ಗಣೇಶೋತವ ಸಂಭ್ರಮಕ್ಕೆ ವರುಣನ ಸಾಥ್!
Team Udayavani, Aug 28, 2017, 11:55 AM IST
ವಿಜಯಪುರ: ಭೀಕರ ಬರದಿಂದ ತತ್ತರಿಸಿರುವ ಬಿಸಿಲನಾಡು ವಿಜಯಪುರ ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ ಪರಿಣಾಮ ಮಳೆನಾಡಾಗಿ ಪರಿವರ್ತನೆಗೊಂಡ ಅನುಭವ ನೀಡುತ್ತಿದೆ. ಇದರಿಂದ ಕಳೆ ಕಳೆದುಕೊಂಡು ಸುಕ್ಕುಗಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗಣೇಶ ಹಬ್ಬ ಎಂದರೆ ಮಳೆಯ ದರ್ಶನ ಖಾತ್ರಿ ಎಂದು ನಂಬಿಕೆ ಈ ಬಾರಿ ಉತ್ತಮವಾಗಿ ಸುರಿಯುತ್ತಿರುವ ಮಳೆ ಸಾಬೀತು ಮಾಡಿದೆ. ಸಮೃದ್ಧಿಯ ಪೂಜೆ, ನೈವೇದ್ಯ ಮಾಡಿದ ಭಕ್ತರಿಗೆ ಉತ್ತಮವಾಗಲೆಂದು ಮಳೆ ಸುರಿಸಿದ್ದಾನೆ ಎಂಬ ನಂಬಿಕೆಯ ಮಾತುಗಳು ದೈವಿ ಭಕ್ತರಿಂದ ಕೇಳಿ ಬರುತ್ತಿದೆ. ಜಿಲ್ಲೆಯ ಬಹುತೇಕ ಎಲ್ಲೆಡೆ ಕಳೆದ ಮೂರು-ನಾಲ್ಕು
ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಒಮ್ಮೆ ಅಬ್ಬರಿಸಿ, ಮತ್ತೂಮ್ಮೆ ಬೊಬ್ಬಿರಿದು, ಮತ್ತೂಮ್ಮೆ ಸಮಾಧಾನವಾಗಿ,
ಮಗದೊಮ್ಮೆ ಮಂದಹಾಸಿಯಂತೆ ತುಂತುರಾಗಿ ಬಹುರೂಪಿಯಾಗಿ ಬಸವನಾಡಿನಲ್ಲಿ ವಿವಿಧ ರೀತಿಯಲ್ಲಿ ದರ್ಶನ ನೀಡುತ್ತಿದೆ. ಇದರಿಂದ ರೈತರು ಸಂತಸಗೊಂಡಿದ್ದು ಉಳುಮೆಗೆ ಸಿದ್ಧಪಡಿಸಿಕೊಂಡಿರುವ ಜಮೀನುಗಳಲ್ಲಿ ಹಿಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಇತ್ತ ಕಾಣೆಯಾಗಿದ್ದ ಮಳೆಯಿಂದಾಗಿ ಮನೆಯ ಮೂಲೆಯಲ್ಲಿ ಮಡಚಿಕೊಂಡು ಮಲಗಿದ್ದ ಛತ್ರಿಗಳೆಲ್ಲ ಗರಿ ಬಿಚ್ಚಿಕೊಂಡು, ಧೂಳು ಕೊಡವಿಕೊಂಡು ಹೊರಬಂದಿವೆ. ಆಕಾಶಕ್ಕೆ ಮುಖ ಮಾಡಿ ಹಿಡಿಕೆ ಹಿಡಿದವರಿಗೆ ಮಳೆ ಹನಿ ನೀರು ಸಿಡಿಯದಂತೆ ರಕ್ಷಣೆ ನೀಡುತ್ತಿರುವ ಛತ್ರಿಗಳಿಗೆ ಮಾರುಕಟ್ಟೆಯಲ್ಲೂ ಭಾರಿ ಬೇಡಿಕೆ ಬಂದಿದೆ. ಮಳೆ ಕಾರಣದಿಂದಾಗಿ ನಗರದ ಮುಖ್ಯ ಹಾಗೂ ಪ್ರಮುಖ ಬಡಾವಣೆಗಳ ರಸ್ತೆಗಳೆಲ್ಲ ನೀರಿನಿಂದ ಆವರಿಸಿಕೊಂಡಿವೆ. ಪರಿಣಾಮ ಬೀದಿಬದಿ ವ್ಯಾಪಾರಕ್ಕೆ ಕೊಕ್ಕೆ ಬಿದ್ದಿದ್ದು, ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿದ್ದ
ವಾರದ ಸಂತೆಗಳೂ ಸಂಕಷ್ಟ ಅನುಭವಿಸುವಂತಾಗಿದೆ. ತರಕಾರಿ ವ್ಯಾಪಾರಿಗಳು ಮಳೆಯಿಂದಾಗಿ ಕೊಂಡು ತಂದು ಮಾರಲು ಮಾರುಕಟ್ಟೆಗೆ ಬಂದರೂ ಕೊಳ್ಳುವವರಿಲ್ಲದೇ ಪರದಾಡುವಂತಾಗಿದೆ. ಮಳೆಯ ಹನಿ ಪ್ರತ್ಯಕ್ಷವಾಗುತ್ತಲೇ ಸಿಕ್ಕ ಬೆಲೆಗೆ ತರಕಾರಿ ಮಾರಿಕೊಂಡು ನಷ್ಟನುಭವಿಸುತ್ತಿದ್ದಾರೆ. ಆದರೆ ಮಳೆಯಾದರೂ ಆಗಲಿ, ಬಿಡಿ ಎಂದು ತಮ್ಮ ನಷ್ಟದಲ್ಲೂ ಸಂತೃಪ್ತಿ ಭಾವ ವ್ಯಕ್ತಪಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.