ಜನಧನ ಯೋಜನೆಗೆ 3 ವರ್ಷ: ಪ್ರಧಾನಿ ಅಭಿನಂದನೆ
Team Udayavani, Aug 29, 2017, 7:25 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ತರ ಯೋಜನೆಗಳಲ್ಲೊಂದಾದ ಜನ ಧನ ಯೋಜನೆ ಜಾರಿಯಾಗಿ ಸೋಮ ವಾರಕ್ಕೆ ಮೂರು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
“ಇಂದು ಜನ ಧನ ಯೋಜನೆ 3 ವರ್ಷ ಮುಗಿಸಿದೆ. ನಾನು ಬಡವರನ್ನು ಅದರಲ್ಲೂ ಈ ಯೋಜನೆ ಲಾಭ ಪಡೆದವರನ್ನು ಅಭಿನಂದಿಸುತ್ತೇನೆ’ ಎಂದು ಅವರು ಟ್ವೀಟಿಸಿದ್ದಾರೆ. ದೇಶದ ಬಡವರ ಜೀವನದಲ್ಲಿ ಗುಣಾತ್ಮಕ ಮತ್ತು ಪರಿವರ್ತನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಇನ್ನಷ್ಟು ಹುರುಪಿನಿಂದ ನಡೆಯಲಿದೆ. ಜನಧನ, ಮುದ್ರಾ ಯೋಜನೆ, ಸ್ಟಾಂಡ್ ಅಪ್ ಇಂಡಿಯಾ ಯೋಜನೆಗಳ ಮೂಲಕ ದೇಶದ ಸಹಸ್ರಾರು ಮಂದಿಯ ಕನಸುಗಳಿಗೆ ರೆಕ್ಕೆ ಮೂಡಿದೆ ಎಂದಿದ್ದಾರೆ. ಕಡು ಬಡವರು ಮತ್ತು ತುಳಿತಕ್ಕೊಳಗಾದ ಜನರು ಆರ್ಥಿಕ ಮುಖ್ಯವಾಹಿನಿಗೆ ಬರುವಂತೆ ಜನಧನ ಯೋಜನೆ ಮಾಡಿದ್ದು ಐತಿಹಾಸಿಕ ಬೆಳವಣಿಗೆ. ಇದರಿಂದಾಗಿ ಅವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.