ನಗರಸಭೆ ಆಸ್ತಿ ಪಟ್ಟಿ ಸಿದ್ಧಪಡಿಸಿ ಕ್ರಮ: ಪೌರಾಯುಕ್ತ ರಮೇಶ್
Team Udayavani, Aug 28, 2017, 4:20 PM IST
ಹೊಸಪೇಟೆ: ನಗರಸಭೆ ಆಸ್ತಿಪಾಸ್ತಿ ಎಷ್ಟು ಹಾಗೂ ಎಲ್ಲಲ್ಲಿದೆ ಎಂಬುದರ ಕುರಿತು 15 ದಿನಗಳಲ್ಲಿ ಪಟ್ಟಿ ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ರಮೇಶ ಹೇಳಿದರು. ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಿಲ್ಕಲೆಕ್ಟರ್, ಆರ್ಐ, ಇಂಜಿನಿಯರ್ ಸೇರಿ ಇತರೆ ಅಧಿಕಾರಿಗಳ ಸಮಿತಿಯನ್ನು ರಚಿಸಿ, ನಗರದಲ್ಲಿರುವ 52 ಪಾರ್ಕ್ಗಳು ಸೇರಿದಂತೆ ಇತರೆ ನಗರಸಭೆಯ ಆಸ್ತಿಗಳು ಎಲ್ಲೆಲ್ಲಿ ಇವೆ ಎನ್ನುವುದರ ಪಟ್ಟಿ ಸಿದ್ಧಪಡಿಸಲಾಗುವುದು. ಅತೀ ಶೀಘ್ರದಲ್ಲೇ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಗರಸಭೆಯ ಆಸ್ತಿಯ ವಿವರಗಳನ್ನು ಪಟ್ಟಿ ಮಾಡಿಕೊಡುತ್ತಾರೆ. ಈ ಕುರಿತು ಆಯಾ ವಾರ್ಡ್ನ ಬಿಲ್ಕಲೆಕ್ಟರ್, ಆರ್.ಐ.ಇಂಜಿನಿಯರ್ ಸೇರಿದಂತೆ ಇತರೆ ಅಧಿಕಾರಿಗಳ ಸಮಿತಿಯನ್ನು ರಚಿಸಿ, ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗುತ್ತದೆ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು. ನಗರಸಭಾ ಸದಸ್ಯರಾದ ಚಂದ್ರಕಾಂತ್ ಕಾಮತ್ ಮತ್ತು ಎಂ. ಎಸ್. ರಘು ಮಾತನಾಡಿ, ನಗರದ ಅನೇಕ ಪಾರ್ಕ್ಗಳು ಒತ್ತುವರಿಯಾಗುತ್ತಿವೆ. ಪಾರ್ಕುಗಳು ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಬೇಕು. ಒತ್ತುವರಿಯಾಗದಂತೆ ನಗರಸಭೆಯವರು ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ನಗರಸಭಾ ಸದಸ್ಯ ಅಂಜಿನಿ ಮಾತನಾಡಿ, ನಗರದಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗಿವೆ. ನಗರಸಭೆಯಿಂದ ಮುಂಜಾಗ್ರತ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಪೌರಾಯುಕ್ತ ರಮೇಶ್ ಮಾತನಾಡಿ, ಈಗಿರುವ -ಫಾಂಗಿಗ್ ಮಿಷನ್ ಗಳ ಜೊತೆಗೆ ಮತ್ತೆ ಎರಡು ಹೊಸ -ಫಾಗಿಂಗ್
