ಬಸವಣ್ಣನ ಮಾನವ ಧರ್ಮ ನಮ್ಮದಾಗಲಿ


Team Udayavani, Aug 28, 2017, 4:10 PM IST

bell 1.jpg

ಬಳ್ಳಾರಿ: ಪ್ರಸ್ತುತ ಸಮಾಜದಲ್ಲಿ ದೇವ ಮಾನವರೆಂದು ಕರೆಸಿಕೊಂಡವರ ಆಟಾಟೋಪಗಳ ನಡುವೆ ಬಸವಣ್ಣ ಹೇಳಿದ ಮಾನವ ಧರ್ಮ ನಮ್ಮದಾಗಬೇಕು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಹೇಳಿದರು. ನಗರದ ಹೊರವಲಯದ ಅಲ್ಲೀಪುರ
ಶ್ರೀ ಸದ್ಗುರು ಮಹಾದೇವ ತಾತನವರ ಟ್ರಸ್ಟ್‌ ಸಮಿತಿ, ಮೂಲಮಠ ಜ್ಞಾನ ರಂಭಾಪುರಿ ಶಿವ ಕ್ಷೇತ್ರದಲ್ಲಿ ಭಾನುವಾರ 63 ಪುರಾತನರ ದೇಗುಲ ಹಾಗೂ ಬಸವಣ್ಣನ ಶಿಲಾಮಯ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು. ನಮಗೆ ದೇವ ಮಾನವರು ಬೇಕಾಗಿಲ್ಲ. ಆದರೆ ಮಾನವ ದೇವರು ಬೇಕು. ಜಗಜ್ಯೋತಿ ಬಸವಣ್ಣ ಒಂದು ಜಾತಿ, ಮತ, ಪಂಥ ಹಾಗೂ ಧರ್ಮಗಳಿಗೆ ಸೀಮಿತರಲ್ಲ. ಅವರೊಬ್ಬ ವಿಶ್ವಮಾನವ. ಅವರನ್ನು ಒಂದು ಸೀಮಿತ ಜನಾಂಗಕ್ಕೆ  ಸಲಾಗಿಸೋದು ಬಸವಣ್ಣನ ವಿಶ್ವ ಮಾನವ ತತ್ವಗಳಿಗೆ ನಾವು ಮಾಡುವ ಅಪಚಾರ ಎಂದರು. ಬಸವಣ್ಣ ಇವನ್ಯಾರು ಇವನ್ಯಾರು ಎಂದು ಪ್ರಶ್ನಿಸದೇ ಇವ ನಮ್ಮವ, ಇವ ನಮ್ಮವ ಎಂದವರು. ಆದರೆ, ಇತ್ತೀಚೆಗೆ ಈ ತತ್ವಗಳಿಂದ ಕೆಲವರು ದೂರಾಗುತ್ತಿದ್ದಾರೆ. ಎಲ್ಲರಲ್ಲಿ ಇರುವ ಮಾನವೀಯ ಮೌಲ್ಯಗಳಲ್ಲಿ ಬಸವಣ್ಣನನ್ನು ಕಾಣಬೇಕು ಎಂದು ಹೇಳಿದರು. ಬಸವಣ್ಣನ ಕುರಿತು ಜರುಗುತ್ತಿರುವ ಸಂಘಟನೆಗಳನ್ನು ನಮ್ಮ ಆತ್ಮಸಾಕ್ಷಿಯ ನೆಲೆಗಟ್ಟಿನಲ್ಲಿ ಪರಿಶೀಲಿಸಬೇಕು. ಬಸವಣ್ಣನ ಅನುಯಾಯಿಗಳು ಬಸವೇಶ್ವರರ ವಿಚಾರಧಾರೆ ಅಳವಡಿಸಿಕೊಳ್ಳಬೇಕು. ಲಿಂಗಾಯತ ಒಂದು ಸೀಮಿತ ಜಾತಿ, ಜನಾಂಗಕ್ಕೆ ಸೇರಿದ ಧರ್ಮ ಆಗಬಾರದು. ಅದು ಸರ್ವ ಧರ್ಮೀಯರ, ಜಾತಿ ಸಮುದಾಯದ ಶಾಂತಿಯ ತೋಟ
ಆಗಬೇಕು ಎಂದರು. ಸಂಸ್ಕೃತ ನಮ್ಮ ದೇಶದ ದೇವ ಭಾಷೆ ಎನಿಸಿದೆ. ಆದರೆ, ಅದು ಜನರ ಭಾಷೆ ಆಗಲಿಲ್ಲ. ಆದ್ದರಿಂದ ಅದು ಅವಸಾನದ ಅಂಚಿನತ್ತ ಸಾಗುತ್ತಿದೆ. ಆದರೆ, ಬಸವಣ್ಣ ಆಡು ಭಾಷೆಯನ್ನೇ ದೇವ ಭಾಷೆಯನ್ನಾಗಿಸಿದ. ಜನವಾಣಿಯನ್ನೇ ದೇವವಾಣಿಯನ್ನಾಗಿಸಿದ ಮಹಾಪುರುಷ ಎಂದರು. ಎಲ್ಲ ಜಾತಿ, ಜನಾಂಗದ ಜನರ ನಡುವೆ ಸಮಾನತೆ, ಸತ್ಯ-ಶುದ್ಧವಾದ ಕಾಯಕ ಹಾಗೂ ಸನ್ನಡತೆ ಸಾರಿದ ಮಹಾನುಭಾವ ಬಸವಣ್ಣ. ಅಂಥವರ ಮೂರ್ತಿ ಅನಾವರಣಗೊಳಿಸಿದರೆ ಸಾಲದು. ಅವರ ಕಾಯಕ ತತ್ವ, ನಡೆ, ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗಮಾತ್ರ ಬಸವಣ್ಣ ಕಂಡ ಆದರ್ಶ ಸಮಾಜದ ಪರಿಕಲ್ಪನೆ ಸಾಕಾರವಾಗುತ್ತದೆ ಎಂದರು. ನಮ್ಮ ದೇಶದಲ್ಲಿ ಸಾವಿರಾರು ಪುಣ್ಯ ಪುರುಷರು ನಡೆದಾಡಿದ್ದಾರೆ. ಅಪಾರ ಪ್ರಮಾಣದಲ್ಲಿ ದೇವಸ್ಥಾನಗಳು ನಮ್ಮ ನಡುವೆ ಇವೆ. ಆದರೆ, ಬಹುತೇಕ ದೇವಸ್ಥಾನಗಳು ದೇವತಾರ್ಚನೆಗೆ ಸೀಮಿತವಾಗಿವೆ. ಅದಕ್ಕಿಂತ ಹೆಚ್ಚಾಗಿ ದೇವಾಲಯಗಳು ಜ್ಞಾನ ಪ್ರಸಾರ ಮಾಡುವ, ಮಾನವೀಯ ಅನುಕಂಪ, ಪರೋಪಕಾರ ಭಾವನೆ ಬೆಳೆಸುವ ಕಾರ್ಯ ಮಾಡಬೇಕು. ಅದೇ ನಾವು ಸಲ್ಲಿಸಬಹುದಾದ ಮಹಾಪೂಜೆ ಎಂದು ಹೇಳಿದರು. ಉತ್ತಮ ಕಾರ್ಯ ಮಾಡುವವರಿಗೆ 365 ದಿನಗಳೂ ಒಳ್ಳೆಯ ದಿನಗಳು. ಮುಹೂರ್ತಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವ ಮನಸ್ಥಿತಿ ಬದಲಾಗಬೇಕು. ಆಗ ಮಾತ್ರ ಮೌಡ್ಯ ಮತ್ತು ಕಂದಾಚಾರ ಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ. ನಾವು ಭಾಷಣ ಮತ್ತು ಘೋಷಣೆ ಮಾಡುವುದನ್ನು ಕಡಿಮೆ ಮಾಡಬೇಕು. ಆಚಾರ, ಅನುಷ್ಠಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಬಳ್ಳಾರಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾ ಧೀಶ ಎಚ್‌.ಆರ್‌. ಶ್ರೀನಿವಾಸ ಮಾತನಾಡಿ, ಒಂದು ಮಠದ ಆಡಳಿತದಲ್ಲಿ ಸಂಘಟನೆ ಇರಬೇಕು. ಆಗ ಆ ಮಠದ ಧ್ಯೇಯ ಸಾ ಧಿಸಲು, ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ. ಒಂದು ವೇಳೆ ಒಡಕಾದರೆ ಆಶಯ ವ್ಯರ್ಥವಾಗುವುದು. ನ್ಯಾ| ಶಿವರಾಜ್‌ ಪಾಟೀಲ್‌ ಅವರ ಸಲಹೆಗಳನ್ನು ಪಡೆದು ಮಹಾದೇವ ತಾತನವರ ಮಠವನ್ನು ರಾಜ್ಯದಲ್ಲಿಯೇ ಮಾದರಿ
ಮಠವನ್ನಾಗಿಸಬೇಕು ಎಂದರು. ಕೃತಿ ಲೋಕಾರ್ಪಣೆ: ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ರಚಿಸಿದ ಅರವತ್ತಮೂರು ಪುರಾತನರು ಎಂಬ ಕೃತಿಯನ್ನು ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ವಚನ ಶಿರೋಮಣಿ ಬಸವಣ್ಣ ಕಿರುಕೃತಿಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧಿಧೀಶ ಎಚ್‌.ಆರ್‌. ಶ್ರೀನಿವಾಸ ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ 63 ಪುರಾತನರ ಹಾಗೂ ಬಸವಣ್ಣನ ವಿಗ್ರಹ ದಾನಿಗಳಾದ ಸಂಗನಕಲ್ಲು ಬಸವರಾಜ ದಂಪತಿಯನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಎಸ್‌. ಚೆನ್ನನಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

1-qewqe

Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ

1-lokkk

Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

1-tallur

ತಲ್ಲೂರು: ಪಿಕಪ್‌- ಕಾರು ಢಿಕ್ಕಿ

1-gooli

Gangolli:ಅರ್ಧ ಗಂಟೆಗೂ ಹೆಚ್ಚು ಭೀತಿ ಮೂಡಿಸಿದ ಗೂಳಿ ಕಾಳಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.