ಯುವತಿ ಕಿಡ್ನ್ಯಾಪ್,ತಾಳಿ ಕಟ್ಟಿ ರೇಪ್ ಮಾಡಿದ 2 ಮಕ್ಕಳ ತಂದೆ!
Team Udayavani, Aug 27, 2017, 12:14 PM IST
ಬೆಂಗಳೂರು: ವಿವಾಹಿತನಾಗಿ 2 ಮಕ್ಕಳ ತಂದೆಯಾದರೂ ಈತನಿಗೆ ಚಪಲ ಬಿಟ್ಟಿಲ್ಲ. ಎದುರು ಮನೆಯ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಗೃಹ ಬಂಧನದಲ್ಲಿರಿಸಿ , ಬಲವಂತವಾಗಿ ತಾಳಿ ಕಟ್ಟಿ ಅತ್ಯಾಚಾರ ಎಸಗಿದ್ದಾನೆ.
ದಾಸರಹಳ್ಳಿಯ ನಿವಾಸಿಯಾಗಿರುವ ಪತ್ನಿಯಿಂದ ಪರಿತ್ಯಕ್ತನಾಗಿದ್ದ ಸಂತೋಷ್ ಎಂಬ ಮಧ್ಯವಯಸ್ಕ ಹೇಯ ಕೃತ್ಯ ಎಸಗಿದ್ದು, ಎದುರು ಮನೆಯಲ್ಲಿದ್ದ 22 ವರ್ಷದ ಯುವತಿಯ ಮೇಲೆ ಕಣ್ಣು ಹಾಕಿದ್ದ. ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ನಿರಂತರವಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಅಗಸ್ಟ್ 24 ರ ರಾತ್ರಿ ರಾತ್ರಿ ಮಲಗಲೆಂದು ಸಮೀಪದಲ್ಲಿರುವ ಅಜ್ಜಿಯ ಮನೆಗೆ ತೆರಳುತ್ತಿದ್ದ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಮನೆಗೆಳೆದೊಯ್ದು ತಾಳಿ ಕಟ್ಟಿಯೇ ಬಿಟ್ಟಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಾಗಿದೆ.
25 ರಂದು ಮಗಳು ನಾಪತ್ತೆಯಾಗಿರುವುದು ತಿಳಿದು ತಾಯಿ ಪೊಲೀಸರಿಗೆ ದೂರು ನೀಡಿದ್ದು ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸರು ತನಿಖೆಗಿಳಿದು ಸಂತೋಷ್ನನ್ನು ವಶಕ್ಕೆ ಪಡೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.