ಮಂಗಳೂರಿನಲ್ಲೂ ಗುರ್ಮಿತ್‌ ಪ್ರವಚನ!

Team Udayavani, Aug 28, 2017, 7:25 AM IST

Gurmeet-Ram-Rahim-Singh–22.jpg

ಮಂಗಳೂರು: ಅತ್ಯಾಚಾರ ಆರೋಪ ಸಾಬೀತಾಗಿರುವ, ಡೇರಾ ಸಚ್ಚಾ ಸೌದಾದ ಮುಖ್ಯಸ್ಥ, ಸ್ವಘೋಷಿತ ದೇವ ಮಾನವ, ವರ್ಣರಂಜಿತ ವ್ಯಕ್ತಿ ಗುರ್ಮಿತ್‌ ರಾಂ ರಹೀಂ ಸಿಂಗ್‌ ಸುಮಾರು 10 ವರ್ಷದ ಹಿಂದೆ ಮಂಗಳೂರಿಗೆ ಆಗಮಿಸಿ, ಸಾವಿರಾರು ಭಕ್ತರಿಗೆ ವಿಶೇಷ ಪ್ರವಚನ ನೀಡಿದ್ದರು. ಎರಡು ದಿನ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿ ವಿಶೇಷ ಪ್ರವಚನದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಪೂರ್ವದಲ್ಲಿ ಕೆಲವು ವರ್ಷ ಗಳ ಹಿಂದೆ ಗುರ್ಮಿತ್‌ ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಪ್ರವಚನ ನೀಡಿದ್ದರು. ಆ ಬಳಿಕ ಗುರ್ಮಿತ್‌ ಅವರ ಸಂಬಂಧಿಕರೊಬ್ಬರು ಮಂಗಳೂರಿನಲ್ಲಿರುವ ಕಾರಣದಿಂದ ನಗರಕ್ಕೆ ಭೇಟಿ ನೀಡಿದ್ದರು.
ಡೇರಾ ಸಚ್ಚಾ ಸೌದಾ ಎಂಬ ಆಧ್ಯಾತ್ಮಿಕ ಪಂಥವನ್ನು ಮನ್ನಡೆಸಿಕೊಂಡು, ಹೊರ ದೇಶ ಹಾಗೂ ದೇಶದ 46 ಕಡೆಗಳಲ್ಲಿ ಶಾಖೆಗಳನ್ನು ಮಾಡಿ ಗುರ್ಮಿತ್‌ ರಾಂ ರಹೀಂ ಸಿಂಗ್‌ ಮಾನವೀಯ ಸಂದೇಶ ಗಳನ್ನು ಸಾರುತ್ತ ಬಂದಿದ್ದರು. ಇದ ರನ್ವಯ ಗುರ್ಮಿತ್‌ ಅವರ ಅನುಯಾಯಿಗಳು ಮಂಗ ಳೂರಿನಲ್ಲಿ ಪ್ರವಚನ ಆಯೋ ಜಿಸಿದ್ದರು.

ಭಾರೀ ಜನಾಕರ್ಷಣೆ
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮೊದಲ ದಿನ ಆಯೋ ಜಿಸಿದ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್‌ ಪಹರೆಯ ಮಧ್ಯೆ ಗುರ್ಮಿತ್‌ ಸಿಂಗ್‌ ಆಗಮಿಸಿದ್ದರು. ಸ್ಥಳೀಯ ಪೊಲೀಸರ ಜತೆಗೆ ಗುರ್ಮಿತ್‌ ಅವರ ಖಾಸಗಿ ಅಂಗರಕ್ಷರೂ ಜತೆಯಲ್ಲಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರ ಕ್ಕಿಂತಲೂ ಮಿಕ್ಕಿ ಜನ ಭಾಗವಹಿಸಿದ್ದರು. ಗುರ್ಮಿತ್‌ ಸಿಂಗ್‌ ವೇದಿಕೆಗೆ ಬರು ತ್ತಿದ್ದಂತೆ ಕರತಾಡನ, ಶಿಳ್ಳೆಗಳ ಮೂಲಕ ಜನರು ಸ್ವಾಗತಿಸಿದರು. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್ಖ್, ಧರ್ಮಗಳ ಸಾರವನ್ನು ಪ್ರಸ್ತಾವಿಸುವ ಮೂಲಕ ಗುರ್ಮಿತ್‌ ಸಿಂಗ್‌ ಸೇರಿದ್ದ ಜನರನ್ನು ಆಕರ್ಷಿತರನ್ನಾಗಿಸಿದ್ದರು. ಮಾನ ವೀಯ ಸಂದೇಶಗಳನ್ನು ಈ ಸಭೆ ಯಲ್ಲಿ ನೀಡಿದ್ದರು. ಗುರ್ಮಿತ್‌ ಹಿಂದಿ ಸಂದೇಶ ವನ್ನು ಮಂಗಳೂರಿನಲ್ಲಿ ಉಪನ್ಯಾಸಕರಾಗಿದ್ದ ಬೈಕಾಡಿ ಜನಾರ್ದನ ಆಚಾರ್‌ ಅವರು ಭಾಷಾಂತರಿಸಿದ್ದರು.

