ಅಭಿನಯದ ಮಧ್ಯೆ ಮಧ್ಯೆ ಕಸರತ್ತು
Team Udayavani, Aug 28, 2017, 2:42 PM IST
ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸತತವಾಗಿ ನಡೆಯುತ್ತಿದೆ. ಚಿತ್ರದ ಪ್ರಮುಖ ದೃಶ್ಯಗಳನ್ನು ನಿರ್ದೇಶಕ ನಾಗಣ್ಣ ಅವರು ತಮ್ಮ ತಂಡದೊಂದಿಗೆ ಸೆರೆಹಿಡಿಯುವುದರಲ್ಲಿ ಬಿಝಿಯಾಗಿದ್ದಾರೆ. ಚಿತ್ರದ ಪ್ರಮುಖ ಕಲಾವಿದರ ಅಭಿನಯದ ಹಲವು ದೃಶ್ಯಗಳ ಚಿತ್ರೀಕರಣ ನಡೆಯುತ್ತಲೇ ಇದೆ.
ಈ ಮಧ್ಯೆ ಕೆಲವು ಪ್ರಮುಖ ಕಲಾವಿದರು ಅಭಿನಯದ ಮಧ್ಯೆ ಮಧ್ಯೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ದುರ್ಯೋಧನ ಪಾತ್ರ ನಿರ್ವಹಿಸುತ್ತಿರುವ ದರ್ಶನ್, ಭೀಮನ ಪಾತ್ರ ಮಾಡುತ್ತಿರುವ ದಾನಿಶ್ ಅಖ್ತರ್ ಸೈಫಿ, ಅರ್ಜುನನ ಪಾತ್ರ ಮಾಡುತ್ತಿರುವ ಸೋನು ಸೂದ್, ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅರ್ಜುನ್ ಸರ್ಜಾ, ದುಶ್ಯಾಸನನಾಗಿ ಅಭಿನಯಿಸುತ್ತಿರುವ ರವಿಚೇತನ್ ಮುಂತಾದವರು ತೆರೆಯ ಮೇಲೆ ಕಟ್ಟುಮಸ್ತಾಗಿ ಕಾಣಿಸಿಕೊಳ್ಳಬೇಕೆಂದು ಕಸರತ್ತು ನಡೆಸುವುದರ ಜೊತೆಗೆ ಸತತವಾಗಿ ಬೆವರು ಹರಿಸುತ್ತಿದ್ದಾರೆ.
ಇನ್ನು ದರ್ಶನ್ ಸೇರಿದಂತೆ ಎಲ್ಲಾ ಕಲಾವಿದರು ಸಹ ಮೀಸೆ ತೆಗೆದಿದ್ದಾರೆ. ಸೋಮವಾರದಿಂದ ಚಿತ್ರತಂಡವನ್ನು ರವಿಚಂದ್ರನ್ ಸೇರಿಕೊಂಡಿದ್ದು, ಅವರು ಸಹ ಮೀಸೆ ತೆಗೆಯುವುದರ ಜೊತೆಗೆ ಸಾಕಷ್ಟು ತೂಕವನ್ನು ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ಅವರು ಇದೇ ಮೊದಲ ಬಾರಿಗೆ ಪೌರಾಣಿಕ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರು ತೆರೆಯ ಮೇಲೆ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
“ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್, ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಸಾಯಿಕುಮಾರ್, ಶಶಿಕುಮಾರ್, ರವಿಶಂಕರ್, ಶ್ರೀನಾಥ್, ಜಿ.ಕೆ. ಶ್ರೀನಿವಾಸಮೂರ್ತಿ, ಲಕ್ಷ್ಮೀ, ಸ್ನೇಹ, ಹರಿಪ್ರಿಯಾ, ನಿಖೀಲ್ ಕುಮಾರ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.
ಚಿತ್ರಕ್ಕೆ ಹೆಸರಾಂತ ತಂತ್ರಜ್ಞರ ತಂಡವನ್ನು ಕಲೆ ಹಾಕಲಾಗಿದ್ದು, ಜಯನನ್ ವಿನ್ಸೆಂಟ್ ಛಾಯಾಗ್ರಹಣ, “ಕಿಂಗ್ ಸಾಲೋಮನ್’ ರವಿ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಜಿ.ಕೆ. ಭಾರವಿ ಅವರು ಚಿತ್ರಕಥೆಯನ್ನು ರಚಿಸಿದ್ದು, ಯೋಜನಾ ನಿರ್ದೇಶಕರಾಗಿ ಜಯಶ್ರೀದೇವಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಹಿರಿಯ ನಿರ್ದೇಶಕ ನಾಗಣ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.