ಎರಡೂವರೆ ತಿಂಗಳಲ್ಲಿ ಪೆಟ್ರೋಲ್ ದರ 6 ರೂ. ಏರಿಕೆ
Team Udayavani, Aug 28, 2017, 10:00 AM IST
ಬೆಂಗಳೂರು: ಪೆಟ್ರೋಲ್- ಡೀಸೆಲ್ ದರ ಪ್ರತಿ ದಿನ ಮುಂಜಾನೆ 6 ಗಂಟೆಗೆ ಪರಿಷ್ಕರಣೆಯಾಗುವ ವ್ಯವಸ್ಥೆ ಜಾರಿಯಾಗಿ ಎರಡೂವರೆ ತಿಂಗಳಲ್ಲಿ ಪೆಟ್ರೋಲ್ ದರ ಆರು ರೂ., ಡೀಸೆಲ್ ದರ ಸುಮಾರು 3.47 ರೂ. ಏರಿಕೆಯಾಗಿದ್ದು, ಸದ್ದಿಲ್ಲದೆ ಗ್ರಾಹಕರ ಮೇಲೆ ಹೊರೆ ಬೀಳುತ್ತಿದೆ.
ರಾಜ್ಯದಲ್ಲಿ ಪೆಟ್ರೋಲ್ ದರ ಸದ್ಯ 70.81 ರೂ. ಹಾಗೂ ಡೀಸೆಲ್ ದರ 57.66 ರೂ. ಇದೆ. ದಿಲ್ಲಿಯಲ್ಲಿ ಪೆಟ್ರೋಲ್ ದರ 69.04 ರೂ. ಹಾಗೂ ಡೀಸೆಲ್ ದರ 57.03ರಷ್ಟಿದ್ದು, ನಾಲ್ಕು ತಿಂಗಳಲ್ಲೇ ಅತೀ ಹೆಚ್ಚು ದರ ಎಂಬುದು ಅಂಕಿಸಂಖ್ಯೆಯಿಂದ ಗೊತ್ತಾಗಿದೆ. ದಿಲ್ಲಿಯಲ್ಲಿ 2014ರ ಆಗಸ್ಟ್ ನಲ್ಲಿ ಪೆಟ್ರೋಲ್ ದರ 70.33 ರೂ.ಗೆ ಏರಿಕೆಯಾಗಿದ್ದನ್ನು ಹೊರತುಪಡಿಸಿದರೆ ಅನಂತರದ ಅವಧಿಯಲ್ಲಿ ಸದ್ಯ 69.04 ರೂ.ಗೆ ಏರಿಕೆಯಾಗಿದೆ.
ಪ್ರತಿ ತಿಂಗಳ 1 ಹಾಗೂ 16ರಂದು ಎರಡು ಬಾರಿ ದರ ಪರಿಷ್ಕರಣೆಯಾಗುವ ವ್ಯವಸ್ಥೆ 15 ವರ್ಷಗಳಿಂದ ಜಾರಿಯಲ್ಲಿತ್ತು. ಆದರೆ ಕೇಂದ್ರ ಸರಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಪ್ರತಿನಿತ್ಯ ಪರಿಷ್ಕರಣೆ ಮಾಡುವ ವ್ಯವಸ್ಥೆಯನ್ನು 2017ರ ಜೂ. 16ರಿಂದ ಜಾರಿಗೊಳಿಸಿತು. ಅನಂತರದ ಅವಧಿಯಲ್ಲಿ ಪೆಟ್ರೋಲ್ ದರ 6 ರೂ. ಏರಿಕೆಯಾಗಿದೆ. ಹೊಸ ವ್ಯವಸ್ಥೆ ಜಾರಿಯಾದ ಆರಂಭದ 15 ದಿನ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಹೊರತುಪಡಿಸಿದರೆ ಜು. 3ರಿಂದ ನಿರಂತರವಾಗಿ ಏರಿಕೆಯಾಗಿರುವುದರಿಂದ ಭಾರೀ ಏರಿಕೆ ಕಂಡುಬಂದಿದೆ.
ಹಿಂದೆಲ್ಲ ಒಂದು ಲೀಟರ್ ಪೆಟ್ರೋಲ್, ಡೀಸೆಲ್ ದರ 2 ಅಥವಾ 3 ರೂ. ಏರಿಕೆಯಾದರೆ ಎಲ್ಲರ ಗಮನಕ್ಕೂ ಬಂದು ಆಕ್ಷೇಪ ವ್ಯಕ್ತವಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ನಿತ್ಯ 1ರಿಂದ 15 ಪೈಸೆ ಏರಿಕೆಯಾಗುತ್ತಿದ್ದಂತೆ ಕ್ರಮೇಣ ಬೆಲೆ ಹೆಚ್ಚಳವಾದರೂ ಬಹುತೇಕ ಮಂದಿಯ ಗಮನಕ್ಕೆ ಬರುವುದಿಲ್ಲ ಎಂದು ತೈಲ ಕಂಪೆನಿಯೊಂದರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೊಂದೆಡೆ ಹೆಚ್ಚಿನವರು 50, 100, 200 ರೂ. ಮೌಲ್ಯದ ಇಂಧನವನ್ನು ವಾಹನಗಳಿಗೆ ತುಂಬಿಸುತ್ತಿರುವುದರಿಂದ ಲೀಟರ್‌ನ ದರ ಏರಿಕೆಯು ಅರಿವಿಗೆ ಬರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.