ಕರ್ನಾಟಕದ ಕಬ್ಬಿಣದದಿರು ಇ-ಹರಾಜು ರದ್ದತಿಗೆ ಸುಪ್ರೀಂ ನಕಾರ
Team Udayavani, Aug 28, 2017, 12:17 PM IST
ಹೊಸದಿಲ್ಲಿ : ಕರ್ನಾಟಕದ ಕಬ್ಬಿಣದ ಅದಿರು ಇ-ಹರಾಜನ್ನು ರದ್ದು ಗೊಳಿಸುವಂತೆ ಕೋರಿ ಭಾರತೀಯ ಖನಿಜ ಕೈಗಾರಿಕೆ ಒಕ್ಕೂಟ (FIMI) ಮತ್ತು ವೇದಾಂತ ಕಂಪೆನಿಯು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಸೋಮವಾರ ನೀಡಿದ ತೀರ್ಪಿನಲ್ಲಿ ತಿರಸ್ಕರಿಸಿದೆ.
ಅರ್ಜಿದಾರರ ಸಲಹೆ ನಮಗೆ ಸ್ವೀಕಾರಾರ್ಹವಾಗಿಲ್ಲ ಎಂದು ಜಸ್ಟಿಸ್ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠವು ಹೇಳಿದೆ.
2016ರ ತನ್ನ ವರದಿಯಲ್ಲಿ ಕೇಂದ್ರ ದತ್ತಾಧಿಕಾರ ಸಮಿತಿಯು ನೀಡಿದ್ದ ಸಲಹೆಯನ್ನು ಆಧರಿಸಿ ಇ-ಹರಾಜಿಗೆ ಬದಲು ಉತ್ಪಾದಕರು ಮತ್ತು ಪೂರೈಕೆದಾರರ ನಡುವೆ ದೀರ್ಘಾವಧಿಯ ಒಪ್ಪಂದ ಏರ್ಪಡುವುದೇ ಉತ್ತಮ ಎಂದು ಫಿಮಿ ಮತ್ತು ವೇದಾಂತ ಕಂಪೆನಿ ತಮ್ಮ ಅರ್ಜಿಯಲ್ಲಿ ಮಂಡಿಸಿದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.