ಪ್ರೊ ಕಬಡ್ಡಿ: ಮುಂಬಾ, ತಮಿಳ್‌ಗೆ ಸೋಲಿನ ಆಘಾತ
Team Udayavani, Aug 27, 2017, 7:50 AM IST
ಮುಂಬಯಿ: ಪ್ರೊ ಕಬಡ್ಡಿ ಲೀಗ್ ಐದರಲ್ಲಿ ಯು ಮುಂಬಾ ತವರಿನ ಪಂದ್ಯದಲ್ಲಿ ಮತ್ತೆ ಸೋಲು ಕಂಡಿದೆ. ಶುಕ್ರವಾರ ಜೈಪುರಕ್ಕೆ ಶರಣಾಗಿದ್ದ ಯು ಮುಂಬಾ ತಂಡವು ಶನಿವಾರದ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ತಂಡದೆದುರು 24-26 ಅಂಕಗಳಿಂದ ಸೋತು ಆಘಾತಕ್ಕೆ ಒಳಗಾಯಿತು.
ಈ ಮೊದಲು ನಡೆದ ಪಂದ್ಯದಲ್ಲಿ ಯಶಸ್ಸಿನ ಅಲೆಯಲ್ಲಿರುವ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ 35-24ರಿಂದ ತಮಿಳ್ ತಲೈವಾಸ್ ವಿರುದ್ಧ ಜಯ ಸಾಧಿಸಿದೆ. ತಲೈವಾಸ್ ಪರ ನಾಯಕ ಅಜಯ್ ಠಾಕೂರ್ (10 ರೈಡಿಂಗ್ ಅಂಕ) ಮಾಡಿದ ಹೋರಾಟವೂ ವ್ಯರ್ಥವಾಯಿತು. ಈ ಮೂಲಕ ಪಾಟ್ನಾ ಕೂಟದಲ್ಲಿ 4ನೇ ಜಯ ಸಾಧಿಸಿದೆ.
ಇಲ್ಲಿನ ಎನ್‌ಎಸ್‌ಸಿಐ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ತಲೈವಾಸ್ ಉತ್ತಮ ಪ್ರದರ್ಶನ ನೀಡಿತು. ಕನ್ನಡಿಗ ದರ್ಶನ ಆರಂಭದಲ್ಲಿಯೇ ಮೂರು ಅದ್ಭುತ ಕ್ಯಾಚ್ ತೆಗೆದುಕೊಂಡರು. ಹೀಗಾಗಿ 15ನೇ ನಿಮಿಷದಲ್ಲಿ ತಲೈವಾಸ್ 8-4ರಿಂದ ಮುನ್ನಡೆಯಲ್ಲಿತ್ತು. ಪಾಟ್ನಾದ ತಾರಾ ಆಟಗಾರ ಪ್ರದೀಪ್ ನರ್ವಾಲ್ ರೈಡಿಂಗ್‌ನಲ್ಲಿ ವೈಫಲ್ಯ ಎದುರಿಸಿದರು. ಇದರಿಂದಾಗಿ ಪ್ರದೀಪ್ ಅಂಕಣದ ಹೊರಗೆ ಹೆಚ್ಚಿನ ಸಮಯ ಕಳೆಯುಬೇಕಾಯಿತು.
ಆದರೆ 15ನೇ ನಿಮಿಷದ ಅನಂತರ ಪಾಟ್ನಾ ಚೇತರಿಸಿಕೊಂಡಿತು. ತಲೈವಾಸ್ ಮೇಲೆ ದಾಳಿ ಮಾಡುತ್ತಾ ತನ್ನ ಅಂಕವನ್ನು ಹೆಚ್ಚಿಸಿಕೊಂಡಿತು. ಅತ್ತ ತಲೈವಾಸ್ ಕೋಟೆಯೂ ಖಾಲಿಯಾಗುತ್ತಾ ಸಾಗಿತು. ಇದರಿಂದಾಗಿ 19ನೇ ನಿಮಿಷದಲ್ಲಿ ತಲೈವಾಸ್ ಆಲೌಟ್ ಆಯಿತು.
– ಮಂಜು ಮಳಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Viral Photos: ದುಬೈನಲ್ಲಿ ಸಾನಿಯಾ ಮಿರ್ಜಾ – ಮೊಹಮ್ಮದ್ ಶಮಿ ಜಾಲಿ ಮೂಡ್.. ಫೋಟೋ ವೈರಲ್.!
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.