ಮಾಸಿಕ 4 ಲಕ್ಷ ಜೀವನಾಂಶ: ಸಿರಿವಂತ ಪತಿಗೆ ಆದೇಶ
Team Udayavani, Aug 28, 2017, 7:05 AM IST
ನವದೆಹಲಿ: ಅಚ್ಚರಿಯಾದರೂ ನೀವಿದನ್ನು ನಂಬಲೇಬೇಕು. ಪರಿತ್ಯಕ್ತ ಪತ್ನಿಗೆ ಪ್ರತಿ ತಿಂಗಳು ಬರೋಬ್ಬರಿ 4 ಲಕ್ಷ ರೂ.ಗಳಂತೆ ಜೀವನಾಂಶ ನೀಡಬೇಕು ಎಂದು ವ್ಯಕ್ತಿಯೊಬ್ಬನಿಗೆ ದೆಹಲಿ ಕೋರ್ಟ್ ಆದೇಶಿಸಿದೆ.
ಇದನ್ನು ಕೇಳಿ ಆತನೇನೂ ತಲೆ ತಿರುಗಿ ಬಿದ್ದಿರಲಿಕ್ಕಿಲ್ಲ. ಕಾರಣ, ಅವನಿಗೆ ಈ 4 ಲಕ್ಷ ರೂ. ದೊಡ್ಡ ಸಂಗತಿಯೇನೂ ಅಲ್ಲ. ಏಕೆಂದರೆ, ಅವನು “ಸೂಪರ್ ರಿಚ್’ ಪತಿ. ಒಂದು ಸಾವಿರ ಕೋಟಿ ರೂ. ಮೌಲ್ಯದ ಉದ್ದಿಮೆ ಹೊಂದಿರುವ ಈತನ ಹೆಸರು ಬ್ಯುಸಿನೆಸ್ ವರ್ಲ್x ಮ್ಯಾಗಜಿನ್ನ “ಅತಿ ಶ್ರೀಮಂತರ ಪಟ್ಟಿ’ಯಲ್ಲಿದೆ. ಇದನ್ನೇ ಪರಿಗಣಿಸಿ, ಕೋರ್ಟ್ ಆತನಿಗೆ ಇಷ್ಟೊಂದು ದೊಡ್ಡ ಮೊತ್ತದ ಜೀವನಾಂಶ ನೀಡು ವಂತೆ ಸೂಚಿಸಿದೆ. ಈತ ತನ್ನ ಪತ್ನಿ ಮತ್ತು ಮಗಳನ್ನು ಬಿಟ್ಟು ಹೋಗಿದ್ದು, ಆಕೆ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. 4 ಲಕ್ಷ ರೂ. ಜೀವನಾಂಶ ಕೊಡುವುದರ ಜೊತೆಗೆ, ಪ್ರತಿ ವರ್ಷವೂ ಈ ಮೊತ್ತದಲ್ಲಿ ಶೇ.15ರಷ್ಟು ಏರಿಕೆ ಮಾಡಬೇಕು ಎಂದೂ ಕೋರ್ಟ್ ಈತನಿಗೆ ತಾಕೀತು ಮಾಡಿದೆ. ಆದರೆ, ಆತ, “ನನ್ನ ತಿಂಗಳ ವರಮಾನ ಕೇವಲ 90 ಸಾವಿರ ರೂ.’ ಎಂದು ಅಲವತ್ತುಕೊಂಡಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.