ಮಿಷನ್ಗಳನ್ನು ತರಲಾಗಿದೆ. ನಗರದ ವಾರ್ಡ್ಗಳಲ್ಲಿ -ಫಾಗಿಂಗ್ ಹೊಡಿಸಲಾಗುತ್ತಿದೆ ಎಂದು ಉತ್ತರಿಸಿದರು. ನಗರದ ಕೆಲ ವಾರ್ಡ್ಗಳಿಗೆ ಮಾತ್ರ ಹೆಚ್ಚಿನ ಅನುದಾನ ವಿತರಣೆಯಾಗಿದೆ. ಉಳಿದ ಬಹುತೇಕ ವಾರ್ಡ್ಗಳಿಗೆ ಅನುದಾನ ತಾರತಮ್ಯವಾಗಿ ಹಂಚಿಕೆ ಮಾಡಿದ್ದಾರೆ. ಎಲ್ಲ ವಾರ್ಡ್ಗಳಿಗೂ ಸಮವಾಗಿ ಅನುದಾನ ಹಂಚಿಕೆ ಮಾಡಬೇಕು ಎಂದು ನಗರಸಭೆಯ ಸದಸ್ಯರಾದ ಗುಡಿಗಂಟಿ ಮಲ್ಲಿಕಾರ್ಜುನ, ಕೆ. ಬಡಾವಲಿ, ಗುಜ್ಜಲಿಂಗಪ್ಪ, ಬೆಲ್ಲದ್ ರೋಫ್, ಧನಲಕ್ಷ್ಮೀ,ಬಸವರಾಜ, ರಾಮಕೃಷ್ಣ, ಗೌಸ್, ಜಿ. ಕುಲ್ಲಾಯಪ್ಪ, ಅಂಜಿನಿ, ನೂ ಜಹಾನ್, ರಾಮಾಂಜಿನಿ ಸೇರಿದಂತೆ ಇತರೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ನಗರದ ಎಲ್ಲ ವಾರ್ಡ್ಗಳಲ್ಲಿಯೂ ಸಮಸ್ಯೆಗಳಿವೆ. ವರ್ಷಕ್ಕೆ ಒಂದು ಬಾರಿ ಅನುದಾನ ಬರುತ್ತದೆ. ಅನುದಾನ ಬಂದಾಗ ಎಲ್ಲ ವಾರ್ಡ್ಗಳಿಗೂ ಸಮನಾಗಿ ಹಂಚಿಕೆ ಮಾಡಬೇಕು. ಎಲ್ಲ ವಾರ್ಡ್ಗಳಲ್ಲಿಯೂ ಅಭಿವೃದ್ಧಿಯಾಗಬೇಕು. ಕೆಲ ವಾರ್ಡ್ಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಿದ್ದಾರೆ. ಉಳಿದ ವಾರ್ಡ್ಗಳಿಗೆ ಕಡಿಮೆ ಅನುದಾನ ನೀಡಿರುವುದು ಸರಿಯಲ್ಲ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಹಂದಿಗಳು, ಬೀದಿ ನಾಯಿಗಳು, ಬಿಡಾಡಿ ದನಗಳು ಹೆಚ್ಚಾಗಿವೆ. ಈ ಕುರಿತು ನಗರಸಭೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆ ಸದಸ್ಯರಾದ ಕೆ. ಗೌಸ್ ಮತ್ತು ವೇಣುಗೋಪಾಲ, ರೂಪೇಶ್ ಕುಮಾರ ಸೇರಿದಂತೆ ಇತರರು ಪ್ರಶ್ನಿಸಿದರು. ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮನಸ್ಸ್ ಹಮ್ಮದ್ ಮಾತನಾಡಿ, ಬಿಡಾಡಿ
ದನಗಳ ಮಾಲೀಕರಿಗೆ ನೋಟೀಸ್ ನೀಡಲು ಸೂಚಿಸಲಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡುವ ಬಗ್ಗೆ 2 ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಟೆಂಡರ್ದಾರರು ಯಾರೂ ಬಂದಿಲ್ಲ ಎಂದು ಉತ್ತರಿಸಿದರು. ಇದಕ್ಕೆ ರೂಪೇಶ್ ಕುಮಾರ್ ಮತ್ತುವೇಣುಗೋಪಾಲ್ ಧ್ವನಿಗೂಡಿಸಿ ಬೀದಿ ಯಿಗಳಿಗೆ ಶಸಚಿಕಿತ್ಸೆ ಮಾಡಿಸುವಂತೆ ಎರಡು ವರ್ಷಗಳ ಹಿಂದೆನೇ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಭೆಯಲ್ಲಿ ಚರ್ಚಿಸಿದ ವಿಷಯಗಳು ಜಾರಿಗೆ ತಂದಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.