ಮರುದಿನ ಸಂಜೆ ಸುರತ್ಕಲ್‌ ಮೈದಾನದಲ್ಲಿ ಗುರ್ಮಿತ್‌ ಸಿಂಗ್‌ ಪ್ರವಚನ ಆಯೋಜನೆಗೊಂಡಿತ್ತು. ಕರಾವಳಿ ಹಾಗೂ ಹೊರರಾಜ್ಯದ ಗುರ್ಮಿತ್‌ ಅನುಯಾಯಿಗಳು ಈ ಕಾರ್ಯ ಕ್ರಮವನ್ನು ಸಂಘಟಿಸಿದ್ದರು. ಇಲ್ಲೂ ಸಾವಿರಾರು ಭಕ್ತರು ಕರಾವಳಿ ಹಾಗೂ ಬೇರೆ ಬೇರೆ ಊರಿನಿಂದ ಆಗಮಿಸಿದ್ದರು. ಎಲ್ಲ ಧರ್ಮಗಳ ಮಾನ ವೀಯ ಅಂಶಗಳನ್ನು ಆಯ್ಕೆ ಮಾಡಿ, ಭಾಷಣದಲ್ಲಿ ಪ್ರಸ್ತಾವ ಮಾಡಲಾಗಿತ್ತು.

ಮಂಗಳೂರು ಹಾಗೂ ಸುರತ್ಕಲ್‌ ಕಾರ್ಯಕ್ರಮ ಆದ ಬಳಿಕ ಮರುದಿನ ಮಡಿಕೇರಿ ಹಾಗೂ ಮೈಸೂರಿನಲ್ಲಿ ಪ್ರವಚನ ಆಯೋಜಿಸಲಾಗಿತ್ತು. ಇದ ರಲ್ಲೂ ಬೈಕಾಡಿ ಅವರು ಭಾಷಾಂತರ ಮಾಡಲು ಸಹಕರಿಸಿದ್ದರು.

ಮಾಲ್‌ ಸುತ್ತಾಡಿದ್ದ  ಗುರ್ಮಿತ್‌ ಸಿಂಗ್‌!
ಆಧ್ಯಾತ್ಮಿಕ ಸಾಧನೆ ಮಾಡಿದ ಗುರ್ಮಿತ್‌ ಸಿಂಗ್‌ ತನ್ನ ಐಷಾರಾಮಿ ಜೀವನದ ಮೂಲಕವೇ ಗುರುತಿಸಿಕೊಂಡವರು. ಸಿನೆಮಾ, ಮಾಲ್‌, ಕಾರು, ಬೈಕ್‌ಗಳ ಶೋಕಿ ಸೇರಿ ದಂತೆ ಬಗೆ ಬಗೆಯ ಅವತಾರಗಳ ಮೂಲಕ ವಿಜೃಂಭಿಸಿ ಸುದ್ದಿಯಲ್ಲಿದ್ದರು. ಕರಾ ವಳಿ ಭಾಗ ದಲ್ಲಿ ಪ್ರವಚನ ನೀಡುವ ಆಶಯ ದಿಂದ ಮಂಗಳೂರಿಗೆ ಆಗಮಿಸಿದ ಗುರ್ಮಿತ್‌ ಇಲ್ಲಿನ ಮಾಲ್‌ ಗಳಿಗೆ ಭೇಟಿ ನೀಡು  ವು ದನ್ನು ಮರೆಯ ಲಿಲ್ಲ. ತನ್ನ ಬೆಂಬಲಿಗರ ಸುಮಾರು 10ಕ್ಕೂ ಅಧಿಕ ಐಷಾರಾಮಿ ಕಾರುಗಳ ಜತೆಗೆ ಮಂಗಳೂರು ಸುತ್ತಾಡಿ, ಮಾಲ್‌ಗೆ ಭೇಟಿ ನೀಡಿದ್ದರು. ಗುರ್ಮಿತ್‌ ಆಗಮನದ ಹಿನ್ನೆಲೆಯಲ್ಲಿ ಮಾಲ್‌ನಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್ ಮಾಡ ಲಾಗಿತ್ತು ಹಾಗೂ ಅಲ್ಲಿದ್ದ ಜನರನ್ನು ತೆರವುಗೊಳಿಸಲಾಗಿತ್ತು.

–  ದಿನೇಶ್‌ ಇರಾ

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.