೆ. ಇದಕ್ಕೆ ತಕ್ಕಂತೆ ತಾರಸಿಯಲ್ಲಿ ಆಕರ್ಷಕವಾದ ಹಸಿರು ಉದ್ಯಾನವು ಕಂಗೊಳಿಸುತ್ತದೆ. ಇದಲ್ಲದೆ ಈ ಜಾಗದಲ್ಲಿ ಉಪಯೋಗವಾಗುವ ನೀರಿನ ಬಹು ಅಂಶ ಮರುಚಾಲನೆಯಾಗುತ್ತದೆ.

105 ಮನೆಗಳಿರುವ ಈ ಮಹಲಿನಲ್ಲಿ ಯಾರೂ ಮನೆಯನ್ನು ಕ್ರಯಕ್ಕೆ ತೆಗೆದುಕೊಳ್ಳುವಂತಿಲ್ಲ. ಬಾಡಿಗೆಗೆ ಪಡೆಯಬೇಕು. ಅಂಗಳದಲ್ಲಿ ಮಕ್ಕಳ ಆಟದ ಮೈದಾನ ಮತ್ತು ಕೃತಕವಾದ ಕೆರೆ ಇವೆ. ವಾಹನಗಳನ್ನು ನಿಲ್ಲಿಸುವ ಸ್ಥಳವೂ ಆಕರ್ಷಕ ವಿನ್ಯಾಸವನ್ನು ಹೊಂದಿದೆ.  ಖೀ ಆಕಾರದಲ್ಲಿರುವ ಈ ಕಟ್ಟಡ ಯಾವುದೇ ಪ್ರಮಾಣೀಕೃತ ಶೈಲಿಯನ್ನು ಅನುಕರಿಸುವುದಿಲ್ಲ. ಒಂದು ಕಡೆ ಎರಡೇ ಅಂತಸ್ತುಗಳಿದ್ದರೆ ಇನ್ನೊಂದು ಕಡೆ 12 ಅಂತಸ್ತುಗಳಿವೆ.  ಒಂದು ಸಾವಿರಕ್ಕೂ ಹೆಚ್ಚಿರುವ ಕಿಟಕಿಗಳಲ್ಲಿ ಯಾವುವೂ ಒಂದಕ್ಕೊಂದು ಸಮನಾಗಿಲ್ಲ ಹಾಗೂ ಯಾವುದೇ ನಿರ್ದಿಷ್ಟ ಆಕಾರ ಹೊಂದಿಲ್ಲ.  ಅದೇ ತರಹ ಮನೆಗಳ ಒಳಭಾಗದ ಬಾಗಿಲುಗಳು, ಹಿಡಿಕೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಹೊರಭಾಗದಲ್ಲಿ ಹಾಕಿರುವ ಬಣ್ಣಗಳೂ ಕಾಮನಬಿಲ್ಲಿನ ರಂಗುಗಳನ್ನು ಹೋಲುತ್ತವೆ.  ತುತ್ತತುದಿಯಲ್ಲಿ ಈರುಳ್ಳಿಯ ಆಕಾರದ ಕಲಶಗಳಿವೆ.  ಕಟ್ಟಡದ ಯಾವುದೇ ಭಾಗದಲ್ಲಿ ನೇರ ಗೆರೆಗಳಿಲ್ಲ.  ಗೋಡೆ ಮತ್ತು ಛಾವಣಿಗಳು ಕೂಡುವಲ್ಲಿಯೂ ಕೋನಗಳಿಲ್ಲದೆ ಕಮಾನಿನ ಆಕಾರವಾಗಿರುವಂತೆ ಮಾಡಿ¨ªಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಏರುವ ತಾರಸಿಯಲ್ಲಿ ವಿವಿಧ ಪ್ರಭೇದಗಳ ಹುಲ್ಲು, ಗಿಡಗಳು ಹಾಗೂ ಮರಗಳನ್ನು ಬೆಳೆದಿ¨ªಾರೆ. ಕೆಲವು ಕಿಟಕಿಗಳ ತಳಭಾಗದಿಂದಲೂ ಮರಗಳು ಬೆಳೆಯುತ್ತಿವೆ. (Tree tenants)

ಉದ್ಘಾಟನೆಯಾದ ಹೊಸತರಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಒಂದು ಹೊಟೇಲ್‌ ಹಾಗೂ ಬಾರನ್ನು ಸಾರ್ವಜನಿಕರಿಗಾಗಿ ತೆರೆದಿದ್ದರು. ಇತ್ತೀಚೆಗೆ ಇವುಗಳನ್ನು ಮುಚ್ಚಿರುತ್ತಾರೆ.  ಸಾರ್ವಜನಿಕರಿಗೆ ಹೊರಗಿನಿಂದಷ್ಟೇ ನೋಡುವ ಅವಕಾಶ.

– ಉಮಾಮಹೇಶ್ವರಿ ಎನ್‌.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.